

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ವಿಜಯನಗರ ಜಿಲ್ಲೆಯಲ್ಲಿ 2024ರ ಕಳೆದ ದಿನಗಳು ಮಲಕು ಹಾಕಿ ನೋಡಿದರೆ, ಜನರು ಸಿಹಿ ಕಹಿ ಘಟನೆಗಳೊಂದಿಗೆ ಕೆಲವೇ ಗಂಟೆಗಳಲ್ಲಿ ಈ ವರ್ಷ ಕಳೆಯುತ್ತಿದ್ದಾರೆ.
2024ರ ಕೊನೆ ವಾರದಲ್ಲಿರುವ ನಾವುಗಳು ಜಿಲ್ಲೆಯಲ್ಲಿನ ಸಂಧರ್ಭ, ಸನ್ನಿವೇಶ, ಘಟನಾವಳಿಗಳನ್ನು ನೋಡುವುದಾದರೆ ಸಂಕ್ರಾAತಿಯ ನಂತರ ಫೆ.02ರಿಂದ ರಿಂದ ಮೂರು ದಿನಗಳ ಕಾಲ ಅದ್ದೂರಿ ಹಂಪಿ ಉತ್ಸವ ನಡೆಯಿತು. ಮೈಲಾರ ಕಾರ್ಣಿಕೋತ್ಸವ, ವಿಜಯನಗರ ಎಸ್ಪಿ ಕಚೇರಿ, ಡಿಆರ್ ಮೈದಾನ, ಎಸ್ಪಿ ಹಾಗೂ ಜಿ.ಪಂ. ಸಿಇಒ ಮನೆ ಉದ್ಘಾಟನೆಗಳಾದವು. ಇನ್ನೂ ಆರಂಭದಿAದ ಮುಂಗಾರು ಉತ್ತಮ ಹದ ಮಳೆಯಾಗಿದ್ದರಿಂದ ರೈತರಿಗೆ ಹರ್ಷ ಮೂಡಿತ್ತು. ಉತ್ತಮ ಫಸಲಿನೋಂದಿಗೆ ರೈತರು ಸಂಭ್ರಮದಲ್ಲಿದ್ದಾರೆ. 2023ರಲ್ಲಿ ಬರಗಾಲದಿಂದ ತುಂಗಭದ್ರಾ ಜಲಾಶಯ ತುಂಬಲಿಲ್ಲ. 2024ರಲ್ಲಿ ಜಲಾಶಯದ 19ನೇ ಗೇಟ್ ಕಳಚಿ ದುರಂತ ಎದುರಾಗಿತ್ತು. ರಾಜಕೀಯ ತೊಳಲಾಟದಲ್ಲಿ ಸೋಲು-ಗೆಲವುಗಳಾದವು. ಸಿಹಿಗಿಂತ ಕಹಿ ಘಟನೆಯೊಂದಿಗೆ ಕೆಲವೇ ಗಂಟೆಯಲ್ಲಿ 2024ಕ್ಕೆ ವಿದಾಯ ಹೇಳುವ ಸಮಯ ಬಂದಿದೆ.
ನೂತನ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಕಚೇರಿ ನಿರ್ಮಾಣ, ಜಿಲ್ಲಾಮಟ್ಟದ ಕಚೇರಿಗಳ ಸ್ಥಾಪನೆ, ಹೊಸ ಸಿಬ್ಬಂದಿ ನೇಮಕಾತಿ, ಅಧಿಕಾರಿಗಳ ಓಡಾಟಕ್ಕೆ ವಾಹನಗಳ ಖರೀದಿ, ರಸ್ತೆ ನಿರ್ಮಾಣ, ಮೆಡಿಕಲ್ ಕಾಲೇಜು ಹೀಗೆ ಹತ್ತು ಹಲವು ಕೆಲಸಕ್ಕಾಗಿ ಅನುದಾನ ಬರಲಿಲ್ಲ. ಇನ್ನೊಂದೆಡೆ ವಿಶ್ವವಿಖ್ಯಾತ ಹಂಪಿ, ತುಂಗಭದ್ರಾ ಜಲಾಶಯ, ದರೋಜಿ ಕರಡಿಧಾಮ, ಕಮಲಾಪುರದ ಜೈವಿಕ ಉದ್ಯಾನ ಸೇರಿ ಹಲವು ಪ್ರವಾಸಿ ತಾಣಗಳ ಮೂಲಕ ಜಗತ್ತಿನ ಗಮನ ಸೆಳೆದಿರುವ ನೂತನ ಜಿಲ್ಲೆ ಮೂಲ ಸೌಕರ್ಯಗಳ ಒದಗಸಿಲ್ಲ. ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿ ತಾಲೂಕುಗಳಲ್ಲಿ ಕೆರೆ, ಕಟ್ಟೆ ತುಂಬಿಸಲಿಲ್ಲ. ಅದೇ ರೀತಿ ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿಯ ಕೆಲವು ಭಾಗಗಳಲ್ಲಿ ನೀರಾವರಿ ಸೌಕರ್ಯಕ್ಕೆ ಸಂಬAಧಿಸಿದ ಯೋಜನೆಗಳು ಇನ್ನೂ ಪ್ರಗತಿಯಲ್ಲಿವೆ. ತಾಂಡಾ ನಿವಾಸಿಗಳು ಉದ್ಯೋಗ ಅರಸಿಕೊಂಡು ಬೇರೆಡೆ ಗುಳೇ ಹೋಗುವುದು ತಡೆಯಲು ಸರ್ಕಾರ ವಿಫಲವಾಗಿದೆ. ಇನ್ನೂ ಅನೇಕರು ನಿರುದ್ಯೋಗಿಗಳಾಗಿದ್ದಾರೆ. ಸ್ಥಳೀಯ ಬಹುತೇಕರಲ್ಲಿ ಕೌಶಲ್ಯ ಇಲ್ಲ. ಕೈಗಾರಿಕೆಗಳಿದ್ದರೂ ಹೊರಗಿನವರು ಅಲ್ಲಿ ಆಕ್ರಮಿಸಿಕೊಂಡಿದ್ದಾರೆ. ಈ ಭಾಗದ ಜನರಿಗೆ ನುಂಗಲಾರದ ತುತ್ತಾಗಿದೆ.
2024ರಲ್ಲಿ ಜಿಲ್ಲೆಯ ರಾಜಕಾರಣದಲ್ಲಿ ಕಬಿ ಖುಷಿ ಕಬಿ ಗಮ್ ಬೆಳವಣಿಗೆಗಳು ನಡೆದವು. 2004ರಲ್ಲಿ ಬಿಜೆಪಿಯ ಕರುಣಾಕರ ರೆಡ್ಡಿ ಅವರು ಗೆಲ್ಲುವ ಮೂಲಕ ಮೊದಲ ಬಾರಿ ಈ ಕ್ಷೇತ್ರವನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿತು. 2009ರಲ್ಲಿ ಜೆ ಶಾಂತಾ ಮತ್ತು 2014ರಲ್ಲಿ ಶ್ರೀರಾಮುಲು ಗೆಲುವಿನ ರುಚಿ ಕಂಡಿದ್ದಾರೆ. 2018ರಲ್ಲಿ ಕಾಂಗ್ರೆಸ್‌ನ ವಿ.ಎಸ್.ಉಗ್ರಪ್ಪ ಗೆಲುವು ಸಾಧಿಸುವುದರೊಂದಿಗೆ ಕಾಂಗ್ರೆಸ್ ತನ್ನ ನೆಲೆ ಇಲ್ಲಿ ಇನ್ನೂ ಗಟ್ಟಿಯಾಗಿದೆ ಎಂಬುದನ್ನು ಸಾಬೀತುಪಡಿಸಿತು. 2019ರಲ್ಲಿ ಮತ್ತೆ ಬಿಜೆಪಿಯ ದೇವೇಂದ್ರಪ್ಪ ಗೆದ್ದಿದ್ದರು. 2024ರ ಚುನಾವಣೆಯಲ್ಲಿ ಬಿಜೆಪಿಯಿಂದ ಪ್ರಧಾನಿ ನರೆಂಧ್ರ ಮೋದಿಯವರು ಕೂಡ ಬಂದು ಪ್ರಚಾರ ಮಾಡಿದರು. ಬಿಜೆಪಿ ಗೆದ್ದೆ ಗೆಲ್ಲುತ್ತದೆ ಎಂಬ ವಿಶ್ವಾಸವಿತ್ತು. 2004ರಿಂದ ಬಿಜೆಪಿ ಭದ್ರಕೋಟೆಯಾಗಿದ್ದ ಬಳ್ಳಾರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಈ.ತುಕಾರಾಂ ಗೆಲುವ ಭಾರಿಸುವ ಮೂಲಕ ಕಾಂಗ್ರೆಸ್ ಚಿಗರುವಂತೆ ಮಾಡಿದರು. ಬಿ.ಶ್ರೀರಾಮಲು ಎರಡನೇ ಬಾರಿ ಎಂಪಿ ಆಗುವ ಕನಸು ಕಮರಿಹೋಯಿತು.
2023ರಲ್ಲಿ ಬರದಿಂದ ನಲುಗಿದ ರೈತರ ಬದುಕು ಆ ವರ್ಷ ಕಹಿ ಅನುಭವವನ್ನೇ ಉಣಬಡಿಸಿತು. ಎರಡು ವರ್ಷದ ನಂತರ ಭರ್ತಿಯಾದ ತುಂಗಭದ್ರಾ ಜಲಾಶಯ ದೊಡ್ಡ ದುರಂತದಿAದ ಪಾರಾಗಿದೆ. 2024ರ ಆ.10ರಂದು 19ನೇ ಗೇಟ್ ಕಳಚಿ ಅಪಾರ ಪ್ರಮಾಣ ನೀರು ನದಿಗೆ ಪೋಲಾಯಿತು. ಇನ್ನೂ ರೈತರಿಗೆ ಮೊದಲ ಬೆಳೆ ಬೆಳೆಯಲು ಹಾಗೂ ಕುಡಿವ ನೀರಿಗೂ ಆಹಾಕಾರ ಉಂಟಾಗಬಹುದು ಎಂದು ಆತಂಕಕ್ಕೆ ದೂಡಿತು. ಒಂದು ವಾರಗಳ ಕಾಲ ರೈತರಲ್ಲಿ ಮೂಡಿದ ಅನುಮಾನವನ್ನು ಡ್ಯಾಂ ಗೇಟ್‌ಗಳ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ಸ್ಟಾಪ್ ಲಾಗ್ ಗೇಟ್ ಅಳವಡಿಸಿ 105.788 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 70 ಟಿಎಂಸಿಯಟ್ಟು ನೀರು ಉಳಿಸಿದರು. ಇದರಿಂದ ರೈತರಿಗೆ ಮೊದಲ ಬೆಳೆಗೆ ನೀರಿನ ಭರವಸೆ ಖಾತ್ರಿಯಾಯಿತು. ಇನ್ನೂ ಕೆಲ ದಿನಗಳಲ್ಲಿ ಜಲಾಶಯ ಮತ್ತೆ ಸಂಪೂರ್ಣ ಭರ್ತಿಯಾಗಿ ಕೃಷಿಕ ವರ್ಗಕ್ಕೆ ಇನಷ್ಟು ಭರವಸೆ ಮೂಡಿಸಿತು.
ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗೆ ಜನ್ಮ ತಳೆದಿರುವ ಕನ್ನಡ ವಿಶ್ವವಿದ್ಯಾಲಯಕ್ಕೂ ಸರ್ಕಾರ ವಿಶೇಷ ಅನುದಾನ ಘೋಷಣೆ ಮಾಡಿಲ್ಲ. 2024ರ ಬಜೇಟ್ ಹಾಗೂ ಸಚಿವ ಸಂಪೂಟಗಗಳಲ್ಲಿ ಕನ್ನಡ ವಿವಿ ಸಮಸ್ಯೆಗೆ ಸರ್ಕಾರ ಮದ್ದು ಹಚ್ಚಲಿದ್ದಾರೆ ಎಂಬ ಆಶಯಗಳು ಹುಸಿಯಾಯಿತು. ವಿಜಯನಗರ ಜಿಲ್ಲೆಗೆ ಏಳು ಬಾರಿ ಬಂದ ಸಿಎಂ ಕನ್ನಡ ವಿವಿಗೆ ಸ್ಪಂದನೆ ನೀಡುತ್ತಿಲ್ಲ. ವಿವಿಗೆ ಬಂದಿರುವ ಆರ್ಥಿಕ ಸಂಕಷ್ಟದಿAದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಗೆ ಪರದಾಟ, ಅಧಿಕಾರಿಗಳ ಅಲೆದಾಟ ತಪ್ಪುತ್ತಿಲ್ಲ.
ಹAಪಿ ಉತ್ಸವಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ, ವಿಜಯನಗರ ಜಿಲ್ಲೆಗೆ ಏಳು ಬಾರಿ ಭೇಟಿ ನೀಡಿದ್ದಾರೆ. ತುಂಗಭದ್ರಾ ಜಲಾಶಯ 19ನೇ ಗೇಟ್ ದುರಂತದ ವೇಳೆ, ಬಾಗಿನ ಅರ್ಪಿಸುವ ಕಾರ್ಯಕ್ರಮ, ಕೆಡಿಪಿ ಸಭೆ ಸೇರಿದಂತೆ ಇತರೆ ಕಾರ್ಯಕ್ರಮದ ವೇಳೆ ಜಿಲ್ಲೆಗೆ ಭೇಟಿ ನೀಡಿದ್ದಾರೆ.
ಬಹುಕೋಟಿ ಜೆನ್ನಿ ಮಿಲ್ಕ್ (ಕತ್ತೆ ಹಾಲು) ಮಾರಾಟ ವಂಚನೆ ಪ್ರಕರಣಕ್ಕೆ ರಾಜ್ಯ ಮಟ್ಟದಲ್ಲಿ ಗಮನ ಸೆಳೆಯಿತು. ಜೆನ್ನಿ ಮಿಲ್ಕ್ ಪ್ರಕರಣದಲ್ಲಿ ಒಟ್ಟು 33.36 ಕೋಟಿ ರೂ. ವಂಚನೆ ಆಗಿದೆ ಎಂದು 319 ನೊಂದವರು ಪ್ರಕರಣ ದಾಖಲಿಸಿದ್ದಾರೆ. ತನಿಖೆ ನಡೆಸಿದ ಪೊಲೀಸರು ಐದು ಜನ ಆರೋಪಿಗಳನ್ನು ಬಂದಿಸಿದರು. ಕಂಪನಿಗೆ ಸೇರಿದ 33 ಬ್ಯಾಂಕ್ ಅಕೌಂಟ್ ಗಳನ್ನು ಪ್ರೀಜ್ ಮಾಡಲಾಗಿದೆ. ಈಗ 3600 ಪುಟಗಳ ದಾಖಲೆಗಳೊಂದಿಗೆ ಪ್ರಕರಣವನ್ನು ಕಲಬುರ್ಗಿಯ ಸಿಐಡಿಗೆ ಒಪ್ಪಿಸಲಾಗಿದ್ದು ತನಿಖೆ ಚುರುಕುಗೊಂಡಿದೆ.
ಹೊಸಪೇಟೆ ತಾಲೂಕಿನ ರೈತರಿಗೆ ವರದಾನವಾಗಬೇಕಿದ್ದ ಉದ್ಧೇಶಿತ ಸಕ್ಕರೆ ಕಾರ್ಖಾನೆ ಇನ್ನೂ ಕನಾಸಗಿ ಉಳಿದಿದೆ. 1934 ಆರಂಭವಾಗಿದ್ದ ಐಎಸ್‌ಆರ್ ಸಕ್ಕರೆ ಕಾರ್ಖಾನೆ ಕಾರಣಾಂತರಗಳಿAದ 2016 ರಲ್ಲಿ ಸ್ಥಗೀತಗೊಂಡಿತು. ಅಂದಿನಿAದ ಇಲ್ಲಿಯವರೆಗೆ ಇಲ್ಲಿನ ರೈತರು ಹೊರಗಡೆ ನಷ್ಟದಲ್ಲಿ ಕಬ್ಬು ಸಾಗಾಣೆ ಮಾಡುತ್ತಿದ್ದಾರೆ. ಬಿಜೆಪಿ ನೇತೃತ್ವದಲ್ಲಿ ಸರ್ಕಾರದಲ್ಲಿ ಮಾಜಿ ಸಚಿವ ಆನಂದಸಿAಗ್ ಹೊಸ ಸಕ್ಕರೆ ಕಾರ್ಖಾನೆಗೆ ಅನುಮೋದನೆ ಕೊಡಿಸಿದರು. ನಗರದ ಜಂಬುನಾಥನ ಹಳ್ಳಿ ವ್ಯಾಪ್ತಿಯಲ್ಲಿ 84.86 ಏಕರೆ ಜಮೀನಿನಲ್ಲಿ ಮಂಜೂರಾತಿ ಮಾಡಿಸಿ ಭೂಮಿ ಪೂಜೆ ಕೂಡ ನೆರವೇರಿಸಿದರು. ಆದರೆ 2023ರಲ್ಲಿ ಬದಾಲಾದ ರಾಜಕೀಯದಲ್ಲಿ ಕಾಂಗ್ರೆಸ್ ಶಾಸಕ ಎಚ್.ಆರ್.ಗವಿಯಪ್ಪ ಅಧಿಕಾರದ ಚುಕ್ಕಾಣಿ ಹಿಡಿದರು. ಹಾಲಿ-ಮಾಜಿ ಶಾಸಕ ಕಿತ್ತಾಟದಲ್ಲಿ ರೈತರಿಗೆ ಅನುಕೂಲ ಆಗುವಂತೆ ಕಾರ್ಖಾನೆ ಆರಂಭ ಕನಸಾಗಿದೆ.