

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಫಲಿತಾಂಶ ಪ್ರಕಟಣೆಯಲ್ಲಿ ಒಂದಿಲ್ಲೊಂದು ಎಡವಟ್ಟುಗಳೊಂದಿಗೆ ಸದಾ ಸುದ್ದಿಯಲ್ಲಿರುತ್ತದೆ. ಈಗ ಮತ್ತೊಂದು ಎಡವಟ್ಟಿನಿಂದ ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಚೆಲ್ಲಾಟ ಆಡಲು ಮುಂದಾಗಿದೆ. ಕಳೆದ ಫಲಿತಾಂಶದಲ್ಲಿ ಪಾಸಾದ ವಿದ್ಯಾರ್ಥಿಗಳ, ಮುಂದಿನ ಸೆಮಿಸ್ಟರ್ ಪರೀಕ್ಷೆಯ ಶುಲ್ಕ ಕಟ್ಟುವ ವೇಳೆ ಫೇಲ್ ಆಗಿದ್ದಾರೆ. ಪರೀಕ್ಷೆ ಹಾಜರಾದರೂ ಗೈರು ತೋರಿಸುತ್ತಿರುವುದು ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ಪೀಕಲಾಟ ತಂದಿದೆ.
ನಗರದ ಶಂಕರ ಆನಂದ ಸಿಂಗ್ ಕಾಲೇಜಿನ ವಿದ್ಯಾರ್ಥಿ 2023 ಶೈಕ್ಷಣಿಕ ವರ್ಷದಲ್ಲಿ ಎರಡನೇ ಸೆಮಿಸ್ಟರ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಆದರೆ ಈ ಭಾರಿ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯ ಶುಲ್ಕ ಪಾವತಿಸುವಾಗ ಮೂರನೇ ಸೇಮ್ ಫೇಲ್ ಆಗಿರುವುದು ತೋರಿಸುತ್ತಿದೆ. ವಿದ್ಯಾರ್ಥಿನಿ ಆರ್.ಅನಿತಾ 2023 ರಲ್ಲಿ ಮೊದಲ ಸೆಮಿಸ್ಟರ್‌ನಲ್ಲಿ ಇತಿಹಾಸ ವಿಷಯದಲ್ಲಿ ಫೇಲ್ ಆಗಿದ್ದಾರೆ. 2023ರ ವೇಳೆ ಮೂರನೇ ಸೆಮಿಸ್ಟರ್‌ನ ವೇಳೆ ಬಾಕಿ ಪರೀಕ್ಷೆ ಬರೆದಿದ್ದಾಳೆ. ಆದರೆ, ಫಲಿತಾಂಶದಲ್ಲಿ ಇತಿಹಾಸದ ಜತೆ ಈ ಹಿಂದೆ ಪಾಸ್ ಆಗಿದ್ದ ಎಜುಕೇಷನ್ ವಿಷಯ ಕೂಡ ಫೇಲ್ ಆಗಿದೆ ಎಂದು ಫಲಿತಾಂಶದಲ್ಲಿ ತೋರಿಸಲಾಗಿದೆ. ಕಳೆದ ಬಾರಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರೂ ಸಹಿತ ಫಲಿತಾಂಶದಲ್ಲಿ ಗೈರೆಂದು ನಮೂದಿಸಿ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ. ವಿವಿಯ ಬಗ್ಗೆ ಶಿಕ್ಷಣ ತಜ್ಞರು, ಸಂಘಟನೆಗಳು ಸಿಡಿಮಿಡಿಗೊಳ್ಳುತ್ತಿದೆ.
ಕೇವಲ ನಗರದ ಶಂಕರ ಆನಂದಸಿಂಗ್ ಕಾಲೇಜ್ ವಿದ್ಯಾರ್ಥಿಗಳಿಗಷ್ಟೇ ಸಮಸ್ಯೆ ಆಗಿಲ್ಲ. ವಿವಿ ವ್ಯಾಪ್ತಿಯಲ್ಲಿನ ಹಲವು ಪದವಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶದಲ್ಲಿ ಸಮಸ್ಯೆಗಳು ಕಂಡು ಬಂದಿವೆ. ಇದರ ಜತೆಗೆ ಬಿ.ಎಸ್ ಸಿ ವಿಭಾಗದಲ್ಲಿ ಪರೀಕ್ಷಾ ಮೌಲ್ಯಮಾಪನ ಸರಿಯಾಗಿಲ್ಲ ಎನ್ನುವ ಆಪಾದನೆ ಕೇಳಿ ಬಂದಿದೆ. ಒಟ್ಟಿನಲ್ಲಿ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯವು ಪ್ರತಿ ಬಾರಿ ಪರೀಕ್ಷಾ ಫಲಿತಾಂಶದಲ್ಲಿ ಯಾವುದಾದರ ಒಂದು ಸಮಸ್ಯೆಯಿಂದ ಫಲಿತಾಂಶ ಪ್ರಕಟಿಸಿದ್ದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ನಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿದೆ.
ನಾವು ಬೆಂಗಳೂರಿಗೆ ಬಂದಿರುವೆ. ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶದಲ್ಲಿ ಸಮಸ್ಯೆ ಆಗಿರುವುದು ಗಮನಕ್ಕೆ ಬಂದಿದೆ. ನಾವು ವಿವಿ ಅಧಿಕಾರಿಗಳ ಜತೆ ಮಾತನಾಡಿದ್ದೇವೆ. ಕೇವಲ ನಮ್ಮ ಕಾಲೇಜಿನಲ್ಲಷ್ಟೇ ಈ ಸಮಸ್ಯೆಯಾಗಿಲ್ಲ. ಬೇರೆ ಕಾಲೇಜಿನಲ್ಲೂ ಇದೇ ರೀತಿ ಸಮಸ್ಯೆಯಾಗಿದೆ. ವಿವಿ ಎಡವಟ್ಟಿಗೆ ನಮಗೆ ತಲೆನೋವಾಗಿದೆ. ನಾವು ಶೀಘ್ರ ವಿಶ್ವವಿದ್ಯಾಲಯಕ್ಕೆ ತೆರಳಿ ಈ ತೋಂದರೆ ನಿವಾರಿಸಲಿದ್ದೇವೆ. - ಶಿವಪ್ಪ, ಕಾಲೇಜು ಪ್ರಾಚಾರ್ಯ, ಶಂಕರ್ ಆನಂದ್ ಸಿಂಗ್ ಕಾಲೇಜು, ಹೊಸಪೇಟೆ
ಬಳ್ಳಾರಿ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ. ಪ್ರತಿ ವರ್ಷವೂ ಒಂದಿಲ್ಲೊAದು ಎಡವಟ್ಟು ಮಾಡಿಕೊಂಡು ವಿದ್ಯಾರ್ಥಿಗಳಿಂದ ಅನಗತ್ಯವಾಗಿ ಹಣ ಖರ್ಚು ಮಾಡಿಸುತ್ತಿದೆ. ಕೂಡಲೇ ವಿದ್ಯಾರ್ಥಿಗಳ ಫಲಿತಾಂಶದಲ್ಲಿನ ತೋಂದರೆ ಸರಿಪಡಿಸಬೇಕು. ಇಲ್ಲಿದ್ದರೆ ವಿವಿ ವಿರುದ್ಧ ಹೋರಾಟ ಮಾಡಲಾಗುವುದು. - ಶಿವ ಕುಮಾರ್, ಜಿಲ್ಲಾಧ್ಯಾಕ್ಷ, ಜೈ ಭೀಮ್ ವಿದ್ಯುತ್ ಯುವಜನ ಒಕ್ಕೂಟ್ಟ, ವಿಜಯನಗರ
ಫಲಿತಾಂಶದಲ್ಲಿ ವ್ಯತ್ಯಾಸವಾಗಿದೆ ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಸಮಸ್ಯೆ ಇರುವ ವಿದ್ಯಾರ್ಥಿಗಳು ವಿವಿಗೆ ಬಂದು ಸಮಸ್ಯೆ ಪರಿಹರಿಸಿಕೊಳ್ಳಬಹುದು. ನಾನು ವಿವಿ ಮೌಲ್ಯಮಾಪನ ವಿಭಾಗದ ಅಧಿಕಾರಿಗಳ ಜೆತೆ ಮಾತನಾಡುವೆ. - ಪ್ರೋ.ತಿಪ್ಪೆರುದ್ರಪ್ಪ, ಬಳ್ಳಾರಿ ವಿವಿ ಕುಲಪತಿ
ನಾನು ಪದವಿ 2ನೇ ಸೆಮಿಸ್ಟರ್‌ನ ಫಲಿತಾಂಶ ಪಟ್ಟಿಯಲ್ಲಿ ಉತ್ತೀರ್ಣರಾಗಿರುವೆ. ಆದರೆ, ನಾಲ್ಕನೇ ಸೆಮ್ ಪರೀಕ್ಷೆ ಶುಲ್ಕ ಆನ್ಲೈನ್ ನಲ್ಲಿ ಪಾವತಿ ಮಾಡಲು ಹೋದರೆ, ಎರಡನೇ ಸೆಮ್ ಎಲ್ಲ ವಿಷಯಗಳು ಬಾಕಿ ಇವೆ ಎಂದು ತೋರಿಸುತ್ತಿದೆ. ನನ್ನ ಸ್ನೇಹಿತ ಫಲಿತಾಂಶದಲ್ಲೂ ಒಂದಲ್ಲ ಒಂದು ಸಮಸ್ಯೆಯಿದೆ. ನಾವು ಕಾಲೇಜು ಪ್ರಾಚಾರ್ಯರ ಗಮನಕ್ಕೆ ತಂದಿದ್ದೇವೆ. ಇದು ಸರಿಯಾಗದಿದ್ದರೆ ಹೋರಾಟ ಮಾಡಲಿದ್ದೇವೆ. - ರಾಜಶೇಖರ್, ಶಂಕರ್ ಆನಂದ್ ಸಿಂಗ್ ಕಾಲೇಜು ವಿದ್ಯಾರ್ಥಿ, ಹೊಸಪೇಟ