ಸಿಲಿಂಡರ್ ಸ್ಪೋಟ ಎಂಟು ಜನರಿಗೆ ಗಾಯ, ಇಬ್ಬರು ಗಂಭಿರ

IMG-20250927-WA0013
Published on

ಹೊಸಪೇಟೆ: ತಾಲೂಕಿನ ಗಾದಿಗನೂರಿನಲ್ಲಿ ಅಡುಗೆ ಸಿಲಿಂಡರ್ ಸ್ಪೋಟಗೊಂಡು ಒಂದೇ ಕುಟುಂಬದ ಎಂಟು ಜನರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ‌.ಸ್ಪೋಟದ ರಭಸಕ್ಕೆ ಮನೆ ಗೋಡೆ ಕುಸಿದಿದೆ.

ಸಿಲಿಂಡರ್ ಸಿಡಿದು ವಕೀಲ ಹಾಲಪ್ಪ (40), ಹೆಂಡತಿ ಕವಿತಾ (35), ತಾಯಿ ಗಂಗಮ್ಮ (63) ಮೈಲಾರಪ್ಪ (55), ಮಲಿಯಮ್ಮ(20), ಕಾವೇರಿ (3) ಮಲ್ಲ (17) ಕೃತಿಕಾ (7) ಗಾಯಾಳುಗಳು ಬಳ್ಳಾರಿಯ ತೊರಣಗಲ್ಲು ಸಂಜೀವಿನಿ ಅಸ್ಪತ್ರೆಗೆ ದಾಖಾಲಿಸಲಾಗಿದೆ.

ಹೊಸಪೇಟೆ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ವಕೀಲ ಹಾಲಪ್ಪ ಅವರಿಗೆ ಸೇರಿದ ಮನೆ ಇದು. ಮನೆಯಲ್ಲಿ ಸುಮಾರು 10 ಮಂದಿ ಇದ್ದರು. ಶನಿವಾರ ಬೆಳಿಗ್ಗೆ 5 ಸುಮಾರಿಗೆ ಕವಿತಾ ನವರಾತ್ರಿ ನಿಮಿತ್ತ ಬನ್ನಿ ಮಹಾಕಾಳಿ ದೇಗುಲಕ್ಕೆ ಹೋಗಿ ಬಂದು ಟೀ ಮಾಡುವಾಗ ಗ್ಯಾಸ್ ವಾಸನೆ ಬಂದಿದೆ ಎಂದು ಮಲಗಿದ್ದ ಪತಿ ಹಾಲಪ್ಪಗೆ ಎಬ್ಬಿಸಿದ್ದಾಳೆ. ಈ ವೇಳೆ ಸಿಲಿಂಡರ್ ಸ್ಫೋಟಗೊಂಡು ಮನೆಯಲ್ಲಿದ್ದ ಎಂಟು ಜನರು ಗಾಯಗೊಂಡಿದ್ದಾರೆ. ಸ್ಫೋಟದಿಂದ ಮನೆ ಶೇ50ರಷ್ಟು ಧ್ವಂಸವಾಗಿದೆ. ಗಾಯಾಳುಗಳನ್ನು ಬಳ್ಳಾರಿ ಜಿಲ್ಲೆಯ ತೋರಣಗಲ್‌ನ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net