

ಹೊಸಪೇಟೆ: ಹಿಂದುಗಳ ಪ್ರಕಾರ ಪಿತೃ ಪಕ್ಷದಲ್ಲಿ ಯಾವುದೇ ಶುಭ ಕಾರ್ಯ ನಡೆಸಲ್ಲ. ಆದರೆ, ಇಂದು ತುಂಗಭದ್ರಾ ಜಲಾಶಯದಲ್ಲಿ ಸಿಎಂ ಸಿದ್ದರಾಮಯ್ಯ ಗಂಗಾ ಮಾತೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ್ದಾರೆ.
ಈ ಬಾರಿ ಟಿಬಿಡ್ಯಾಂ ಅವಧಿ ಮುನ್ನ ಭರ್ತಿಯಾಗಿತ್ತು. ಆದರೆ, ಜಲಾಶಯದ 19ನೇ ಗೇಟ್ ಕಳಚಿ ರೈತರಲ್ಲಿ ಆತಂಕ ಮೂಡಿಸಿತು. ಭಾನುವಾರ ಸಿಎಂ ಕೂಡ ಬಾಗಿನ ಅರ್ಪಿಸಿದರು. ಪಿತೃ ಪಕ್ಷದಲ್ಲಿ ದೇವಾನು ದೇವತೆಗಳ ಪೂಜಾ ಕಾರ್ಯ ನಡೆಯಲ್ಲ. ಆದರೂ ಗಂಗೆ ಪೂಜೆ ಸಲ್ಲಿಸಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ. ಧರ್ಮಸ್ಥಳ ಶ್ರೀ ಮಂಜುನಾಥ ದೇವಸ್ತಾನ ಮೀನು ತಿಂದು ಹೋಗಿ ಭಾರಿ ಚರ್ಚೆ ಒಳಲಾಗಿದ್ದರು. ಇನ್ನೂ ಹಿಂದುಗಳ ಧಾರ್ಮಿಕ ಭಾವನೆಗಳ ವಿರುದ್ಧ ಮಾತನಾಡಿ, ಸುದ್ದಿಯಾಗುತ್ತಾರೆ. ಇಗ ಪಿತೃ ಪಕ್ಷದಲ್ಲಿ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿ ಸುದ್ದಿಯಾಗಿದ್ದಾರೆ.
ವರ್ಷದಲ್ಲಿ 15 ದಿನ ಪಿತೃ ಪಕ್ಷ ಬರುತ್ತದೆ. ಅದು ಅನಂತ ಹುಣ್ಣಿಮೆ ಮರುದಿನದಿಂದ ಆರಂಭವಾಗುವ ಪಿತೃಪಕ್ಷ ಮಹಾಲಯ ಅಮವಾಸೆ (ಸರ್ವಪಿತೃ ಅಮವಾಸೆ)ಗೆ ಮುಗಿಯುತ್ತದೆ. ಪಿತೃಗಳಿಗೆ ಸೀಮಿತವಾದ ಈ ದಿನದಲ್ಲಿ ದೇವರುಗಳಿಗೆ ಪೂಜೆ ಸಲ್ಲಿಕೆಯಾಗುವುದಿಲ್ಲ. ವರ್ಷದ 15 ದಿನಗಳ ಕಾಲ ಪಿತೃ ಪಕ್ಷಕ್ಕೆ ಸೀಮಿತ. ಪಿತೃ ಪಕ್ಷದಲ್ಲಿ ಪೂರ್ವಜರಿಗೆ ಶ್ರಾದ್ಧ ವಿಧಿವಿಧಾನ, ತರ್ಪಣ, ಪಿಂಡದಾನ ಇತ್ಯಾದಿಗಳನ್ನು ಮಾಡುವ ಸಂಪ್ರದಾಯವಿದೆ. ಈ ದಿನಗಳಲ್ಲಿ ಪೂರ್ವಜರು ಕುಟುಂಬದ ಸದಸ್ಯರನ್ನು ಭೇಟಿಯಾಗಲು ಭೂಮಿಗೆ ಬರುತ್ತಾರೆ ಮತ್ತು ಅವರ ಕಾರ್ಯಗಳಿಂದ ಅಂತುಷ್ಟರಾಗಿ ಅವರಿಗೆ ಆಶೀರ್ವಾದವನ್ನು ನೀಡುತ್ತಾರೆ. ಈ ದಿನಗಳಲ್ಲಿ ಪೂರ್ವಜರಿಗೆ ಶ್ರಾದ್ಧ ಇತ್ಯಾದಿಗಳನ್ನು ಮಾಡುವುದರಿಂದ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಮತ್ತು ಸಂತುಷ್ಟರಾಗುತ್ತಾರೆ ಮತ್ತು ಸಂತತಿಗೆ ಅಪಾರವಾದ ಅನುಗ್ರಹವನ್ನು ನೀಡುತ್ತಾರೆ. ಇದು ಅವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ದೇವರುಗಳಿಗೆ ಪೂಜೆ ಸಲ್ಲಿಸುವುದರಲ್ಲಿ ಕಾಳಜಿ ವಹಿಸುವುದು ಬಹಳ ಮುಖ್ಯ, ಇಲ್ಲದಿದ್ದರೆ ಪೂರ್ವಜರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಈ ಬಾರಿಯ ಪಿತೃ ಪಕ್ಷವು ಸೆಪ್ಟೆಂಬರ್ 17 ರಿಂದ ಪ್ರಾರಂಭವಾಗಿದೆ. ಅ.02ರಂದು ಮುಗಿಯಲಿದೆ.
ಸನಾತನ ಹಿಂದೂ ಧರ್ಮದ ಪ್ರಕಾರ ಪಿತೃ ಪಕ್ಷದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವ ನಡೆಯುವುದಿಲ್ಲ. ಒಂದು ವೇಳೆ ನಡೆದರೆ ಅಶುಭವಾಗುವ ಸಾಧ್ಯತೆಗಳಿರುತ್ತದೆ. ಆದರೆ ಈ ಪಿತೃಪಕ್ಷದಲ್ಲಿ ಸಿಎಂ ಸಿದ್ದರಾಮಯ್ಯ ಯಾವಾಗಲೂ ಹಿಂದೂ ವಿರೋಧಿ ಆಚರಣೆಗಳನ್ನು ಮಾಡುತ್ತಿರುತ್ತಾರೆ. ತುಂಗಭದ್ರಯಲ್ಲಿ ಬಾಗಿನ ಅರ್ಪಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅಥವಾ ಸರ್ಕಾರದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಚನ್ನಬಸವನಗೌಡ ಪಾಟೀಲ್, ಬಿಜೆಪಿ ಜಿಲ್ಲಾಧ್ಯಾಕ್ಷ, ವಿಜಯನಗರ