ಟ್ರಾಕ್ಟರ್‌ನಡಿ ಸಿಲಿಕಿ ಬಾಲಕ ತುಂಡಾಗಿ ಸಾವು

IMG-20250419-WA0039
Published on

ಕಾನಹೊಸಹಳ್ಳಿ(ವಿಜಯನಗರ): ಟ್ರಾಕ್ಟರ್ ರೂಟರ್ ಗೆ ಸಿಲುಕಿ ಬಾಲಕನೋರ್ವ ಮೃತಪಟ್ಟ ಘಟನೆ ಕೂಡ್ಲಿಗಿ ತಾಲೂಕಿನ ಗುಡೇಕೊಟೆಯಲ್ಲಿ ಧಾರುಣ ಘಟನೆ ಶನಿವಾರ ನಡೆದಿದೆ.

ಚಿತ್ತದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೆಳಗಳಹಟ್ಟಿಯ ಓಬಣ್ಣ ಹಾಗೂ ದೀಪಾ ದಂಪತಿಯ ಮಗ ನವದೀಪ್(5) ಬಾಲಕ ಮೃತಪಟ್ಟಿದ್ದಾನೆ. ತಾಯಿ ದೀಪಾ ತವರು ಮನೆ ಗುಡೇಕೊಟೆಗೆ ಬಂದಿದ್ದಾರೆ. ಶನಿವಾರ ಸಂಜೆ ತಾಯಿಯ ತಂದೆ ಮಾರಣ್ಣ ಜತೆ ಹೋಲಕ್ಕೆ ಹೋಗಿ ಟ್ರಾಕ್ಟರ್ ರೂಟರ್ ಹೊಡೆಯುವಾಗ ಘಟನೆ ನಡೆದು ಹೋಗಿದೆ. ತಾತಾನ ಜತೆ ಟ್ರಾಕ್ಟರ್ ನಲ್ಲಿ ಕುಳಿತ್ತಿದ್ದಾರೆ. ಆಯತಪ್ಪಿ ರೂಟರ್ ಯಂತ್ರಕ್ಕೆ ಸಿಲುಕಿದ ಬಾಲಕನ ದೇಹ ತುಂಡಾಗಿದೆ. ಸ್ಥಳದಲ್ಲೆ ಬಾಲಕ ಮೃತಪಟ್ಟಿದ್ದಾನೆ.

ಬಾಲಕನ ತುಂಡಾದ ಮೃತ ದೇಹವನ್ನು ನೋಡಿದ ಕುಟುಂಬಸ್ಥರು ಮಾತ್ರವಲ್ಲದೇ ಗ್ರಾಮಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು. ಘಟನಾ ಸ್ಥಳಕ್ಕೆ ಗುಡೇಕೊಟೆ ಪೊಲೀಸರು ಭೇಟಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net