ಹೊಸಪೇಟೆ: ತುಂಗಭದ್ರಾ ಜಲಾಶಯ ಕೇವಲ ಕರ್ನಾಟಕ ರಾಜ್ಯಕ್ಕೆ ಮಾತ್ರವಲ್ಲ ಆಂಧ್ರ, ತೆಲಂಗಾಣಕ್ಕೂ ಜೀವನಾಧಾರವಾಗಿದೆ. ಜಲಾಶಯದಲ್ಲಿನ ನೀರನ್ನು ಉಳಿಸುವ ಶತ ಪ್ರಯತ್ನಕ್ಕೆ ನಾವು ಕೈ ಜೋಡಿಸುತ್ತೇವೆ ಎಂದು ಆಂಧ್ರದ ಆರ್ಥಿಕ ಮಂತ್ರಿ ಪಯ್ಯಾವುಲ ಕೇಶವ ಹೇಳಿದರು.
ತುಂಗಭದ್ರಾ ಜಲಾಶಯ ಕಾಲುವೆ ಮತ್ತು ನದಿಗಳ ಮೂಲಕ ನಮಗೆ ನೀರು ಒದಗಿಸುತ್ತದೆ. ಸಾವಿರಾರು ರೈತರು ಇದೇ ನೀರಿನಿಂದ ಬದುಕುತ್ತಿದ್ದಾರೆ. ಕರ್ನಾಟಕ ರೈತರ ಜತೆ ನಮ್ಮ ರೈತರ ಹಿತವೂ ಅಡಗಿದೆ ಹೀಗಾಗಿ ಜಲಾಶಯ ಸುರಕ್ಷತೆ ಬಗ್ಗೆ ಗಮನ ಹರಿಸುತ್ತಿದ್ದೇವೆ ಮುಂದಿನ ದಿನಗಳಲ್ಲಿ ಈ ರೀತಿ ಘಟನೆ ಮರುಕಳಿಸದಂತೆ ಮೂರು ರಾಜ್ಯದಿಂದ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ನಮ್ಮಿಂದ ಅನುದಾನ, ತಾಂತ್ರಿಕತೆ ಸೇರಿ ಎಲ್ಲ ರೀತಿಯಿಂದಲೂ ಕರ್ನಾಟಕ ಸರ್ಕಾರಕ್ಕೆ ನೀಡುತ್ತೇವೆ ಎಂದು ಹೇಳಿದರು.