2025ರಲ್ಲಿ ಉನ್ನತ ಸ್ಥಾನಕ್ಕೇರಲಿದ್ದಾರೆ ಈ 3 ರಾಶಿಯವರು! ಬರಲಿದೆ ಅನಿರೀಕ್ಷಿತ ಆದಾಯ | Horoscope 2025

Horoscope 2025
Published on

Horoscope 2025 : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು ಕೂಡ ಇದ್ದಾರೆ. ಪ್ರತಿಯೊಂದು ಕೆಲಸ, ಕಾರ್ಯಗಳನ್ನು ಮಾಡಬೇಕಾದರೂ ಜೋತಿಷ್ಯದ ಮೊರೆ ಹೋಗುತ್ತಾರೆ. ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ ಮತ್ತು ನಕ್ಷತ್ರವು ಅವರ ಭವಿಷ್ಯದ ಜೀವನ ಮತ್ತು ಅವರ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.

ನಾವೀಗ ವರ್ಷದ ಕೊನೆಯ ತಿಂಗಳಿಗೆ ಪ್ರವೇಶ ಮಾಡಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ 2024 ಮುಗಿದು 2025ರ ಹೊಸ ವರ್ಷ ಬರಲಿದೆ. ಹೊಸ ವರ್ಷದಲ್ಲಿ ತಮ್ಮ ಅದೃಷ್ಟ ಬದಲಾಗುತ್ತಾ ಎಂದು ಯೋಚನೆ ಮಾಡುವವರು ಕೂಡ ಇದಾರೆ. ಅದಕ್ಕಾಗಿ ತಮ್ಮ ರಾಶಿಭವಿಷ್ಯ ತಿಳಿದುಕೊಳ್ಳಲು ತೀವ್ರ ಕುತೂಹಲವನ್ನು ಹೊಂದಿರುತ್ತಾರೆ. ಅಂತೆಯೇ, 2025ರ ಜಾತಕದ ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳು ಹೊಸ ವರ್ಷದಲ್ಲಿ ಉನ್ನತ ಸ್ಥಾನಗಳನ್ನು ಆಕ್ರಮಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಆ ರಾಶಿಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಮೇಷ ರಾಶಿ

ಮೇಷ ರಾಶಿಯ ಅಡಿಯಲ್ಲಿ ಜನಿಸಿದ ಜನರು 2025ರಲ್ಲಿ ವೃತ್ತಿಪರವಾಗಿ ಮತ್ತು ಆರ್ಥಿಕವಾಗಿ ಅನೇಕ ರೀತಿಯಲ್ಲಿ ಲಾಭವನ್ನು ಪಡೆಯುತ್ತಾರೆ. ಗ್ರಹಗಳ ಸ್ಥಾನಗಳ ಆಧಾರದ ಮೇಲೆ ಗುರು ಗ್ರಹದ ಆಶೀರ್ವಾದವು ಮಾರ್ಚ್ ನಂತರ ಸಂಪೂರ್ಣವಾಗಿ ಈ ರಾಶಿಯವರಿಗೆ ಲಭ್ಯವಾಗುತ್ತದೆ. ಇದರಿಂದ ವೃತ್ತಿಯಲ್ಲಿ ಬಡ್ತಿ ಮತ್ತು ಸಂಬಳ ಹೆಚ್ಚಳದಂತಹ ಶುಭ ಸುದ್ದಿಗಳು ಸಂತೋಷವನ್ನು ಹೆಚ್ಚಿಸುತ್ತವೆ. ಬಹಳ ದಿನಗಳಿಂದ ಕೆಲಸ ಹುಡುಕುತ್ತಿದ್ದವರಿಗೆ ಇಷ್ಟರಲ್ಲೇ ತಮಗೆ ಇಷ್ಟವಾದ ಕೆಲಸ ಸಿಗುತ್ತದೆ. ಅನಿರೀಕ್ಷಿತ ಆದಾಯ ಬರುವ ಸಾಧ್ಯತೆಗಳೂ ಇವೆ.

ವೃಷಭ ರಾಶಿ

ವೃಷಭ ರಾಶಿಯಲ್ಲಿ ಜನಿಸಿದವರು ಸ್ವಾಭಾವಿಕವಾಗಿ ಶ್ರಮ ಜೀವಿಗಳು. 2025ರ ವರ್ಷವು ಅವರ ದೀರ್ಘಾವಧಿಯ ಪರಿಶ್ರಮಕ್ಕೆ ಫಲಪ್ರದ ಫಲಿತಾಂಶಗಳನ್ನು ನೀಡಲಿದೆ. ವೃಷಭ ರಾಶಿಯ ಜನರು ಹೊಸ ವರ್ಷದಲ್ಲಿ ಅಧಿಕಾರದ ಉನ್ನತ ಸ್ಥಾನವನ್ನು ಆಕ್ರಮಿಸಿಕೊಳ್ಳುವ ಅವಕಾಶವನ್ನು ಹೊಂದಿರುತ್ತಾರೆ. ಇವರಿಗೆ ಶನಿ, ಗುರು, ರಾಹುವಿನ ಸಂಪೂರ್ಣ ಆಶೀರ್ವಾದ ದೊರೆಯುವುದರಿಂದ ತಮಗೆ ಇಷ್ಟವಾದ ಕೆಲಸವನ್ನು ಮಾಡಿ ಕೈತುಂಬಾ ಹಣ ಗಳಿಸುವ ಭಾಗ್ಯವನ್ನು ಹೊಂದಿರುತ್ತಾರೆ. ಮೇ ತಿಂಗಳ ನಂತರ ಗುರು ಸಂಕ್ರಮಣ ಸಂಭವಿಸುವುದರಿಂದ ವೃತ್ತಿ ಕ್ಷೇತ್ರದಲ್ಲಿನ ಎಲ್ಲ ಅಡೆತಡೆಗಳು ನಿವಾರಣೆಯಾಗುತ್ತವೆ.

ಮಿಥುನ ರಾಶಿ

ಮಿಥುನ ರಾಶಿಯಲ್ಲಿ ಜನಿಸಿದವರಿಗೆ 2025 ಸುವರ್ಣ ವರ್ಷವಾಗಲಿದೆ. ಅವರು ಅನಿರೀಕ್ಷಿತ ಲಾಭಗಳನ್ನು ಪಡೆಯಲಿದ್ದಾರೆ. ಅದರಲ್ಲೂ ವಿಶೇಷವಾಗಿ ವೃತ್ತಿಜೀವನದ ವಿಷಯದಲ್ಲಿ ಹೆಚ್ಚಿನ ಲಾಭಗಳು ಬರಲಿವೆ. ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಸ್ತುತ ಸ್ಥಾನದಿಂದ ಮುಂದಿನ ಹಂತಕ್ಕೆ ಅಂದರೆ, ಪ್ರಮೋಷನ್​ ಸಿಗುವ ಸಾಧ್ಯತೆಯಿದೆ. ಗುರುವಿನ ಆಶೀರ್ವಾದದಿಂದ ನಿಮ್ಮ ವೃತ್ತಿ ಜೀವನ ಉತ್ತಮವಾಗಿರುತ್ತದೆ. ವ್ಯಾಪಾರದಲ್ಲಿ ತೊಡಗಿರುವವರು ಪ್ರಚಂಡ ಆರ್ಥಿಕ ಬೆಳವಣಿಗೆಯನ್ನು ಅನುಭವಿಸುತ್ತಾರೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ಡಾಟ್​ ನೆಟ್​ ಸೈಟ್ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net