ಬೆಟ್ಟದಪುರದಲ್ಲಿ ಹೋಮ

01BTP01
Published on

ಬೆಟ್ಟದಪುರ: ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸೋಮವಾರ ಅಯೋಧ್ಯಾ ಶ್ರೀರಾಮನ ಮಂತ್ರಾಕ್ಷತೆ ಅಭಿಯಾನ ನಡೆಯಿತು. ಜ.22ರಂದು ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮನ ವಿಗ್ರಹ ಪ್ರತಿಷ್ಠಾಪನೆ ಹಾಗೂ ಮಂದಿರ ಲೋಕಾರ್ಪಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆಗಮಿಸಿದ ಮಂತ್ರಾಕ್ಷತೆಯನ್ನು ಬೆಟ್ಟದಪುರ ಹೋಬಳಿ ವ್ಯಾಪ್ತಿಯ ಭಕ್ತ ಸಮೂಹಕ್ಕೆ ತಲುಪಿಸುವ ನಿಟ್ಟಿನಲ್ಲಿ ಮಂತ್ರಾಕ್ಷತೆ ಅಭಿಯಾನ ಆಯೋಜಿಸಲಾಗಿತ್ತು. ದೇವಸ್ಥಾನದ ಆವರಣದಲ್ಲಿ ಶ್ರೀ ರಾಮ ತಾರಕ ಹೋಮಗಳು ಹಾಗೂ ವಿಶೇಷ ಪೂಜೆಗಳು ಸಂಪ್ರದಾಯದಂತೆ ಜರುಗಿದವು. ಇದೆ ವೇಳೆ ರಾಜಸ್ಥಾನ ಮೂಲದ ಮಹಿಳೆಯರ ತಂಡ ಭಜನೆ ಮಾಡುವ ಮೂಲಕ ಭಕ್ತಿ ಭಾವ ಮೆರೆದರು.
ಈ ವೇಳೆ ಹೋಬಳಿ ವ್ಯಾಪ್ತಿಯ ರಾಮಭಕ್ತರು, ಹಿಂದುಪರ ಸಂಘಟನೆ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net