

ಎಚ್.ಡಿ.ಕೋಟೆ : ಒಗ್ಗಟ್ಟಿನಿಂದ ಸಾಗಿದಾಗ ಮಾತ್ರ ವ್ಯಕ್ತಿ ಮತ್ತು ಸಮುದಾಯದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ತಾಲೂಕು ವಿಶ್ವಕರ್ಮ ಯುವ ಬ್ರಿಗೇಡ್ ವತಿಯಿಂದ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವಕರ್ಮ ಸಮುದಾಯ ಸಾಮಾನ್ಯವಾಗಿ ಯಾರ ಬಳಿಯೂ ಬೇಡಿಕೆ ಇಡುವುದಿಲ್ಲ. ತಮ್ಮಷ್ಟಕ್ಕೆ ತಾವೇ ಸಾಧನೆ ಮಾಡಿಕೊಂಡು ತೃಪ್ತಿ ಪಡುವ ಗಣ್ಯರು ಇದ್ದಾರೆ. ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ಸಾಗಿ ವಿಜಯ ಸಾಧಿಸಬೇಕು ಎಂದವರು ಸಲಹೆ ನೀಡಿದರು.
ವಿಶ್ವಕರ್ಮ ಸಮುದಾಯದ ಶೈಕ್ಷಣಿಕ ಅಭಿವೃದ್ಧಿಗಾಗಿ ನನ್ನ ತಂದೆ ಹೆಸರಲ್ಲಿ 1 ಲಕ್ಷ ರೂ. ನಿಧಿ ಸಪರ್ಮಿಸುವೆ ಎಂದು ಶಾಸಕ ಅನಿಲ್ ಚಿಕ್ಕಮಾದು ಭರವಸೆ ನೀಡಿದರು. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಈ ನಿಧಿ ವಿನಿಯೋಗಿಸಿ ಎಂದು ಅವರು ಸಲಹೆ ನೀಡಿದರು.
ವಿಶ್ವಕರ್ಮ ನಿಗಮದ ಮಾಜಿ ಅಧ್ಯಕ್ಷ ನಂದಕುಮಾರ್, ತಹಸೀಲ್ದಾರ್ ಸುರೇಶ್ ಆಚಾರ್,
ಮುಖಂಡರಾದ ರಾಜು ಕಾರ್ಯ, ವೆಂಕಟೇಶ, ನಿಂಗರಾಜು ಇತರರು ಹಾಜರಿದ್ದರು