ಮನೆ ಹಳ್ಳಿ ಮಠದಲ್ಲಿ ಸಾಧಕರಿಗೆ ಸನ್ಮಾನ

17spt1
ಸೋಮವಾರಪೇಟೆ ತಾಲೂಕಿನ ಆಲೂರು-ಸಿದ್ದಾಪುರ ಮನೆ ಹಳ್ಳಿ ಮಠದಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಶ್ರೀಸಿದ್ದಲಿಂಗ ಸ್ವಾಮೀಜಿ, ಯದುವೀರ್, ಮಂತರ್‌ಗೌಡ, ಭಾರತಿ, ಮಂಜು ಇದ್ದರು.
Published on

 ಸೋಮವಾರಪೇಟೆ : ತಾಲೂಕಿನ ಆಲೂರು ಸಿದ್ದಾಪುರ ಸಮೀಪದ ತಪೂಕ್ಷೇತ್ರ ಮನೆ ಹಳ್ಳಿ ಮಠದಲ್ಲಿ ಈಚೆಗೆ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

ನಿವೃತ್ತ ನ್ಯಾಯಾಧೀಶ ಎಂ.ಆರ್.ದೇವಪ್ಪ, ಮಾಹಿತಿ ಹಕ್ಕು ಆಯೋಗದ ನಿವೃತ್ತ ಆಯುಕ್ತ ವಿರೂಪಾಕ್ಷಯ್ಯ, ವಿಶ್ವಕಪ್ ವಿಜೇತ ಭಾರತ ಖೋ-ಖೋ ತಂಡದ ಆಟಗಾರ್ತಿ ಚೈತ್ರಾ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಹಾಕಿ ಆಟಗಾರ ವಿಕ್ರಾಂತ್, ಏಷಿಯನ್ ಕಪ್ ವಿಜೇತ ಹಾಕಿ ತಂಡದ ತರಬೇತುದಾರ ಸಿ.ಬಿ.ಜನಾರ್ದನ್, ಭರತನಾಟ್ಯ ಕಲಾವಿದೆ ಮಿಲನಾ ಭರತ್, ಪ್ರಗತಿಪರ ಕೃಷಿಕ ಡಿ.ಬಿ.ಧರ್ಮಪ್ಪ, ಸಾಹಿತಿ ಉಳುವಂಗಡ ಕಾವೇರಿ ಉದಯ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಜಯಮ್ಮ, ಪತ್ರಕರ್ತ ಕೆ.ವಿ.ಪರಮೇಶ್, ಕಾವೇರಿ ಸ್ವಚ್ಛತಾ ಆಂದೋಲನ ಕಾರ್ಯದರ್ಶಿ ಚಂದ್ರಮೋಹನ್ ಅವರನ್ನು ತುಮಕೂರು ಸಿದ್ಧಗಂಗಾ ಮಠದ ಶ್ರೀಸಿದ್ಧಲಿಂಗ ಸ್ವಾಮೀಜಿ ಸನ್ಮಾನಿಸಿದರು.

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಡಾ.ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ಬೇಲೂರು ಶಾಸಕ ಎಚ್.ಕೆ.ಸುರೇಶ್ ಮತ್ತಿತರ ಗಣ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net