

ಶಿವಮೊಗ್ಗ: ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಅಭಿನಂದನಾ ಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಜು.13ರಂದು ಸಂಜೆ 6ಕ್ಕೆ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಕೆ.ಸಿ.ನಟರಾಜ್ ಭಾಗವತ್ ಹೇಳಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ರಘುನಾಥ್ ಹಾಗೂ ಜಿಲ್ಲಾ ಪ್ರತಿನಿಧಿ ಎನ್.ಎಂ.ರಘುರಾಮ್ ಅವರನ್ನು ಅಭಿನಂದಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಹೊಸನಗರದಲ್ಲಿ ಉಚಿತ ಗುರುಕುಲ ಶಿಕ್ಷಣ ನೀಡುತ್ತಿರುವ ಪುರೋಹಿತರಾದ ವೇ.ಬ್ರ. ಶ್ರೀ ರಾಘವೇಂದ್ರ ಘನಪಾಠಿಗಳು ಹಾಗೂ ವೈದ್ಯಕೀಯ ಕ್ಷೇತ್ರ ಹಾಗೂ ಸಮಾಜಸೇವೆಯಲ್ಲಿ ಸೇವೆ ಸಲ್ಲಿಸಿದ ಹಿರಿಯ ವೈದ್ಯ ಡಾ. ಪಿ.ನಾರಾಯಣ್, ಡಿವಿಎಸ್ ಪ್ರೌಢಶಾಲೆ ನಿವೃತ್ತ ಅಧ್ಯಾಪಕ ಎನ್.ರಾಮಮೂರ್ತಿ, ಹಿರಿಯ ಲೆಕ್ಕ ಪರಿಶೋಧಕ ಕೆ.ವಿ. ವಸಂತಕುಮಾರ್, ಉಮಾ ಕೃಷ್ಣಮೂರ್ತಿ, ನಾಗರತ್ನ ಪ್ರಸನ್ನ ಅವರನ್ನು ಸನ್ಮಾನಿಸಲಾಗುವುದು ಎಂದರು.
ನಿರ್ದೇಶಕರಾದ ವೆಂಕಟೇಶ್ ಮೂರ್ತಿ, ಸೂರ್ಯನಾರಾಯಣ್, ಶಂಕರನಾರಾಯಣ್, ಸುಬ್ರಹ್ಮಣಭಟ್, ರಾಘವೇಂದ್ರ ಉಡುಪ, ಸರಳಾ ಹೆಗ್ಡೆ, ಕೇಶವಮೂರ್ತಿ, ಕುಲಕರ್ಣಿ, ರಾಮಗೋಪಾಲ ಶಾಸ್ತ್ರಿ ಸುದ್ದಿಗೋಷ್ಠಿಯಲ್ಲಿದ್ದರು.