ಮೇಘ ಗಿರಿಗೆ ಛಾಯಾಗ್ರಾಹಕರ ಸಂಘದಿಂದ ಸನ್ಮಾನ

mega giri
ಎನ್.ಆರ್.ಪುರ ಛಾಯಾಗ್ರಾಹಕ ಸಂಘದಿಂದ ಮೇಘ ಗಿರಿ ಅವರನ್ನು ಸನ್ಮಾನಿಸಲಾಯಿತು. ಸಾಜು, ವಿಜು, ಬಾಲಣ್ಣ, ಗಿರಿರಾಜ್, ಸಮೀರ್, ಎಲಿಯಾಸ್ ಇದ್ದರು.
Published on

ಎನ್.ಆರ್.ಪುರ: ತಾಲೂಕು ಛಾಯಾಗ್ರಾಹಕರ ಸಂಘದವರು ಮಂಗಳವಾರ ನಡೆದ ಸಭೆಯಲ್ಲಿ ಛಾಯಾಗ್ರಾಹಕ ಮೇಘ ಗಿರಿ ಅವರನ್ನು ಸನ್ಮಾನಿಸಿದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಪೋಟೋಗ್ರಾಫರ್ ಅಸೋಸಿಯೇಷನ್‌ಯಿಂದ ಡಿಜಿ ಇಮೇಜ್ ಸಮ್ಮೇಳನದಲ್ಲಿ ತಾಲೂಕಿನ ಛಾಯಾಗ್ರಾಹಕರಾದ ಎನ್.ಆರ್.ಪುರ ಮೇಘ ಗಿರಿ ಹಾಗೂ ಬಾಳೆಹೊನ್ನೂರಿನ ಜಗದೀಶ್ ಅವರಿಗೆ ಛಾಯಾ ಗುರು ಪ್ರಶಸ್ತಿ ನೀಡಿ ಗೌರವಿಸಿದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಸಾಜು ಮಾತನಾಡಿ, ನಮ್ಮ ತಾಲೂಕು ಛಾಯಾಗ್ರಾಹಕ ಸಂಘದ ಇಬ್ಬರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆಯ ವಿಷಯ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮೇಘ ಗಿರಿ, ನನಗೆ ಛಾಯಾಗ್ರಾಹಕ ವೃತ್ತಿ ಕಲಿಸಿದ ಗುರುಗಳಿಗೆ, ನನ್ನ ತಂದೆ, ತಾಯಿಗೆ ಈ ಸನ್ಮಾನ ಅರ್ಪಿಸುತ್ತೇನೆ ಎಂದರು. ಸಂಘದ ಉಪಾಧ್ಯಕ್ಷ ವಾಸು, ಕಾರ್ಯದರ್ಶಿ ಅಜೇಯ್ , ಜಿಲ್ಲಾ ಸಂಘದ ಗೌರವಾಧ್ಯಕ್ಷ ಜೋಯಿ, ತಾಲೂಕು ಸಂಘದ ಗೌರವಾಧ್ಯಕ್ಷ ಎಲಿಯಾಸ್, ಸಂಘದ ಪೂರ್ವಾಧ್ಯಕ್ಷರಾದ ವಿಜು, ಬಾಲಣ್ಣ, ಅಭಿನವ ಗಿರಿರಾಜ್, ಸಂಘದ ಸದಸ್ಯರಾದ ಸಮೀರ್, ಅರ್ಜುನ್, ಸಿಜ್ಜು, ಪಪಂ ಸದಸ್ಯೆ ಜುಬೇದಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net