ಸಮಾಜ ಸೇವಕನಿಗೆ ಸನ್ಮಾನ

17KMD-1
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 133 ಜಯಂತಿಯಂದು ಮದ್ದೂರು ತಾಲೂಕು ಆಡಳಿತ ವತಿಯಿಂದ ಅಂಬೇಡ್ಕರ್ ಅಭಿನಂದನೆ ಸ್ವೀಕರಿಸಿದ ಸಮಾಜ ಸೇವಕ ಮುಡೀನಹಳ್ಳಿ ತಿಮ್ಮಯ್ಯ ಅವರನ್ನು ಕೆ.ಎಂ.ದೊಡ್ಡಿಯಲ್ಲಿ ಸ್ಥಳೀಯ ನಾಗರಿಕರು ಸನ್ಮಾನಿಸಿದರು.
Published on

ಕೆ.ಎಂ.ದೊಡ್ಡಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 133 ಜಯಂತಿಯಂದು ಮದ್ದೂರು ತಾಲೂಕು ಆಡಳಿತ ವತಿಯಿಂದ ಅಂಬೇಡ್ಕರ್ ಅಭಿನಂದನೆ ಸ್ವೀಕರಿಸಿದ ಸಮಾಜ ಸೇವಕ ಮುಡೀನಹಳ್ಳಿ ತಿಮ್ಮಯ್ಯ ಅವರನ್ನು ಸ್ಥಳೀಯ ನಾಗರಿಕರು ಸನ್ಮಾನಿಸಿದರು.

ಯಶಸ್ವಿನಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಮುಡೀನಹಳ್ಳಿ ತಿಮ್ಮ ಅವರನ್ನು ಸನ್ಮಾನಿಸಿ ಕಳೆದ 30 ವರ್ಷಗಳಿಂದ ಸಾರ್ವಜನಿಕ ರಂಗದಲ್ಲಿ ಸಾಮಾಜಿಕ ಕಳಕಳಿ ಇಟ್ಟು ಕೊಂಡು ಸೇವೆ ಮಾಡುತ್ತಿರುವುದನ್ನು ತಾಲೂಕು ಆಡಳಿತ ಗುರುತಿಸಿ ಅಭಿನಂದಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ದಲಿತ ಸಂಘದ ಮುಖಂಡರಾದ ಶಿವಣ್ಣ, ಮರಿಸ್ವಾಮಿ, ಹೊಂಬಾಳಯ್ಯ, ಪುಟ್ಟಸ್ವಾಮಿ, ಮಲ್ಲಯ್ಯ, ರುದ್ರಯ್ಯ, ಮಹದೇವು ಸೇರಿದಂತೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net