ರಾಣೆಬೆನ್ನೂರ-: ತಾಲೂಕಿನ ಗುಡಿಹೊನ್ನತ್ತಿ ಗ್ರಾಮದ ಶ್ರೀ ಹೊನ್ನಮ್ಮದೇವಿಯ ಜಾತ್ರಾ ಮಹೋತ್ಸವವು ಮಾ. 14ರಿಂದ 16ರವರೆಗೆ ಜರುಗಲಿದೆ.
14ರಂದು ಜಾತ್ರಾಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. 15ರಂದು ದೇವಿಗೆ ಹರಕೆ ಮತ್ತಿತರ ಪೂಜೆಗಳು ನಡೆಯಲಿವೆ. 16ರಂದು ಓಕಳಿ, ರುದ್ರಾಭಿಷೇಕ, ಮಹಾ ಮಂಗಳಾರತಿ ಜರುಗಲಿವೆ ಎಂದು ದೇವಸ್ಥಾನದ ಸಮಿತಿ ಪ್ರಕಟಣೆ ತಿಳಿಸಿದೆ.