

ಹಾಂಕಾಂಗ್: ಚೀನಾದ ರಾಷ್ಟ್ರಗೀತೆಯನ್ನು ಅಮಾನ್ಯಗೊಳಿಸುವ ಮಸೂದೆಯೊಂದನ್ನು ಹಾಂಕಾಂಗ್ ಸರ್ಕಾರ ಗುರುವಾರ ಅಂಗೀಕರಿಸಿದೆ. ಇದರೊಂದಿಗೆ ಚೀನಾದ ರಾಷ್ಟ್ರಗೀತೆ ಮಸೂದೆ ಹಾಂಕಾಂಗ್ ಮಟ್ಟಿಗೆ ಅಕ್ರಮವೆಂದು ಪರಿಗಣಿಸಲ್ಪಟ್ಟಿದೆ. ಶಾಸನಸಭೆಯ ಈ ನಡೆಯನ್ನು ಡೆಮಾಕ್ರಸಿ ವಿರೋಧಿಸುವ ಪಕ್ಷದ ಸದಸ್ಯರು ವಿರೋಧಿಸಲು ಪ್ರಯತ್ನಿಸಿದರು. ಅಲ್ಲದೆ ಬಹುತೇಕ ಪ್ರೊ ಡೆಮಾಕ್ರಸಿ ವಿರೋಧಿಸುವ ಸದಸ್ಯರು ಸಭಾತ್ಯಾಗ ಮಾಡಿದರು. ಈ ಬೆಳವಣಿಗೆಯ ನಡುವೆ ಈ ಮಸೂದೆಯನ್ನು ಶಾಸನ ಸಭೆ 41 ಸದಸ್ಯರ ಉಪಸ್ಥಿತಿಯಲ್ಲಿ 40 ಪರ ಮತ್ತು ಒಂದು ವಿರೋಧ ಮತಗಳೊಂದಿಗೆ ಅಂಗೀಕರಿಸಿದೆ. ಹಾಂಕಾಂಗ್ ಶಾಸನ ಸಭೆಯ ಈ ನಡೆ ಚೀನಾವನ್ನು ಅವಮಾನಿಸುವುದೇ ಆಗಿತ್ತು. ಅದರಲ್ಲಿ ಅದು ಯಶಸ್ಸು ಸಾಧಿಸಿದೆ ಎಂಬ ವಿಶ್ಲೇಷಣೆ ಈಗ ಕೇಳಿಬಂದಿದೆ.
ಇದನ್ನೂ ಓದಿ: ಗಂಡ-ಹೆಂಡ್ತಿ ಜಗಳ ವಿಮಾನದಲ್ಲಿ ಬಾಂಬ್ ಇಡುವ ತನಕ…
ಚೀನಾ ಅಂಗೀಕರಿಸಿರುವ ರಾಷ್ಟ್ರಗೀತೆ ಮಸೂದೆಯ ವಿಚಾರವಾಗಿ ಹಾಂಕಾಂಗ್ನ ಪ್ರೊ ಡೆಮಾಕ್ರಸಿ ಪಕ್ಷದ ಸದಸ್ಯರು ವಿರೋಧಿಸಿದ್ದಾರೆ. ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದೌರ್ಜನ್ಯ, ಅರೆ ಸ್ವಾಯತ್ತ ನಗರವಾಸಿಗಳ ಹಕ್ಕುಗಳನ್ನು ಮೊಟಕುಗೊಳಿಸುವ ಕಾನೂನು ಎಂದು ಟೀಕಿಸಿದ್ದಾರೆ. ಇದೇ ವೇಳೆ, ಬೀಜಿಂಗ್ ಪರ ಬಹುಸಂಖ್ಯಾತರು ಹಾಂಕಾಂಗ್ ಅನ್ನು ಹಿಡಿತದಲ್ಲಿ ಇರಿಸಲು ಇದು ಅವಶ್ಯಕತೆ ಇತ್ತು ಎಂದು ಹೇಳಿದ್ದಾರೆ.
ಶಾಸನ ಸಭೆ ನಡೆಯುವಲ್ಲಿಗೆ ರೇ ಚಾನ್ ಎಂಬ ಪ್ರತಿನಿಧಿ ಪಾಟ್ ಒಂದನ್ನು ಪೇಪರ್ನಲ್ಲಿ ಸುತ್ತಿ ಕೊಂಡೊಯ್ಯಲು ಪ್ರಯತ್ನಿಸಿದ್ದರು. ಆದರೆ, ಭದ್ರತಾ ಪಡೆ ತಡೆದ ಕಾರಣ ಪಾಟ್ ಅನ್ನು ಅಲ್ಲೇ ಬಿಟ್ಟರು. ಅವರ ಜತೆಗೆ ಆಗಮಿಸಿದ್ದ ಇನ್ನೊಬ್ಬ ಪ್ರತಿನಿಧಿಯನ್ನೂ ಭದ್ರತಾ ಪಡೆ ಒಳಸೇರಿಸಲಿಲ್ಲ. ಇಬ್ಬರನ್ನೂ ಶಾಸನಸಭೆಯಿಂದ ಹೊರಹಾಕಲಾಗಿತ್ತು. ಚೀನಾದ ರಾಷ್ಟ್ರಗೀತೆ ಮಸೂದೆ ಮತ್ತು ರಾಷ್ಟ್ರೀಯ ಸುರಕ್ಷಾ ಕಾನೂನುಗಳನ್ನು ಹಾಂಕಾಂಗ್ ಮೇಲಿನ ಹಿಡಿತ ಬಿಗಿಗೊಳಿಸುವ ಸಲುವಾಗಿಯೇ ಮಾಡಿದೆ ಎಂಬುದು ಪ್ರತಿಪಕ್ಷ ಸದಸ್ಯರ ಪ್ರತಿಪಾದನೆ. ಬೀಜಿಂಗ್ 2015ರಿಂದಲೂ ಹಾಂಕಾಂಗ್ ಮೇಲೆ ರಾಷ್ಟ್ರಗೀತೆ ಹೇರುವ ಪ್ರಯತ್ನ ಮಾಡುತ್ತಲೇ ಬಂದಿದೆ. ಹೀಗಾಗಿ ಹಾಂಕಾಂಗ್ನಲ್ಲಿ ಮತ್ತೆ ಸಾಮಾಜಿಕ ಅಶಾಂತಿ ಹೆಚ್ಚಾಗುವ ಹಂತದಲ್ಲಿದೆ. (ಏಜೆನ್ಸೀಸ್)