ಹನಿಟ್ರ್ಯಾಪ್ ಗ್ಯಾಂಗ್ ಬಂಧನ

Crime Logo
Published on

ಬೆಂಗಳೂರು: ಹನಿಟ್ರ್ಯಾಪ್ ಮಾಡಿ ಹಣ ದೋಚುತ್ತಿದ್ದ ಗ್ಯಾಂಗ್ ಅನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ಸಹೋದರಿಯರಾದ ಅಣ್ಣಮ್ಮ(೪೦) ಸ್ನೇಹ ಮತ್ತು ಲೋಕೇಶ್ ಬಂಧಿತ ಆರೋಪಿಗಳು.
ಸುದೇಂದ್ರ ಎಂಬುವವರನ್ನು ಬ್ಲ್ಯಾಕ್‌ಮೇಲ್ ಮಾಡಿ ೮೨ ಲಕ್ಷ ರೂ. ಸುಲಿಗೆ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?
ಸ್ನೇಹಿತರ ಮೂಲಕ ಸುಧೀಂದ್ರ ಅವರಿಗೆ ಆರೋಪಿತೆ ಅಣ್ಣಮ್ಮ ಪರಿಚಯವಾಗಿದ್ದು, ಅವರ ೫ ವರ್ಷದ ಪುತ್ರನಿಗೆ ಕ್ಯಾನ್ಸರ್ ಇರುವ ವಿಚಾರ ತಿಳಿದು ಆಕೆಗೆ ಕರೆ ಮಾಡಿ ಉತ್ತರಹಳ್ಳಿ ರಸ್ತೆಯ ರಜತಾದ್ರಿ ಹೋಟೆಲ್ ಬಳಿಗೆ ಕರೆಸಿಕೊಂಡಿದ್ದರು. ಅಲ್ಲಿಗೆ ಬಂದ ಅಣ್ಣಮ್ಮ, ೫ ಸಾವಿರ ರೂ. ಕೊಟ್ಟು ಕಳುಹಿಸಿದ್ದರು. ಆನಂತರ ಪದೇಪದೆ ಕರೆ ಮಾಡಿ ಆನ್‌ಲೈನ್‌ನಲ್ಲಿ ಮಹಿಳೆ, ಹಣ ಪಡೆಯುತ್ತಿದ್ದಳು. ಮೇ ನಲ್ಲಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇರುವ ಹೋಟೆಲ್‌ಗೆ ಮಹಿಳೆ, ಸುಧೀಂದ್ರ ಅವರನ್ನು ಕರೆಸಿಕೊಂಡಿದ್ದಳು. ಇಬ್ಬರು ಸಲುಗೆಯಿಂದ ಇದ್ದ ದೃಶ್ಯಾವಳಿಗಳನ್ನು ಸೆರೆ ಹಿಡಿದುಕೊಂಡ ಅಣ್ಣಮ್ಮ ಆನಂತರ ಬ್ಲ್ಯಾಕ್‌ಮೇಲ್‌ಗೆ ಶುರು ಮಾಡಿದ್ದಳು. ಆದರೂ ಮತ್ತೆರೆಡು ಬಾರಿ ಹೋಟೆಲ್‌ನಲ್ಲಿ ಇಬ್ಬರು ಖಾಸಗಿ ಕ್ಷಣಗಳನ್ನು ಕಳೆದಿದ್ದರು. ಈ ಎಲ್ಲ ವಿಡಿಯೋವನ್ನು ಅಣ್ಣಮ್ಮ, ತನ್ನ ಸಹೋದರಿ ಸ್ನೇಹ ಮತ್ತು ಲೋಕೇಶ್ ಜತೆಗೆ ಹಂಚಿಕೊಂಡು ಅವರ ಕಡೆಯಿಂದಲೂ ಬ್ಲ್ಯಾಕ್‌ಮೇಲ್ ಮಾಡಿಸಿ ಹಣ ಸುಲಿಗೆ ಮಾಡಿಸಿದ್ದಳು. ಸುದೇಂದ್ರ ಅವರ ಮೊಬೈಲ್ ವಾಟ್ಸ್‌ಆ್ಯಪ್‌ಗೆ ವಿಡಿಯೋ ಮತ್ತು ೆಟೋ ಕಳುಹಿಸಿ ೭೫ ಲಕ್ಷ ರೂ.ಗೆ ಬೇಡಿಕೆ ಒಡ್ಡಿದ್ದಾರೆ. ಕೊಡದಿದ್ದರೇ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ೮೨ ಲಕ್ಷ ರೂ. ಜಮೆ ಮಾಡಿಸಿಕೊಂಡಿದ್ದರು. ಇಷ್ಟಾದರೂ ಮತ್ತೆ ೪೨ ಲಕ್ಷ ರೂ. ಕೊಡುವಂತೆ ಡಿಮ್ಯಾಂಡ್ ಮಾಡಿದ್ದರು. ಅಷ್ಟೊಂದು ಹಣ ಇಲ್ಲದೆ ಇದ್ದ ಕಾರಣ ನೊಂದ ಸುದೇಂದ್ರ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net