

Honeymoon Murder: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಮೇಘಾಲಯ ಹನಿಮೂನ್ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಆಗಿರುವ ಸೋನಮ್ ಮತ್ತು ಆಕೆಯ ಪ್ರಿಯಕರ ಸದ್ಯ ಪೊಲೀಸ್ ಠಾಣೆಯಲ್ಲಿ ಕಂಬಿ ಎಣಿಸುತ್ತಿದ್ದಾರೆ. ಪ್ರಸ್ತುತ ಕೊಲೆ ಪ್ರಕರಣದ ತನಿಖೆ ಚುರುಕಿನಿಂದ ಸಾಗಿದ್ದೇ ಆದರೂ ಸೋನಮ್ ಮಾತ್ರ ಸತ್ಯ ಬಾಯ್ಬಿಡುತ್ತಿಲ್ಲ. ಇದು ಖಾಕಿಗೂ ಕೊಂಚ ಕಷ್ಟವೆನಿಸಿದೆ. ಈ ಮಧ್ಯೆ ಮಗ ರಾಜಾ ರಘುವಂಶಿಯನ್ನು ಕಳೆದುಕೊಂಡ ತಾಯಿ ಕಣ್ಣೀರಿಟ್ಟಿದ್ದು, ಸೋನಮ್ ಕೇಸ್ ಹಾದಿಯನ್ನು ದಿಕ್ಕು ತಪ್ಪಿಸುವ ಪ್ರಯತ್ನದಲ್ಲಿದ್ದಾಳೆ ಎಂದು ಆರೋಪಿಸಿದ್ದಾರೆ.
ಪುತ್ರನ ಅಗಲಿಕೆಯ ನೆನಪಲ್ಲಿ ಕಣ್ಣೀರಿಡುತ್ತಿರುವ ತಾಯಿ ಉಮಾ ರಘುವಂಶಿ, "ಈ ಪ್ರಕರಣದಲ್ಲಿ ಸೋನಮ್ ತುಂಬ ದಿಕ್ಕು ತಪ್ಪಿಸುತ್ತಿದ್ದಾಳೆ. ಘಟನೆಯೇ ಸತ್ಯಾಸತ್ಯತೆಯನ್ನು ಆಕೆ ಪೂರ ಬಿಚ್ಚಿಡಬೇಕು. ಅವಳ ಬಾಯಿಂದ ಸತ್ಯ ಹೊರಬರುವವರೆಗೂ ನನಗೆ ಶಾಂತಿ, ನಿಟ್ಟುಸಿರಿಲ್ಲ. ಆಕೆ ನನ್ನ ಪುತ್ರನನ್ನು ಸಾಯಿಸಿದ್ದೇಕೆ? ಈ ವಿಷಯ ಸರಿಯಾಗಿ ಹೇಳುವವರೆಗೂ ಅವಳು ಜೈಲಿನಲ್ಲೇ ಕೊಳೆಯಬೇಕು. ಯಾವ ತಪ್ಪು ಮಾಡದ ರಾಜಾ ಇವಳ ಕೈಯಿಂದ ಏಕೆ ಕೊಲೆಯಾದ" ಎಂದು ಹೇಳಿದ್ದಾರೆ.
"ಸೋನಮ್ ನಡತೆ ಬಗ್ಗೆ ಅನುಮಾನವಿತ್ತು. ಈ ಬಗ್ಗೆ ನಾನು ಪ್ರಶ್ನಿಸಿದ್ದೆ. ಮದುವೆಯಾದ ಕೆಲವು ದಿನಗಳ ಕಾಲ ನಮ್ಮ ಮನೆಯಲ್ಲೇ ಇದ್ದಳು. ಹಮ್ಮಿಕೊಳ್ಳಲಾಗಿದ್ದ ಪೂಜೆ, ಕಾರ್ಯಗಳನ್ನು ಇಲ್ಲಿಯೇ ಮಾಡಿ ಮುಗಿಸಿದ್ದಳು. ಮಗನಿಗೆ ತಿಂಡಿ ಮಾಡಿ, ಕಾಫಿಯನ್ನೂ ಕೊಟ್ಟಿದ್ದಳು. ಇಷ್ಟೆಲ್ಲ ಚೆನ್ನಾಗಿದ್ದವಳು ಅದೇಕೆ ನನ್ನ ಪುತ್ರನನ್ನು ಅಲ್ಲಿಗೆ ಕರೆದೊಯ್ದು ಕೊಲೆಗೈದಳು? ರಾಜಾ ಸೋನಮ್ನ ಮದುವೆ ಆಗಿದ್ದೇ ತಪ್ಪಾ? ಅವನಿಗ್ಯಾಕೆ ಇಂಥಾ ಕಠಿಣ ಶಿಕ್ಷೆ? ಅವಳ ಬಾಯಿಂದ ಸತ್ಯ ಹೊರಬರಬೇಕು. ಅದನ್ನು ನನ್ನ ಈ ಕಿವಿಯಿಂದಲೇ ಕೇಳಬೇಕು. ಆಗಲೇ ನನ್ನ ಮನಸ್ಸಿಗೆ ನೆಮ್ಮದಿ ದೊರೆಯುವುದು" ಎಂದು ಉಮಾ ಭಾವುಕರಾಗಿ ಮಾತನಾಡಿದ್ದಾರೆ,(ಏಜೆನ್ಸೀಸ್). ಇದನ್ನೂ ಓದಿ: ಕೇಂದ್ರ ಬಸ್ ನಿಲ್ದಾಣದಲ್ಲಿ ಮಾಹಿತಿ ಕೇಂದ್ರ ಉದ್ಘಾಟನೆ, ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದ್ದೇನು ಗೊತ್ತಾ?
ಮೇ.23ರಂದು ಮೇಘಾಲಯದ ಚಿರಾಪುಂಜಿಗೆ ಹನಿಮೂನ್ ಸಲುವಾಗಿ ಪ್ರಯಾಣಿಸಿದ್ದ ಇಂದೋರ್ನ ದಂಪತಿ ಕಾಣೆಯಾಗಿದ್ದರು. ಈ ಪ್ರಕರಣ ಪೊಲೀಸರಿಗೆ ದೊಡ್ಡ ಸವಾಲಾಗಿ ಎದುರಾಗಿತ್ತು. ದಂಪತಿಯ ಪೈಕಿ ಮೊದಲು ರಾಜು ಮೃತದೇಹ ಝರಿ ನಡುವೆ ಪತ್ತೆಯಾಗಿದ್ದು, ಕೊಳೆತ ಸ್ಥಿತಿಯಲ್ಲಿ ಜೂ. 02ರಂದು ಸಿಕ್ಕಿತು. ಈ ಕೇಸ್ನಲ್ಲಿ ಕಾಣೆಯಾಗಿದ್ದ ಪತ್ನಿಯ ಹುಡುಕಾಟದಲ್ಲಿದ್ದ ಪೊಲೀಸರಿಗೆ ಕಡೆಗೂ ಆಕೆಯ ಕೊಲೆಗಾತಿ ಎಂಬುದು ಮೂವರ ಬಂಧನದ ಬಳಿಕ ಸ್ಪಷ್ಟವಾಗಿದೆ. ಕೊಲೆ ಪ್ರಕರಣದಲ್ಲಿ ಸೋನಮ್ ಮತ್ತು ಆಕೆಯ ಪ್ರಿಯಕರ ರಾಜ್ ಕುಶ್ವಾ ಸೇರಿದಂತೆ ಒಟ್ಟು ಐವರನ್ನು ಖಾಕಿ ಬಂಧಿಸಿ, ತನಿಖೆಗೆ ಒಳಪಡಿಸಿದೆ,(ಏಜೆನ್ಸೀಸ್).