ಐಬಿಎಸ್​ಗೆ ಹೋಮಿಯೋ ಚಿಕಿತ್ಸೆ

md homiyoo feb 17 2020
Published on

ತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ ಐಬಿಎಸ್. ಇದು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಯಾಗಿದೆ. ಐಬಿಎಸ್​ನಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಸಮರ್ಪಕ ಜೀವನ ಶೈಲಿ, ಅಧಿಕ ಮಾನಸಿಕ ಒತ್ತಡ, ಆಹಾರದಲ್ಲಿನ ಬದಲಾವಣೆಯಿಂದ ಈ ಸಮಸ್ಯೆ ಬರುತ್ತದೆ.

ಪ್ರಪಂಚದಲ್ಲಿ ಪ್ರಸ್ತುತ ಶೇ.7ರಿಂದ 10 ಜನರು ಇದರಿಂದ ಬಳಲುತ್ತಿದ್ದಾರೆ. ಪುರುಷರಿಗೆ ಹೋಲಿಸಿದಾಗ ಸ್ತ್ರೀಯರಲ್ಲಿ 1.5 ಪಟ್ಟು ಹೆಚ್ಚು ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ಕಾರಣಗಳು:  ಗ್ಯಾಸ್ಟ್ರಿಕ್ ಇನ್​ಫೆಕ್ಷನ್​ಗಳು ಹಾಗೂ ಕರುಳು ಸಂಬಂಧಿ/ ಉದರ ಸಂಬಂಧಿ ಇನ್​ಫೆಕ್ಷನ್​ಗಳು. ್ಣಾನಸಿಕ ಒತ್ತಡ ಅಧಿಕವಾಗುವುದು ಎಣ್ಣೆಯ ಪದಾರ್ಥಗಳು, ಮಸಾಲೆ ಪದಾರ್ಥಗಳು, ಕೊಬ್ಬಿನ ಪದಾರ್ಥ, ಕಲುಷಿತ ನೀರು ಮತ್ತು ಆಹಾರ ಸೇವನೆ. ಕೆಲವು ರೀತಿಯ ಆಂಟಿಬಯೋಟಿಕ್ ಮಾತ್ರೆಗಳನ್ನು ಹೆಚ್ಚಾಗಿ ಸೇವಿಸುವುದರಿಂದ ನಮ್ಮ ಶರೀರದಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ಕೂಡ ನಾಶವಾಗಿ ಈ ಸಮಸ್ಯೆ ಉಂಟಾಗುತ್ತದೆ. ಸರಿಯಾದ ಸಮಯಕ್ಕೆ ಆಹಾರ ತೆಗೆದುಕೊಳ್ಳದಿರುವುದು ಹಾಗೂ ನೀರು ಕಡಿಮೆ ಸೇವಿಸುವುದು ್ಣ ಧೂಮಪಾನ ಮತ್ತು ಮದ್ಯಪಾನ ಸೇವನೆ

ಲಕ್ಷಣಗಳು: ಹೊಟ್ಟೆನೋವು, ಹೊಟ್ಟೆ ಉಬ್ಬರ ಕಂಡುಬರುತ್ತದೆ. 

ನೋವು ಒಂದು ಬಾರಿ ಸಾಧಾರಣವಾಗಿ ಶುರುವಾಗಿ ತೀವ್ರ ಸ್ವರೂಪಕ್ಕೆ ಹೋಗುತ್ತದೆ. ಸಾಮಾನ್ಯವಾಗಿ ಮಲವಿಸರ್ಜನೆ ನಂತರ ನೋವು ಕಾಣಿಸಿಕೊಳ್ಳುತ್ತದೆ. ಪದೇ ಪದೇ ಮಲ ವಿಸರ್ಜನೆ ಮಾಡಬೇಕು ಎನ್ನಿಸುತ್ತದೆ. ಮಲವಿಸರ್ಜನೆ ವೇಳೆ ಅಧಿಕ ಒತ್ತಡ ಹಾಕಬೇಕಾಗುತ್ತದೆ.ಪದೇ ಪದೇ ತೇಗು ಬರುವುದು, ಎದೆ ಉರಿತ, ತಲೆನೋವು, ಸುಸ್ತಾವುದು ಮಾಂಸ ಖಂಡಗಳ ನೋವು, ತಲೆಸುತ್ತು

ರೋಗ ಪತ್ತೆ ವಿಧಾನ: ತೀವ್ರ ಹೊಟ್ಟೆ ನೋವು, ಹೊಟ್ಟೆಯಲ್ಲಿ ಕಿರಿಕಿರಿ, 12 ವಾರಗಳ ಬಳಿಕ ಮಲವಿಸರ್ಜನೆಯಲ್ಲಿ ಪದೇ ಪದೇ ಬದಲಾವಣೆ, ಆತುರದ ಮಲವಿಸರ್ಜನೆ, ರಕ್ತ ಹೀನತೆ, ಆನುವಂಶೀಯವಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಹಾಗೂ 50 ವರ್ಷ ದಾಟಿದ ಬಳಿಕ ದೇಹದ ತೂಕ ಕಡಿಮೆಯಾಗುವುದು, ಮಲದಲ್ಲಿ ರಕ್ತವಿದ್ದ ಸಂದರ್ಭಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಪಾಲಿಸಬೇಕಾದ ಅಂಶಗಳು: ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕು ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಯಬೇಕು ಮಾನಸಿಕ ಒತ್ತಡದಿಂದ ದೂರವಿರಬೇಕು ಸುಲಭವಾಗಿ ಜೀರ್ಣವಾಗುವ ಆಹಾರ ಪದಾರ್ಥಗಳ ಸೇವನೆ ಹಾಗೂ ಎಣ್ಣೆ ಪದಾರ್ಥಗಳನ್ನು ಕಡಿಮೆ ಸೇವಿಸುವುದು. ಹಸಿರು ತರಕಾರಿ, ಹಣ್ಣು ಬಳಕೆ

ಹೋಮಿಯೋಕೇರ್ ಚಿಕಿತ್ಸೆ: ಹೋಮಿಯೋಕೇರ್ ಇಂಟರ್​ನ್ಯಾಷನಲ್​ನಲ್ಲಿ ಜೆನಿಟಿಕ್ ಕಾನ್ಸಿಟ್ಯೂಷನಲ್ ಚಿಕಿತ್ಸಾ ವಿಧಾನದಿಂದ ಸಮಸ್ಯೆಯ ಮೂಲ ಕಾರಣ ಹುಡುಕಿ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಪರಿಹಾರ ಮಾಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net