

ಬೆಂಗಳೂರು: ಚಳಿಗಾಲ ಬಂತು ಎಂದರೆ ಅನೇಕರ ಮೂಗು ಬ್ಲಾಕ್ ಆಗಿ ಗಂಟಲು ಗರಗರ ಎನ್ನುತ್ತದೆ. ನೀವು ಹೋದಲ್ಲೆಲ್ಲಾ, ಚಲಿಗಾಲದಲ್ಲಿ ಹೆಚ್ಚಾಗಿ ಜನ, ಕೆಮ್ಮುವುದು ಅಥವಾ ಸೀನುವುದನ್ನು ಕಾಣಬಹುದು.
ಇದು ಸಾಮಾನ್ಯ ನೆಗಡಿ. ಇದಕ್ಕೆ ಸರಿಯಾದ ಸಸಯದಲ್ಲಿ ಚಿಕಿತ್ಸೆ ನೀಡದೇ ಹೋದರೆ ಅನೇಕ ದಿನಗಳ ಕಾಲ ಇದು ಮುಂದುವರೆಯುತ್ತೆ. ಮೂಗು ಕಟ್ಟಿದ ಮೇಲೆ, ಶೀತದಿಂದಾಗಿ ಕಣ್ಣುಗಳು ಭಾರ ಆಗುವುದು, ತಲೆನೋವು ಮತ್ತು ತೂಕಡಿಕೆ ಉಂಟಾಗಬಹುದು. ಇದರಿಂದ ದೈನಂದಿನ ಕೆಲಸಗಳ ಮೇಲೆ ಹೆಚ್ಚಿನ ಗಮನ ಹರಿಸಲು ಕಷ್ಟವಾಗಬಹುದು. ಈ ನೆಗಡಿ-ಕೆಮ್ಮುಗಳಿಂದ ಪಾರಾಗೋದು ಹೇಗೆ?
ಮನೆಮದ್ದುಗಳಿಂದ ಈ ನೆಗಡಿ ಮತ್ತು ಕಫವನ್ನು ಹೇಗೆ ಗುಣಪಡಿಸಬಹುದು ಎಂಬ ಚಿಂತೆ ನಿಮಗಿದ್ದರೆ ಅದನ್ನು ಬಿಟ್ಟು ಬಿಡಿ. ಅನೇಕ ಕಾಯಿಲೆಗಳಿಗೆ ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿ ಮದ್ದು ಮಾಡುವುದರಲ್ಲಿ ನಮ್ಮ ಅಜ್ಜಿಯಂದಿರದು ಎತ್ತಿದ ಕೈ. ಆದರೆ ಈಗ ಬದಲಾಗಿರುವ ಜೀವನ ಶೈಲಿಯಿಂದ ಅನೇಕರ ಮನೆಗಳಲ್ಲಿ ಇಂತಹ ಸರಳ ಉಪಾಯಗಳು ಮರೆತು ಹೋಗಿರುತ್ತವೆ. ಆದರೆ ಈಗ ನಮ್ಮ ಅಜ್ಜಿಯರ ವಿಧಾನಗಳನ್ನೇ ವೈದ್ಯರೂ ಜನರಿಗೆ ಹೇಳುತ್ತಿದ್ದಾರೆ. ಆ ಸರಳ ಉಪಾಯಗಳು ಹೀಗಿವೆ:
1. ಶುಂಠಿ-ಜೇನುತುಪ್ಪ ಮತ್ತು ತುಳಸಿ:
2. ಲಿಂಬೆ-ಶುಂಠಿ ರಸ:
3. ಅರಶಿನದ ಹಾಲು:‘
4. ಜೇಷ್ಠಮಧು:
5. ವಿಟಮಿನ್ ಸಿ:
ನೆಗಡಿ -ಕೆಮ್ಮು ಈ ಮನೆಮದ್ದುಗಳಿಂದ ನಿಯಂತ್ರಣಕ್ಕೆ ಬರುತ್ತಿಲ್ಲ ಎನಿಸಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಇದು ಚಳಿಗಾಲ ಆದರೂ ಅನೇಕ ವಾರಗಳಿಂದ ನೆಗಡಿ - ಕೆಮ್ಮು ನಿಮಗಿದ್ದರೆ ಈ ಮನೆಮದ್ದುಗಳನ್ನು ಬಳಸುವ ಮುನ್ನ ವೈದ್ಯರನ್ನು ಸಂಪರ್ಕಿಸಬೇಕು. ಬೇರೆ ಯಾವುದಾದರೂ ಸಮಸ್ಯೆ ಇದ್ದರೆ ಪತ್ತೆಯಾಗಿ ಪರಿಹಾರ ಸಿಗುತ್ತದೆ.