ಇನ್ನೂ ಆಸ್ಪತ್ರೆಯಲ್ಲೇ ಇರುವ ಗೃಹ ಸಚಿವ ಅಮಿತ್​ ಷಾ ಆರೋಗ್ಯ ಸ್ಥಿತಿ ಏನು?

amit shah
Published on

ನವದೆಹಲಿ: ಗೃಹ ಸಚಿವ ಅಮಿತ್​ ಷಾ ಅವರ ಆರೋಗ್ಯದ ಬಗ್ಗೆ ದೆಹಲಿಯ ಏಮ್ಸ್​ ಮಾಹಿತಿ ನೀಡಿದೆ.

ಒಂದು ಬಾರಿ ಕೊವಿಡ್​-19ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದ ಅಮಿತ್​ ಷಾ ಅವರಿಗೆ ಮತ್ತೊಮ್ಮೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಮೈಕೈನೋವು, ಆಯಾಸ ಕಂಡುಬಂದಿದ್ದರಿಂದ ದೆಹಲಿಯ ಏಮ್ಸ್​ಗೆ ದಾಖಲಾಗಿದ್ದರು. ಅವರಿಗೆ ಏಮ್ಸ್​ ನಿರ್ದೇಶಕ ಡಾ. ರಣದೀಪ್​ ಗುಲೇರಿಯಾ ನೇತೃತ್ವದ ತಂಡ ಚಿಕಿತ್ಸೆ ನೀಡಿತ್ತು. ಇದನ್ನೂ ಓದಿ: ಮಾವನ ಹತ್ಯೆ, ಅತ್ತೆಯ ಪರಿಸ್ಥಿತಿ ತೀವ್ರ ಗಂಭೀರ: ಇದು ಸುರೇಶ್​ ರೈನಾ ವಾಪಸ್​ ಆಗಲು ಕಾರಣ

ಆಗಸ್ಟ್​ 18ರಿಂದಲೂ ಅಬ್ಸರ್ವೇಶನ್​​ನಲ್ಲಿ ಇದ್ದ ಗೃಹ ಸಚಿವರು ಆಸ್ಪತ್ರೆಯಿಂದಲೇ ಕೆಲಸ ಮಾಡುತ್ತಿದ್ದರು. ಇದೀಗ ಷಾ ಅವರು ಸಂಪೂರ್ಣ ಚೇತರಿಸಿಕೊಂಡಿದ್ದು ಶೀಘ್ರದಲ್ಲೇ ಅವರನ್ನು ಡಿಸ್​ಚಾರ್ಜ್​ ಮಾಡಲಾಗುವುದು ಎಂದು ಏಮ್ಸ್​ ತಿಳಿಸಿದೆ.

ಈ ಹಿಂದೆ ಆಗಸ್ಟ್​ 2ರಂದು ಅವರಲ್ಲಿ ಒಮ್ಮೆ ಕರೊನಾ ಕಾಣಿಸಿಕೊಂಡಿತ್ತು. ಗುರ್​ಗಾಂವ್​​ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆಗಸ್ಟ್​ 14ರಂದು ಷಾ ಅವರಲ್ಲಿ ಕೊವಿಡ್​-19 ನೆಗೆಟಿವ್​ ಎಂದು ವರದಿ ಬಂದಿತ್ತು. ಅದಾದ ನಾಲ್ಕೇ ದಿನಕ್ಕೆ ಮತ್ತೆ ಆಸ್ಪತ್ರೆ ಸೇರಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net