ಗೃಹ ಸಚಿವರ ಬೆಂಗಾವಲು ಪಡೆ ವಾಹನ ಅಪಘಾತ

15 smg 28
Published on

ಶಿವಮೊಗ್ಗ: ಗೃಹ ಸಚಿವ ಆಗರ ಜ್ಞಾನೇಂದ್ರ ಅವರ ಬೆಂಗಾವಲು ಪಡೆ ವಾಹನಕ್ಕೆ ಸೋಮವಾರ ಸಂಜೆ ನಗರದ ಹೊರವಲಯದ ಉಂಬ್ಳೆಬೈಲ್‌ನಲ್ಲಿ ಕಾರೊಂದು ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಸಚಿವರ ಬೆಂಗಾವಲು ಪಡೆ ವಾಹನದ ಮುಂಭಾಗ ಜಖಂಗೊಂಡಿದೆ. ಎರಡು ವಾಹನಗಳಿದ್ದ ಚಾಲಕರು ಮತ್ತು ಪ್ರಯಾಣಿಕರು ಪಾರಾಗಿದ್ದಾರೆ. ಅಪಘಾತದ ಬೆನ್ನಲ್ಲೇ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕಾರಿನಿಂದ ಇಳಿದು ಬಂದು ಚಾಲಕರ ಆರೋಗ್ಯ ವಿಚಾರಿಸಿದರು.

ಸಚಿವರು ಬೆಂಗಳೂರಿನ ತೀರ್ಥಹಳ್ಳಿಗೆ ತೆರಳುತ್ತಿರುವಾಗ ಮಾರ್ಗ ಮಧ್ಯೆ ಅಪಘಾತ ಸಂಭವಿಸಿದೆ. ಉಂಬ್ಳೇಬೈಲ್ ಹತ್ತಿರ ಎದುರಿನಿಂದ ಬರುತ್ತಿದ್ದ ಕಾರು ಎಸ್ಕಾರ್ಟ್ ವಾಹನ ಬೊಲೆರೋಗೆ ಡಿಕ್ಕಿ ಹೊಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net