63 ದಿನಗಳಲ್ಲಿ 11 ಕೆ.ಜಿ ತೂಕ ಇಳಿಸಿಕೊಂಡ ಕಪಿಲ್​ ಶರ್ಮ! Kapil Sharma

untitled-design-27-68874f0dac238
Published on

Kapil Sharma: ಬಾಲಿವುಡ್​ನ ಖ್ಯಾತ ಹಾಸ್ಯ ನಟ ಕಪಿಲ್​ ಶರ್ಮಾ ತೂಕ ಇಳಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಇವರ ತೀವ್ರ ಬದಲಾವಣೆಯ ಹಿಂದೆ ಕೇವಲ ಆಹಾರ ಕ್ರಮ, ಕಠಿಣ ತರಬೇತಿ ಅಲ್ಲದೆ ಸಾಕಷ್ಟು ಫಿಟ್ನೆಸ್​ ಕೂಡ ಇದೆ ಎಂದು ತರಬೇತುದಾರ ಯೋಗೇಶ್ ಭಟೇಜಾ ತಿಳಿಸಿದ್ದಾರೆ.

ಫರಾ ಖಾನ್, ಕಂಗನಾ ರಣುವತ್ ಮತ್ತು ಸೋನು ಸೂದ್ ಅವರಂತಹ ಅನೇಕ ಬಾಲಿವುಡ್ ದಿಗ್ಗಜರಿಗೆ ತರಬೇತಿ ನೀಡಿರುವ ಯೋಗೇಶ್ ಭಟೇಜಾ, ಕಪಿಲ್ ಅವರ ತೂಕ ಇಳಿಸುವ ಪ್ರಯಾಣ ಸುಲಭದ್ದಾಗಿರಲಿಲ್ಲ, ಅವರ ಶಿಸ್ತುಬದ್ಧ ಜೀವನಶೈಲಿ ಮತ್ತು 21-21-21 ನಿಯಮ ಎಂಬ ತಂತ್ರದ ಮೂಲಕ ದೇಹದ ತೂಕ ಕಳೆದುಕೊಳ್ಳಲು ಸಹಾಯವಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಕಪಿಲ್ ಶರ್ಮಾ ಅವರ ತೂಕ ಇಳಿಸುವ ಪ್ರಯಾಣ

ಯೊಗೇಶ್​ ಮನೆಯಲ್ಲಿ ಮೊದಲು ರೆಸಿಸ್ಟೆನ್ಸ್ ಬ್ಯಾಂಡ್‌ಗಳು ( resistance bands) ಮತ್ತು ಯೋಗ ಮ್ಯಾಟ್‌ನಂತಹ ಮೂಲಭೂತ ಸಾಧನಗಳನ್ನು ಬಳಸಿ ಕಪಿಲ್​ಗೆ ತರಬೇತಿ ನೀಡಲು ಪ್ರಾರಂಭಿಸಿದರು. ನಂತರ ಜಿಮ್​ ಉಪಕರಣಗಳನ್ನು ಬಳಸಲಾರಂಭಿಸಿದರು. ಈ ವೇಳೆ ಯೋಗೇಶ್ ಅನುಭವವನ್ನು ತಿಳಿಸುತ್ತಾ, ಮೊದಲನೆಯ ದಿನದ ಕಥೇ ನಿಜಕ್ಕೂ ತಮಾಷೆಯಾಗಿದೆ. ನಾನು ಅವರನ್ನು ಸ್ಟ್ರೆಚಿಂಗ್ ಮಾಡಲು ಹೇಳಿದೆ ಆದರೆ ಅವರು ಬಹಳ ಸಮಯದಿಂದ ದೇಹವನ್ನು ದಂಡಿಸದೆ ಇರುವುದರಿಂದ ಅವರಿಗೆ ದೇಹದ ಅಂಗಾಂಗಗಳು ಸಹಾಯ ಮಾಡಲಿಲ್ಲ. ಆ ಸಮಯದಲ್ಲಿ ಅವೆಲ್ಲವೂ ಹಾಸ್ಯಾಸ್ಪದವಾಗಿದ್ದವು ಎಂದರು. ಹಾಗೆ ಮರುದಿನದಿಂದಲೇ ಅವರು ತಮ್ಮ ಪರಿಶ್ರಮದಿಂದ ವರ್ಕೌಟ್​ ಮಾಡಲಾರಂಭಿಸಿದರು. ಆಗ ನನಗೆ ಅವರ ದೇಹ ಎಷ್ಟು ಗಟ್ಟಿಯಾಗಿದೆ ಎಂಬುದು ತಿಳಿಯಿತು ಎಂದರು.

ಕಪಿಲ್​ ಚಿತ್ರರಂಗದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರಿಂದ ಅವರಿಗೆ ಜವಬ್ದಾರಿ ಹೆಚ್ಚಿತ್ತು, ಹಾಗೆಯೇ ಅವರು ಸರಿಯಾಗಿ ನಿದ್ರೆ ಮಾಡುತ್ತಿರಲಿಲ್ಲ. ಆಹಾರ ಕ್ರಮದ ಬಗ್ಗೆ ಅರಿವಿರಲಿಲ್ಲ. ಸಮಯಕ್ಕೆ ತಕ್ಕಂತೆ ತಿನ್ನುತ್ತಿದ್ದರು. ಹಾಗಾಗಿ ಅವರ ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆ ತರಲು ನಾನು ಮತ್ತು ಅವರ ಮ್ಯಾನೇಜರ್ ತಂಡ ಬಹಳ ಸಮಯ ತೆಗೆದುಕೊಂಡಿತು. ದೇವರ ದಯೆಯಿಂದ, ಅವರ ಚಿತ್ರ ಬಿಡುಗಡೆಯಾದಾಗ, ಎಲ್ಲರೂ ಪರದೆಯ ಮೇಲೆ ವ್ಯತ್ಯಾಸವನ್ನು ನೋಡಿದರು ಎಂದು ತಿಳಿಸಿದರು.

ಕಪಿಲ್ ಶರ್ಮಾ ಅವರ ಆಹಾರ ಯೋಜನೆ

ಕಪಿಲ್​ ತಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರು. ಹೆಚ್ಚು ಮೀನು ತಿನ್ನಲು ಪ್ರಾರಂಭಿಸಿದರು. ಅದು ಹೆಚ್ಚು ಕ್ಯಾಲೋರಿಗಳನ್ನು ಸಂಪಾದಿಸಲು ಸಹಾಯ ಮಾಡಿತು. ಹಾಗೆ ಅವರು ತಮ್ಮ ಊಟದಲ್ಲಿ ಹೆಚ್ಚು ತರಕಾರಿಗಳನ್ನು ಬಳಸಲು ಆರಂಭಿಸಿದರು. ಇದು ಅವರು ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯವಾಗಿದೆ ಎಂದು ಯೋಗೇಶ್​ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net