ಪ್ರಿಯತಮೆಯ ಎರಡನೇ ಲವ್​ ಪ್ರಶ್ನಿಸಿದ ಪೇದೆ; ಬೆಂಕಿ ಹಚ್ಚಿ ಹತ್ಯೆ

Police Guard Rani Sanjay
Published on

ಬೆಂಗಳೂರು: ಪ್ರಿಯತಮೆಯ ಎರಡನೇ ಲವ್​ ಬಗ್ಗೆ ಪ್ರಶ್ನಿಸಿದ ಪೇದೆಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ನಗರದ ಪುಟ್ಟೇನಹಳ್ಳಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಸಂಜಯ್​ ಎಂದು ಗುರುತಿಸಲಾಗಿದ್ದು, ಇವರು ಬಸವನಗುಡಿ ಇಪೊಲೀಸ್​ ಠಾಣೆಯಲ್ಲಿ ಕಾನ್ಸ್​ಟೇಬಲ್​ ಆಗಿ ಕೆಲಸ ಮಾಡುತ್ತಿದ್ದರು. ಆರೋಪಿ ರಾಣಿ ಅದೇ ಠಾಣೆಯಲ್ಲಿ ಹೋಮ್​ ಗಾರ್ಡ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Police Guard Rani Sanjay

ಕಾನ್​ಸ್ಟೇಬಲ್ ಸಂಜಯ್ ಮತ್ತು ಹೋಂಗಾರ್ಡ್ ರಾಣಿ ಇಬ್ಬರೂ ಕೂಡ ಬಸವನಗುಡಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇಬ್ಬರ ಮಧ್ಯೆ ಪ್ರೇಮ ಬೆಳೆದಿತ್ತು. ಮದುವೆಯಾಗಿದ್ದರೂ ಸಂಜಯ್​ನನ್ನು ಕೆಲವು ತಿಂಗಳಿಂದ ರಾಣಿ ಪ್ರೀತಿಸುತ್ತಿದ್ದಳು. ಇತ್ತೀಚಿಗೆ ಸಂಜಯ್​ನನ್ನು ರಾಣಿ ನಿರ್ಲಕ್ಷ್ಯಿಸಲು ಆರಂಭಿಸಿದ್ದಾಳೆ. ಹೀಗಾಗಿ ಎರಡು ದಿನಗಳ ಹಿಂದೆ ಆಕೆ ಮನೆಗೆ ಹೋಗಿದ್ದಾಗ ಸಂಜಯ್ ಮತ್ತು ರಾಣಿ ನಡುವೆ ಮಾತಿಗೆ ಮಾತು ಬೆಳೆದು ಜಗಳ ನಡೆದಿತ್ತು.

ಈ ವೇಳೆ ಮತ್ತೊಬ್ಬನೊಂದಿಗೆ ಪ್ರೀತಿಯಲ್ಲಿರುವ ವಿಚಾರವನ್ನು ಪ್ರಶ್ನಿಸಿದ್ದಕ್ಕೆ ಸಂಜಯ್​ಗೆ ರಾಣಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ಕೂಡಲೇ ಸಂಜಯ್​ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ರಾಣಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net