

Holi Donations: ಹೋಳಿ ಹಬ್ಬವು ಒಂದು ಆಧ್ಯಾತ್ಮಿಕ ಹಬ್ಬವಾಗಿದೆ.ಈ ಹೋಳಿ ದಿನದಂದು ಎಲ್ಲೆಡೆ ಬಣ್ಣಗಳು ಗೋಚರಿಸುತ್ತವೆ. ಹೋಳಿ ಹಬ್ಬದ ದಿನದಂದು ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ಜ್ಯೋತಿಷ್ಯ ಹೇಳುತ್ತದೆ. ಹೋಳಿ ಹಬ್ಬದಂದು ನಿಮ್ಮ ರಾಶಿಚಕ್ರದ ಪ್ರಕಾರ ದಾನ ಮಾಡುವುದರಿಂದ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ ಎಂದು ನಂಬಲಾಗಿದೆ. ನಾವು ಇಂದು ಯಾವ ವಸ್ತುಗಳನ್ನು ಯಾವ ರಾಶಿಯವರು ದಾನ ಮಾಡಬೇಕು ಎಂದು ಇಂದು ತಿಳಿದುಕೊಳ್ಳೋಣ...
ಮೇಷ ರಾಶಿಯವರು ಹೋಳಿಯಂದು ಕಂದು, ತಾಮ್ರ ಮತ್ತು ಕೆಂಪು ಬಣ್ಣದ ಬಟ್ಟೆಗಳನ್ನು ದಾನ ಮಾಡಬೇಕು. ಇದರಿಂದಾಗಿ, ಅವರು ತಮ್ಮ ಕೆಲಸ ಮತ್ತು ವೃತ್ತಿಜೀವನದಲ್ಲಿ ಯಶಸ್ವಿಯಾಗುತ್ತಾರೆ.
ವೃಷಭ ರಾಶಿಯವರು ಈ ದಿನ ಬೆಳ್ಳಿ, ಬೆಲ್ಲ ಮತ್ತು ಬಿಳಿ ಬಟ್ಟೆಗಳನ್ನು ದಾನ ಮಾಡಬೇಕು. ಇದು ಜನರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ.
ಮಿಥುನ ರಾಶಿಯವರು ಹೋಳಿಯಂದು ಹಸಿರು ವಸ್ತುಗಳು, ಪುಸ್ತಕಗಳು ಮತ್ತು ಪೆನ್ನುಗಳನ್ನು ದಾನ ಮಾಡಬಹುದು. ಇದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಕಟಕ ರಾಶಿಯವರು ಹಾಲು, ಅಕ್ಕಿ ಮತ್ತು ಬಿಳಿ ಹೂವುಗಳನ್ನು ದಾನ ಮಾಡಿದರೆ ಅವರಿಗೆ ಮನಸ್ಸಿನ ಶಾಂತಿ ಸಿಗುತ್ತದೆ ಎಂದು ನಂಬಲಾಗಿದೆ.
ಸಿಂಹ ರಾಶಿಯವರು ಈ ದಿನ ಚಿನ್ನ, ಕಿತ್ತಳೆ ಹಣ್ಣುಗಳನ್ನು ದಾನ ಮಾಡಬಹುದು. ಇದು ಸಮಾಜದಲ್ಲಿ ಅವರ ಗೌರವವನ್ನು ಹೆಚ್ಚಿಸುತ್ತದೆ.
ಕನ್ಯಾ ರಾಶಿಯವರು ಈ ದಿನ ಜೇನುತುಪ್ಪ, ತಾಮ್ರ ಮತ್ತು ಹಸಿರು ಹಣ್ಣುಗಳನ್ನು ದಾನ ಮಾಡಿದರೆ, ಅದು ಅವರಿಗೆ ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ತರುತ್ತದೆ.
ತುಲಾ ರಾಶಿಯವರು ಹೋಳಿ ಹಬ್ಬಕ್ಕೆ ಬೆಳ್ಳಿ, ಗುಲಾಬಿ ಹೂವುಗಳು ಮತ್ತು ಬಿಳಿ ಬಟ್ಟೆಗಳನ್ನು ದಾನ ಮಾಡಬಹುದು. ಇದು ಈ ರಾಶಿಯವರಿಗೆ ಜೀವನದಲ್ಲಿ ಯಶಸ್ಸನ್ನು ತರುತ್ತದೆ.
ವೃಶ್ಚಿಕ ರಾಶಿಯವರು ಈ ದಿನದಂದು ತಾಮ್ರ, ಬಟಾಣಿ ಮತ್ತು ಕೆಂಪು ಬಟ್ಟೆಗಳನ್ನು ದಾನ ಮಾಡಿದ್ರೆ ಜೀವನದಲ್ಲಿ ಯಶಸ್ಸಿನ ಹಾದಿಯನ್ನು ತೆರೆಯುತ್ತದೆ.
ಧನು ರಾಶಿಯವರು ಈ ದಿನ ಹಳದಿ ಬಟ್ಟೆ, ಅರಿಶಿನ ಮತ್ತು ನೆಲ್ಲಿಕಾಯಿಯನ್ನು ದಾನ ಮಾಡಿದ್ರೆ ಜೀವನದಲ್ಲಿ ಪ್ರಗತಿಯಾಗುತ್ತದೆ ಎಂದು ನಂಬಲಾಗಿದೆ.
ಮಕರ ರಾಶಿಯವರು ಈ ದಿನ ಆಹಾರ ಮತ್ತು ಬಟ್ಟೆಗಳನ್ನು ದಾನ ಮಾಡಬೇಕು. ಹೀಗೆ ಮಾಡುವುದರಿಂದ ಮಾಡುವ ಕೆಲಸದಲ್ಲಿ ಪ್ರಗತಿಯಾಗುತ್ತದೆ.
ಕುಂಭ ರಾಶಿಯವರು ಈ ದಿನ ತಾಮ್ರ, ನೀಲಿ ಬಟ್ಟೆ ಮತ್ತು ಅಕ್ಕಿಯನ್ನು ದಾನ ಮಾಡಬೇಕು. ಇದು ಅವರ ಜೀವನದಲ್ಲಿರುವ ಅಡೆತಡೆಗಳನ್ನು ತೆಗೆದುಹಾಕುತ್ತದೆ. ವ್ಯವಹಾರದಲ್ಲಿ ಲಾಭದ ಮುನ್ಸೂಚನೆ ಇದೆ.
ಮೀನ ರಾಶಿಯವರು ಈ ದಿನ ಬಿಳಿ ಬಟ್ಟೆ, ಮುತ್ತು ಮತ್ತು ಹಾಲನ್ನು ದಾನ ಮಾಡಬೇಕು. ಇದು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.