ಎಚ್​ಐವಿ ಬಾರದಂತೆ ನೋಡಿಕೊಳ್ಳುವ ಮುಂಜಾಗೃತಿ ಮುಖ್ಯ

5-RNR-03
Published on

ರಾಣೆಬೆನ್ನೂರ: ಎಚ್​ಐವಿ ಪೀಡಿತರಿಗೆ ಸಾಮಾನ್ಯರಂತೆ ಸಮಾಜದಲ್ಲಿ ಜೀವಿಸುವ ಹಕ್ಕಿದೆ. ಅಂಥವರನ್ನು ಕೀಳಾಗಿ ಕಾಣದೆ ಅಗತ್ಯ ಸಲಹೆ, ಸೂಚನೆ ಹಾಗೂ ಸಹಾಯ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಇಲ್ಲಿಯ 2ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಮಂಜುನಾಥ ಎಂ.ಎಸ್​. ಹೇಳಿದರು.

ನಗರದ ಎಸ್​ಜೆಎಂವಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಬುಧವಾರ ವಿಶ್ವ ಏಡ್ಸ್​ ದಿನದ ನಿಮಿತ್ತ ಏರ್ಪಡಿಸಿದ್ದ ಜಾಗೃತಿ ಜಾಥಾ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ರಾಜೇಶ್ವರಿ ಕದರಮಂಡಲಗಿ ಮಾತನಾಡಿ, ಯುವ ಜನಾಂಗ ಅಸುರಕ್ಷಿತ ಲೈಂಗಿಕ ಚಟುವಟಿಕಗಳಲ್ಲಿ ತೊಡಗಿದಾಗ ಏಡ್ಸ್​ನಂತಹ ಮಾರಕ ರೋಗಕ್ಕೆ ತುತ್ತಾಗಬೇಕಾಗುತ್ತದೆ. ಇದು ಅಂಟು ರೋಗವಲ್ಲ, ಸ್ವಯಾಜಿರ್ತವಾಗಿ ಅಥವಾ ಸ್ವಯಂಕೃತವಾಗಿ ಬರುವ ರೋಗವಾಗಿದೆ. ರಕ್ತ ಪರೀಕ್ಷೆಯ ಮೂಲಕ ರೋಗವನ್ನು ಪತ್ತೆ ಹಚ್ಚಬಹುದು. ಇದು ಬಂದ ಮೇಲೆ ಚಿಂತಿಸುವುದಕ್ಕಿಂತ ಬಾರದಂತೆ ನಿಯಂತ್ರಣ ಕ್ರಮ ಅನುಸರಿಸುವುದು ಸೂಕ್ತ ಎಂದರು.

ಪ್ರಾಚಾರ್ಯ ಡಾ. ಆರ್​.ವಿ. ಹೆಗಡಾಳ ಅಧ್ಯಕ್ಷತೆ ವಹಿಸಿದ್ದರು. ಏಡ್ಸ್​ ತಡೆಗಟ್ಟುವ ವಿಧಾನ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕ ಆಸ್ಪತ್ರೆ ಆಪ್ತ ಸಮಾಲೋಚಕ ಮಾರುತಿ ಭಜಂತ್ರಿ ಉಪನ್ಯಾಸ ನೀಡಿದರು.

ನಗರಸಭೆ ಆಯುಕ್ತ ಫಕ್ಕೀರಪ್ಪ ಇಂಗಳಗಿ, ವಕೀಲರ ಸಂಘದ ಅಧ್ಯಕ್ಷ ಬಿ.ಎಚ್​. ಬುರಡಿಕಟ್ಟಿ, ಉಪಾಧ್ಯಕ್ಷ ಲಕ್ಷ$್ಮಣ ಕೆಂಗೊಂಡ, ಕಾರ್ಯದಶಿರ್ ಎನ್​. ಎಂ. ಡೊಂಬರ, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ರಾಜು ಶಿರೂರ, ಬಿ.ಆರ್​. ಡಮ್ಮಳ್ಳಿ, ಶಿವರಾಜಕುಮಾರ, ಪ್ರಿಯಾಂಕ ಕೋಲಕಾರ, ಡಾ. ಅನಿಲಕುಮಾರ ಹಾಗೂ ವಿದ್ಯಾಥಿರ್ನಿಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net