

ಮಾಸ್ಕೊ: ಸರ್ವಾಧಿಕಾರಿ ಅಡಾಲ್ಪ ಹಿಟ್ಲರ್ನ ಬಳಿ ಇತ್ತು ಎನ್ನಲಾಗಿದ್ದ ‘ಶನಿ’ ಹೆಸರಿನ ಮೊಸಳೆ (84) ರಷ್ಯಾದ ರಾಜಧಾನಿ ಮಾಸ್ಕೊದ ಮೃಗಾಲಯದಲ್ಲಿದ್ದ ಸಾವನ್ನಪ್ಪಿದೆ. ಈ ಮಕರ ಅಮೆರಿಕದಲ್ಲಿ ಜನಿಸಿದ್ದು, ನಂತರ ಇದನ್ನು ಬರ್ಲಿನ್ ಮೃಗಾಲಯಕ್ಕೆ ತರಲಾಗಿತ್ತು.
1943ರ ಯುದ್ಧದ ಸಂದರ್ಭದಲ್ಲಿ ಮೃಗಾಲಯದ ಮೇಲೆ ಬಾಂಬ್ ಬಿದ್ದಾಗ ಇದು ಅಲ್ಲಿಂದ ತಪ್ಪಿಸಿಕೊಂಡಿತು. 1946ರವರೆಗೆ ಇದು ಎಲ್ಲಿತ್ತೆಂಬುದು ನಿಗೂಢ. ಹಿಟ್ಲರ್ನ ಪರ್ಯಾವಸನದ ನಂತರ ಬ್ರಿಟಷರು ಈ ಮಸುಳೆಯನ್ನು ಸೋವಿಯತ್ ಯೂನಿಯನ್ಗೆ (ಈಗಿನ ರಷ್ಯಾ) ನೀಡಿದರು ಎಂಬುದು ಮಾಸ್ಕೊ ಮೃಗಾಲಯದಲ್ಲಿರುವ ದಾಖಲೆ.
ಬರ್ಲಿನ್ ಝುೂನಿಂದ ತಪ್ಪಿಸಿಕಂಡ ಮೇಲೆ ಮೊಸಳೆ ಹಿಟ್ಲರ್ ಬಳಿ ಇತ್ತು ಎನ್ನಲಾಗಿದೆ. ಆದರೆ, ಹಿಟ್ಲರ್ನ ರಾಜಕೀಯ ಕುಟಿಲೋಪಾಯ ಮತ್ತು ರಣನೀತಿಯಲ್ಲಿ ಪ್ರಾಣಿಗಳ ಪಾತ್ರ ಇರಲಿಲ್ಲ ಎಂದೂ ಹೇಳಲಾಗುತ್ತದೆ.