ದೇಶಭಕ್ತಿ ಹೋರಾಟದ ಬದುಕು ಯುವ ಜನತೆಗೆ ಮುಖ್ಯ

26-RNR-06
Published on

ಹಾನಗಲ್ಲ: ತಾಲೂಕಿನ ಹಿರೇಹುಲ್ಲಾಳ ಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ$್ಯ ಸಂಗ್ರಾಮಕ್ಕೆ ಸ್ಪೂತಿರ್ಯಾದ ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಸ್ವಾತಂತ್ರ$್ಯ ಪ್ರೇಮ ದೇಶಭಕ್ತಿ ಹೋರಾಟದ ಬದುಕು ಯುವ ಜನತೆಗೆ ಆದರ್ಶಪ್ರಾಯವಾಗಿದೆ ಎಂದು ಭುವನೇಶ್ವರ ಶಿಡ್ಲಾಪೂರ ಹೇಳಿದರು.

ತಾಲೂಕಿನ ಹಿರೆಹುಲ್ಲಾಳ ಗ್ರಾಮ ಘಟಕ ಭಾನುವಾರ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ನಾಡು ಹಿಂದಿನಿಂದಲೂ ಸಾಕಷ್ಟು ವೀರರು ಶೂರರೂ ಇದ್ದಂತಹ ನಾಡು ಅದರಲ್ಲಿಯೂ ಉತ್ತರ ಕರ್ನಾಟಕ ಗಂಡುಗಲಿಗಳ ನಾಡೆಂದೆ ಪ್ರಸಿದ್ಧಿ ಹೊಂದಿದೆ. ಬೆಳಗಾವಿಯ ಕಿತ್ತೂರು ಸಂಸ್ಥಾನವನ್ನು ಆಳಿದ ವೀರರಾಣಿ ಚೆನ್ನಮ್ಮ ಬ್ರಿಟಿಷರನ್ನು ನಡುಗುವಂತೆ ಮಾಡಿದ್ದಲ್ಲದೆ ಏಕಾಂಗಿಯಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಕನ್ನಡಿಗರ ಧೈರ್ಯಕ್ಕೆ ಸಾಕ್ಷಿಯಾದವರು. ಚೆನ್ನಮ್ಮ ಕೇವಲ ಒಂದು ಸಮಾಜಕ್ಕೆ ಮೀಸಲಾದ ವೀರ ಮಹಿಳೆ ಅಲ್ಲ, ರಾಷ್ಟ್ರಕ್ಕೆ ಕೀತಿರ್ ತಂದ ಮಹಿಳೆ ತನ್ನ ಶಿಸ್ತು ಬದ್ಧ ಆಡಳಿತ ಮತ್ತು ಅಂತಃಕರಣ ಭರಿತ ನಿರ್ಣಯಗಳಿಂದಾಗಿ ಕಿತ್ತೂರು ರಾಣಿ ಚೆನ್ನಮ್ಮ ಇತಿಹಾಸದಲ್ಲಿ ಸುಭದ್ರ ಸ್ಥಾನ ಪಡೆದಿದ್ದಾಳೆ ಎಂದರು.

ತಾಲೂಕು ಅಧ್ಯಕ್ಷ ಕರಬಸಪ್ಪ ಶಿವುರ, ಮಹಿಳಾ ಘಟಕದ ಅಧ್ಯಕ್ಷ ಅನಿತಕ್ಕ ಶಿವೂರ, ಮುಖಂಡರಾದ ಮಾಲತೇಶ ಸೊಪ್ಪಿನ, ಸಿದ್ದಲಿಂಗಪ್ಪ ಕಮಡೊಳ್ಳಿ, ಪಂಚಸೇನೆ ಜಿಲ್ಲಾಧ್ಯಕ್ಷ ಶ್ರೀಕಾಂತ ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net