

ಶಿವಮೊಗ್ಗ: ಸಪ್ತಸ್ವರ ಸಂಗೀತ ಸಭಾದಿಂದ ನ.10ರ ಸಂಜೆ 6ಕ್ಕೆ ಅಂಬೇಡ್ಕರ್ ಭವನದಲ್ಲಿ ಸಪ್ತಸ್ವರದ ಸಂಸ್ಥಾಪಕ ಕೀರ್ತಿಶೇಷ ಅರುಣ್ ಹಂಪಿಹೊಳಿ ಅವರ ದ್ವಿತೀಯ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಹಿಂದೂಸ್ತಾನಿ ಶಾಸೀಯ ಸಂಗೀತ ಮತ್ತು ದಾಸವಾಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಭಾದ ಗೌರವಾಧ್ಯಕ್ಷ ಭಾಸ್ಕರ್ ಜಿ.ಕಾಮತ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭಾದ 90ನೇ ಕಾರ್ಯಕ್ರಮ ಇದಾಗಿದ್ದು, ಪಂಚತಾರ ಐಸ್‌ಕ್ರೀಂ ಮತ್ತು ರಾಂಲ್ ಐಸ್‌ಕ್ರೀಂ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಪದ್ಮಶ್ರೀ ಪಂಡಿತ ವೆಂಕಟೇಶ ಕುಮಾರ್ ಗಾಯನ ಪ್ರಸ್ತುತಪಡಿಸಲಿದ್ದಾರೆ. ಕೇಶವ ಜೋಷಿ ತಬಲಾ, ಸತೀಶ್ ಭಟ್ ಹೆಗ್ಗಾರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ ಎಂದು ಹೇಳಿದರು.
ಸಪ್ತಸ್ವರ ಸಂಗೀತ ಸಭಾದ ಕಾರ್ಯದರ್ಶಿ ಕೆ.ಜಿ.ಕುಮಾರಶಾಸಿ, ಪ್ರಮುಖರಾದ ವಿನೋದ್ ಪೈ, ದೇವುಕುಮಾರ್, ವಿವೇಕಾನಂದ ನಾಯಕ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.