14ರಂದು ರಂಗಮಂದಿರದಲ್ಲಿ ಹಿಂದೂಸ್ತಾನಿ ಸಂಗೀತ ಕಛೇರಿ

Saptaka Co ordinater G.S.Hegde
ಬೆಂಗಳೂರಿನ ಸಪ್ತಕದ ಸಂಚಾಲಕ ಜಿ.ಎಸ್.ಹೆಗಡೆ
Published on

ಶಿವಮೊಗ್ಗ: ಬೆಂಗಳೂರಿನ ಸಪ್ತಕ ಹಾಗೂ ಶಿವಮೊಗ್ಗದ ಸಪ್ತಸ್ವರ ಸಂಗೀತ ಸಭಾ ಆಶ್ರಯದಲ್ಲಿ ಸ್ವರ-ಸಪ್ತಕ ಶೀರ್ಷಿಕೆಯಡಿ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ ಏ.14ರಂದು ಸಂಜೆ 6ಕ್ಕೆ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ಸಪ್ತಕದ ಸಂಚಾಲಕ ಜಿ.ಎಸ್.ಹೆಗಡೆ ತಿಳಿಸಿದರು.

ನಾಡಿನ ಖ್ಯಾತ ಹಿಂದೂಸ್ತಾನಿ ಗಾಯಕಿ ಅನಘಾ ಭಟ್ ಕಾರ್ಯಕ್ರಮ ನಡೆಸಿಕೊಡಲಿದ್ದು, ಬೆಂಗಳೂರಿನ ಗುರುಮೂರ್ತಿ ವೈದ್ಯ ತಬಲಾ ಹಾಗೂ ಶಿರಸಿಯ ಭರತ್ ಹೆಗಡೆ ಹಾರ್ಮೂನಿಯಂ ಸಾಥ್ ನೀಡಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
2006ರಲ್ಲಿ ಆರಂಭವಾದ ಸಪ್ತಕ ದೇಶದ ಎಲ್ಲ ರಾಜ್ಯಗಳಲ್ಲಿ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮವನ್ನು ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಉಚಿತವಾಗಿ ನೀಡುತ್ತಿದೆ. ಸುಮಾರು 2500ಕ್ಕೂ ಅಧಿಕ ಕಲಾವಿದರು ಪ್ರದರ್ಶನ ನೀಡಿದ್ದಾರೆ. ಏ.14ರಂದು ಶಿವಮೊಗ್ಗದಲ್ಲಿ ನಡೆಯುವ ಪ್ರದರ್ಶನ ಸಪ್ತಕದ 550ನೇ ಕಾರ್ಯಕ್ರಮವಾಗಿದೆ. ಶಾಸೀಯ ಸಂಗೀತದ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.
ಸಪ್ತಸ್ವರ ಸಂಗೀತ ಸಭಾದ ಗೌರವಾಧ್ಯಕ್ಷ ಭಾಸ್ಕರ್ ಜಿ. ಕಾಮತ್, ಕೆ.ಜೆ.ಕುಮಾರಶಾಸಿ, ಅಚ್ಯುತರಾವ್, ವಿವೇಕಾನಂದ ನಾಯಕ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net