

ರಾಣೆಬೆನ್ನೂರ: ಲಕ್ಷಾಂತರ ಜನರ ಶ್ರದ್ಧಾಭಕ್ತಿಯ ಕೇಂದ್ರವಾಗಿರುವ ಧರ್ಮಸ್ಥಳ ಕ್ಷೇತ್ರದ ಮೇಲೆ ಆಗುತ್ತಿರುವ ಧರ್ಮನಿಂದನೆ ಹಾಗೂ ಅಪಪ್ರಚಾರಕ್ಕೆ ಮುಖ್ಯ ಕಾರಣಿಕರ್ತರಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟೆಣ್ಣವರ, ಧೂತ ಸಮೀರ್ ಎಂ.ಡಿ.ಯನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಯುವ ಬ್ರಿಗೇಡ್ ವತಿಯಿಂದ ಗುರುವಾರ ತಹಸೀಲ್ದಾರ್ ಆರ್.ಎಚ್. ಭಾಗವಾನ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಶಬರಿಮಲೆ, ಶನಿಶಿಂಗಣಾಪುರದ ರೀತಿ ಈಗ ಧರ್ಮಸ್ಥಳದ ಮೇಲೆ ಧಾಮಿರ್ಕ ದಾಳಿ ನಡೆಸಲಾಗುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಧರ್ಮಸ್ಥಳದ ಪರಿಸ್ಥಿತಿಯೇ ಹೀಗಾದರೆ ನಮ್ಮೂರಿನ ಚಿಕ್ಕಪುಟ್ಟ ಮಠ ಮಂದಿರಗಳ ಗತಿಯೇನು. ಇದಕ್ಕೆಲ್ಲ ಅಂತ್ಯ ಹಾಡಲೇಬೇಕಿದೆ. ಹಿಂದುಗಳ ವಿರುದ್ಧ ಷಡ್ಯಂತ್ರ ನಡೆಸುತ್ತಿರುವವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಯುವ ಬ್ರಿಗೇಡ್ ಪ್ರಮುಖರಾದ ಬಸವರಾಜ ರಾಜನಹಳ್ಳಿ, ವೀರೇಂದ್ರ, ಧನಂಜಯ, ಮಣಿಕಂಠ, ಸಂಜಯ್ ಹಾಗೂ ಬಜರಂಗದಳದ ಅಜಯ್ ಮಠದ, ವಿನಯ್, ನಾಗರಾಜ, ಬಸವರಾಜ, ಶರತ್ ಮತ್ತಿತರರು ಉಪಸ್ಥಿತರಿದ್ದರು.