

ಮೀರತ್: ಉತ್ತರಪ್ರದೇಶದಲ್ಲಿ ಸಾಧುಗಳ ಕಗ್ಗೊಲೆ ಮುಂದುವರೆದಿದೆ. ಇದಾಗಲೇ ಫಾಲ್ಗರ್‌ನಲ್ಲಿ ಮೂವರು ಸಾಧುಗಳ ಹತ್ಯೆಯಾಗಿದ್ದು, ಅದಾದ ನಂತರವೂ ದೇವಾಲಯದಲ್ಲಿ ಮಲಗಿದ್ದ ಸಾಧುವನ್ನು ಕೊಲೆ ಮಾಡಲಾಗಿತ್ತು.
ಇದೀಗ ಮೀರತ್ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬತಿಲಕ ಮತ್ತು ಕೇಸರಿ ಬಟ್ಟೆ ಧರಿಸಿದ ಸನ್ಯಾಸಿಯನ್ನು ಹೀಯಾಳಿಸಿ, ಹೊಡೆದು ಸಾಯಿಸಿದ್ದಾನೆ.
ಮೃತ ಸಾಧು ಕಾಂತಿ ಪ್ರಸಾದ್, ಇಲ್ಲಿಯ ಶಿವ ದೇವಾಲಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಅವರು ಈ ದೇವಾಲಯದ ಸಮಿತಿಯ ಅಧ್ಯಕ್ಷರೂ ಆಗಿದ್ದರು. ಅವರಿಗೆ 60 ವರ್ಷ ವಯಸ್ಸಾಗಿತ್ತು. ಮೀರತ್‌ನ ಅಮ್ದುಲ್ಲಾಪುರ ಪ್ರದೇಶದ ಮೊಹಲ್ಲಾ ಹಂದಿಯಾ ನಿವಾಸಿ ಇವರು.
ತಮ್ಮ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಸಮಯದಲ್ಲಿ ಅನಾಸ್ ಖುರೇಷಿ ಎಂಬಾತ ಇವರನ್ನು ತಡೆದಿದ್ದಾನೆ. ಹಣೆಗೆ ತಿಲಕವನ್ನಿಟ್ಟು, ಕೇಸರಿ ಬಟ್ಟೆ ಧರಿಸಿರುವುದಕ್ಕೆ ಆತ ಹಂಗಿಸಿದ್ದಾನೆ, ಇವರ ವಿರುದ್ಧ ಅವಹೇಳನ ಮಾತನಾಡಿದ್ದಾನೆ. ಇನ್ನು ಮುಂದೆ ಈ ರೀತಿಯ ಬಟ್ಟೆ ಹಾಗೂ ತಿಲಕ ಧರಿಸದಂತೆ ಹೇಳಿದ್ದಾನೆ. ಆ ರೀತಿ ಮಾತನಾಡದಂತೆ ಕಾಂತಿ ಪ್ರಸಾದ್ ಅವರು ಆ ವ್ಯಕ್ತಿಗೆ ಹೇಳಿದ್ದಾರೆ.
ಆದರೂ ಆತ ತೀವ್ರ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಮಾತ್ರವಲ್ಲದೇ ಮನಸೋ ಇಚ್ಛೆ ಥಳಿಸಿದ್ದಾನೆ. ಅಲ್ಲಿಂದ ತಪ್ಪಿಸಿಕೊಂಡ ಕಾಂತಿ ಪ್ರಸಾದ್ ಅವರು, ಈ ಬಗ್ಗೆ ಖುರೇಷಿ ಮನೆಯವರಿಗೆ ದೂರು ಹೇಳಲು ಹೋಗಿದ್ದರು.
ಆಗ ಹಿಂಬದಿಯಿಂದ ಬಂದ ಖುರೇಷಿ ಕಾಂತಿಪ್ರಸಾದ್ ಅವರನ್ನು ಹಿಗ್ಗಾಮುಗ್ಗ ಥಳಿಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಅದಾಗಲೇ ಕಾಂತಿ ಪ್ರಸಾದ್ ಮೃತಪಟ್ಟಿದ್ದರು.
ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಖುರೇಷಿ ವಿರುದ್ಧ ದೂರು ದಾಖಲಾಗಿದೆ. ಆತನನ್ನು ಬಂಧಿಸಲಾಗಿದೆ.
ಪ್ರಸಾದ್ ಅವರು ಶಿವ ಮಂದಿರದ ಹೊರಗೆ ಪ್ರಸಾದ ಮಾರಾಟ ಮಾಡುವ ಸಣ್ಣ ಅಂಗಡಿಯೊಂದನ್ನು ನಡೆಸುತ್ತಿದ್ದರು. ಪ್ರಸಾದ್ ಅವರ ಡ್ರೆಸ್ ಹಾಗೂ ತಿಲಕದ ಬಗ್ಗೆ ಅನಾಸ್ ಖುರೇಷಿ ಯಾವಾಗಲೂ ಅಪಹಾಸ್ಯ ಮಾಡುತ್ತಿದ್ದ. ಆದ್ದರಿಂದ ಆತನ ವಿರುದ್ಧ ಮನೆಯವರಿಗೆ ತಿಳಿಸಲು ಕಾಂತಿಪ್ರಸಾದ್ ಹೋಗಿದ್ದರು ಎಂದು ಸ್ಥಳೀಯರು ಹೇಳುತ್ತಾರೆ.