ದಿ ಹಿಂದೂ ಎಜುಕೇಶನ್ ಪ್ಲಸ್ ಕೆರಿಯರ್ ಕೌನ್ಸೆಲಿಂಗ್

Published on

ಬೆಂಗಳೂರು:
ರಾಜ್ಯದಲ್ಲಿ ಆರಂಭವಾಗಿರುವ ದಿ ಹಿಂದೂ ಎಜುಕೇಶನ್ ಪ್ಲಸ್ ಕೆರಿಯರ್ ಕೌನ್ಸೆಲಿಂಗ್ - 2024 ರ 22ನೇ ಆವೃತ್ತಿಯು ಭಾನುವಾರ (ಮೇ 19ರಂದು) ತುಮಕೂರಿನ ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿಯ ಬಿರ್ಲಾ ಸಭಾಂಗಣ ಮತ್ತು ಕಲ್ಬುರ್ಗಿಯ ಶರಣ ಭಸವ ವಿಶ್ವವಿದ್ಯಾಲಯದ ಪೂಜ್ಯ ದೊಡ್ಡಪ್ಪ ಅಪ್ಪ ಸಾಬ್ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಯುಪಿಎಸ್‌ಸಿ ಪರೀಕ್ಷೆ, ಸಿಇಟಿ ಕೌನ್ಸೆಲಿಂಗ್, ನೀಟ್ ಕೌನ್ಸೆಲಿಂಗ್ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಕೆಇಎ) ಮಾರ್ಗದರ್ಶನ ನೀಡಲಾಗುತ್ತದೆ ಮತ್ತು ಕಲೆ, ವಿಜ್ಞಾನ, ವಾಣಿಜ್ಯ, ಕಾನೂನು, ಫ್ಯಾಷನ್ ಡಿಸೈನಿಂಗ್, ಪತ್ರಿಕೋದ್ಯಮ, ಅನಿಮೇಷನ್, ಪ್ರದರ್ಶನ ಕಲೆಗಳು, ನಿರ್ವಹಣೆ, ಇಂಜಿನಿಯರಿಂಗ್ ಕೋರ್ಸ್‌ಗಳ ಕುರಿತು ವೃತ್ತಿ ಮಾರ್ಗದರ್ಶನದ ಜೊತೆಗೆ ಮೆಡಿಸಿನ್ ಮತ್ತು ಆರ್ಕಿಟೆಕ್ಚರ್ ಸೇರಿ ಅನೇಕ ವಿಷಯಗಳ ಕುರಿತು ಮಾಹಿತಿ ಒದಗಿಸಲಾಗುವುದು.
ಇದು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ತಜ್ಞರು ಮತ್ತು ಶಿಕ್ಷಣ ಸಂಸ್ಥೆಗಳೊಂದಿಗೆ ಸಂಪರ್ಕಿಸಲು ವೇದಿಕೆಯಾಗಿದ್ದು, ಸರಿಯಾದ ಸಮಾಲೋಚನೆ ಮತ್ತು ಮಾರ್ಗದರ್ಶನವನ್ನು ಪಡೆದ ನಂತರ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಸಹಾಯ ಮಾಡಲಿದೆ.
ಈ ಕಾರ್ಯಕ್ರಮ ರಾಜ್ಯದ ಹನ್ನೊಂದು ನಗರಗಳಲ್ಲಿ ನಡೆಸಲಾಗುತ್ತಿದ್ದು, ಇಂದು ತುಮಕೂರು ಮತ್ತು ಕಲ್ಬುರ್ಗಿಯಲ್ಲಿ ಆಯೋಜಿಸಲಾಗಿದೆ. ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಯುವ ಸ್ಥಳದಲ್ಲಿಯೆ ಬೆಳಿಗ್ಗೆ 9 ರಿಂದ 9.30 ರವೇಳೆಗೆ ಹೆಸರು ನೋಂದಾಯಿಸಿಕೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net