

ರಾಣೆಬೆನ್ನೂರ: ಸನಾತನ ಧರ್ಮದ ಸಿದ್ಧಾಂತ ಕೇವಲ ಹಿಂದುಗಳಿಗಾಗಿ, ಭಾರತಕ್ಕಾಗಿ ಮಾತ್ರವಲ್ಲ, ಸಂರ್ಪೂಣ ವಿಶ್ವಕ್ಕಾಗಿ ಉಪಯುಕ್ತವಾಗಿದೆ. ಹೀಗಿರುವಾಗ ಸನಾತನ ಧರ್ಮವನ್ನು ನಾಶಗೊಳಿಸಲು ಲ್ಯಾಂಡ್ ಜಿಹಾದ್, ಲವ್ ಜಿಹಾದ್ ಹಾಗೂ ಇತರ ಜಿಹಾದಗಳ ಮೂಲಕ ಹಿಂದುಗಳನ್ನು ನಾಶಮಾಡುವ ಷಡ್ಯಂತ್ರ ನಡೆಯುತ್ತಿದೆ ಎಂದು ಹಿಂದು ಜನಜಾಗೃತಿ ಸಮಿತಿಯ ರಾಜು ಧರೆಯಣ್ಣನವರ ಹೇಳಿದರು.
ತಾಲೂಕಿನ ಕಮದೋಡ ಗ್ರಾಮದ ಮಾರುತಿ ದೇವಸ್ಥಾನದಲ್ಲಿ ಹಿಂದು ಜನಜಾಗೃತಿ ಸಮಿತಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಹಿಂದು ರಾಷ್ಟ್ರ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
ಯಾವಾಗ ಧರ್ಮದ ಮೇಲೆ ಆಘಾತಗಳು ಆಗುತ್ತವೆಯೋ ಆಗ ಭಗವಂತನು ಭೂಮಿಯ ಮೇಲೆ ಅವತಾರ ತಾಳಿ ಅಧರ್ಮವನ್ನು ನಾಶ ಮಾಡಿ ಧರ್ಮವನ್ನು ಮರು ಸ್ಥಾಪಿಸುತ್ತಾರೆ. ದ್ವಾಪರಯುಗದಲ್ಲಿ ಕಂಸ ಎಂಬ ರಾಕ್ಷಸನನ್ನು ವಧೆ ಮಾಡಲು ಶ್ರೀಕೃಷ್ಣ ಜನ್ಮ ತಾಳಿದರು. ತೇತ್ರಾಯುಗದಲ್ಲಿ ರಾವಣನ್ನು ವಧೆ ಮಾಡಲು ಶ್ರೀ ರಾಮರು ಜನ್ಮ ತಾಳಿದರು.
ಅದೇ ರೀತಿ ಕಲಿಯುಗದಲ್ಲಿ ಅಧರ್ಮವನ್ನು ನಾಶ ಮಾಡಿ ಧರ್ಮವನ್ನು ಸ್ಥಾಪಿಸಲು ಭಗವಂತ ಬಂದೆ ಬರುತ್ತಾರೆ. ನಾವು ಧರ್ಮ ಶಿಕ್ಷಣವನ್ನು ಪಡೆದು ಧರ್ಮಯೋಧರಾಗೋಣ, ಹಿಂದು ರಾಷ್ಟ್ರ ಸ್ಥಾಪನೆಯಾಗುವ ತನಕ ಹೋರಾಡೋಣ, 2-3 ತಲೆಮಾರಿನಿಂದ ನಮಗೆ ಧರ್ಮ ಶಿಕ್ಷಣ ಸಿಕ್ಕಿಲ್ಲ. ಇದರಿಂದಾಗಿಯೇ ಇವತ್ತು ಹಿಂದು ಧರ್ಮವು ಈ ಸ್ಥಿತಿಗೆ ಬಂದಿದೆ, ಎಲ್ಲರೂ ಧರ್ಮಶಿಕ್ಷಣ ಪಡೆದು ಧಮಾರ್ಚರಣೆ ಮಾಡೋಣ ಮತ್ತು ಹಿಂದು ಧರ್ಮವನ್ನು ರಕ್ಷಿಸೋಣ ಎಂದರು.
ಹಿಂದು ರಾಷ್ಟ್ರ ಸ್ಥಾಪಿಸುವ ಪ್ರತಿಜ್ಞೆ ಮಾಡಿದರು.