

ನವಲಗುಂದ: ನಿಸ್ವಾರ್ಥತೆ, ಸಮಾಜಮುಖಿ, ಶಿಷ್ಯ ಸಂಪತ್ತನ್ನು ಗಳಿಸಿದವರಿಗೆ ಸಮಾಜ ಸದಾ ಋಣಿಯಾಗಿರುತ್ತದೆ ಎಂಬುದಕ್ಕೆ ಸೇವಾ ನಿವೃತ್ತಿಯಾದ ಯಂಕಪ್ಪ ಸುರಗಿಹಳ್ಳಿ ನಿದರ್ಶನರಾಗಿದ್ದಾರೆ ಎಂದು ನಿವೃತ್ತಿ ಶಿಕ್ಷಕ ಎಸ್.ಎಂ. ಪಟ್ಟಣಶೆಟ್ಟಿ ಹೇಳಿದರು.
ಪಟ್ಟಣದ ಶ್ರೀ ಗವಿಮಠ ಕಲ್ಯಾಣ ಕೇಂದ್ರದಲ್ಲಿ ಆಯೋಜಿಸಿದ್ದ ಸೇವಾ ನಿವೃತ್ತಿ ಹೊಂದಿದ ಯಂಕಪ್ಪ ಸುರಗಿಹಳ್ಳಿ ಅವರ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಸುದೀರ್ಘ 40 ವರ್ಷಗಳ ಕಾಲ ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸಾವಿರಾರು ಶಿಷ್ಯರಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿದ ವೈ.ಬಿ. ಸುರಗಿಹಳ್ಳಿ ಹಾಗೂ ಶಿಕ್ಷಕ ಬಂಡಿವಡ್ಡರ ಮಾತನಾಡಿದರು. ನಿವೃತ್ತ ಶಿಕ್ಷಕ ಎಸ್.ವಿ. ಬದಾಮಿ, ಪಿಡಬ್ಲ್ಯುಡಿ ನಿವೃತ್ತ ಅಧಿಕಾರಿ ರತನಕುಮಾರ, ಎಇಇ ಅಧಿಕಾರಿ ಶಂಕರ ಬಂಡಿವಡ್ಡರ, ದಯಾನಂದ ಶಿರೋಳ, ಪರಶುರಾಮ ದೊಡಮನಿ, ಮೆಹಬೂಬ ಅಣ್ಣಿಗೇರಿ ಮಾತನಾಡಿದರು. ಕೇಶವ ಕರ್ಜಗಿ ನಿರ್ವಹಿಸಿದರು.
ಪುರಸಭೆ ಸದಸ್ಯರಾದ ಮುದಕವ್ವ ಬೆಂಡಿಗೇರಿ, ನೀಲಕಂಠ ಕರ್ಜಗಿ, ರಜಿಯಾ ನದಾಫ್, ರೇಖಾ ಪಾವಟೆ, ಮಂಜು ಬೈಲೂರ, ಶಿವಾನಂದ ಚಲವಾದಿ, ಶ್ರೀಕಾಂತ ಬರೋಜಿ, ಉಮೇಶ ಹೂಗಾರ, ಗುರು ಮಾದರ, ಇತರರಿದ್ದರು.