ಹಿಂದಿ ಪಖ್ವಾಡಾ ಮತ್ತು ಹಿಂದಿ ದಿನ ಸಮಾರಂಭ

Published on

ದೆಹಲಿ:
ಅಧಿಕೃತ ಕೆಲಸಗಳಲ್ಲಿ ಹಿಂದಿ ಬಳಕೆಯನ್ನು ಹೆಚ್ಚಿಸಲು ಮತ್ತು ಹಿಂದಿಯಲ್ಲಿ ಕೆಲಸ ಮಾಡುವ ಸಾಧ್ಯತೆಗಳನ್ನು ಪ್ರಚಾರ ಮಾಡಲು, ರಾಷ್ಟ್ರೀಯ ಕಟ್ಟಡಗಳ ನಿರ್ಮಾಣ ನಿಗಮ (ಘೆಆಇಇ) (ಇಂಡಿಯಾ) ಲಿ., ಹಿಂದಿ ಪಖ್ವಾಡವನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಹಿಂದಿ ದಿವಸ್ ಸಮಾರಂಭ ನಡೆಯಿತು.
ಹಿಂದಿ ಪಖ್ವಾಡದ ಸಂದರ್ಭದಲ್ಲಿ, ಹಿಂದಿ ಪದಬಂಧ ಸ್ಪರ್ಧೆ ಮತ್ತು ಹಿಂದಿ ಎಕ್ಸ್‌ಟೆಂಪೋರ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಹಿಂದಿ ದಿವಸ್ ಸಮಾರಂಭದಲ್ಲಿ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವರ ಸಂದೇಶವನ್ನು ಓದಲಾಯಿತು. ಈ ಸಂದರ್ಭದಲ್ಲಿ, ಘೆಆಇಇ ಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರು ತಮ್ಮ ಭಾಷಣದಲ್ಲಿ ಕಂಪನಿಯಲ್ಲಿ ಹಿಂದಿಯಲ್ಲಿ ಕೆಲಸ ಮಾಡುವ ಆಸಕ್ತಿ ಹೆಚ್ಚುತ್ತಿರುವುದು ಸಂತಸ ತಂದಿದೆ ಎಂದರು.
ನಿರ್ಮಾಣ ಕ್ಷೇತ್ರದೊಂದಿಗೆ ಸಂಬಂಧ ಹೊಂದಿದ್ದರೂ, ಕಂಪನಿಯಲ್ಲಿ ಹಿಂದಿಯಲ್ಲಿ ನಡೆಯುತ್ತಿರುವ ಕೆಲಸಗಳು ಸಾಕಷ್ಟು ಶ್ಲಾಘನೀಯ. ಹಿಂದಿಯನ್ನು ತಂತ್ರಜ್ಞಾನದೊಂದಿಗೆ ಜೋಡಿಸುವ ವಿನೂತನ ಪ್ರಯೋಗ ಉತ್ತಮವಾಗಿದ್ದು, ಭವಿಷ್ಯದಲ್ಲಿಯೂ ಇದನ್ನು ಮುಂದುವರಿಸಬೇಕು ಎಂದು ಹೇಳಿದರು. ಗೃಹ ಸಚಿವಾಲಯದ ಅಧಿಕೃತ ಭಾಷಾ ಇಲಾಖೆಯು ನಿಗದಿಪಡಿಸಿದ ಗುರಿಗಳನ್ನು ಸಾಧಿಸಲು ಎಲ್ಲರ ಸಹಕಾರ ಅಗತ್ಯ ಎಂದರು.
ಹಿಂದಿ ಕ್ಷೇತ್ರದಲ್ಲಿ ಎನ್‌ಬಿಸಿಸಿ ಮಾಡಿರುವ ಸಾಧನೆಗಳನ್ನು ಉಲ್ಲೇಖಿಸಿದ, ಕಚೇರಿ ಕೆಲಸದಲ್ಲಿ ಹಿಂದಿ ಬಳಕೆಯನ್ನು ಹೆಚ್ಚಿಸಬೇಕೆಂದರಲ್ಲದೆ, ಸರ್ಕಾರಿ ಕೆಲಸವನ್ನು ಹಿಂದಿಯಲ್ಲಿ ಮಾಡುವಂತೆ ಮನವಿ ಮಾಡಿದ ಸಿಎಂಡಿ, ಎಲ್ಲಾ ಸಿಬ್ಬಂದಿಯನ್ನು ಪ್ರೋತ್ಸಾಹಿಸಿದರು.
ಹಿಂದಿ ವಿಚಾರ ಸಂಕಿರಣದಲ್ಲಿ ಸಂಸ್ಥೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ವಿಚಾರ ಸಂಕಿರಣದಲ್ಲಿ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಸುಧಾ ಉಪಾಧ್ಯಾಯ ಅವರು ಹಿಂದಿ ಭಾಷೆ-ಪ್ರಸ್ತುತ ದೃಷ್ಟಿಕೋನ ಮತ್ತು ಸಾಧ್ಯತೆಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಸಮಾರಂಭದಲ್ಲಿ ಹಿಂದಿ ಪದಬಂಧ ಸ್ಪರ್ಧೆ ಮತ್ತು ಹಿಂದಿ ಎಕ್ಸ್‌ಟೆಂಪೋರ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಬಹುಮಾನ ನೀಡಿದರು.
ಹಿಂದಿ ದಿವಸ್ ಸಮಾರಂಭದಲ್ಲಿ ಮುಖ್ಯ ವಿಜಿಲೆನ್ಸ್ ಅಧಿಕಾರಿ, ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕರು (ಏ್ಕ) ಮತ್ತು ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕರು (ಸಮನ್ವಯ) ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net