ಲಾಕ್​ಡೌನ್​ ಥೀಮ್​ನಲ್ಲಿ ಇರಲಿದೆ ಈ ಸಲದ ಹಿಂದಿ ಬಿಗ್​ಬಾಸ್​!

salman-khan-bigg-boss-14-1596509469
Published on

ಹಿಂದಿಯ ಬಿಗ್​ಬಾಸ್​ ಸೀಸನ್​ 14 ಹಲವು ವಿಚಾರಗಳಿಗಾಗಿ ಸದ್ದು ಮಾಡುತ್ತಿದೆ. ಸಲ್ಮಾನ್​ ಖಾನ್​ ಸಂಭಾವನೆ ಸಾಕಷ್ಟು ಚರ್ಚೆಗೊಳಪಟ್ಟಿದ್ದು ಒಂದೆಡೆಯಾದರೆ, ಕರೊನಾ ಸಮಯದಲ್ಲಿ ಶೋ ಹೇಗೆ ಮೂಡಿಬರಲಿದೆ ಎಂಬುದೂ ಕುತೂಹಲ ಮೂಡಿಸಿದೆ. ಇದೀಗ ರಿಯಾಲಿಟಿ ಶೋದ ಥೀಮ್​ ಏನು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಕಳೆದ 6 ತಿಂಗಳಿಂದ ಕರೊನಾ ಹಿನ್ನೆಲೆಯಲ್ಲಿ ಲಾಕ್​ಡೌನ್​ ಮಾಡಲಾಗಿತ್ತು. ನಿಧಾನಕ್ಕೆ ಸಡಿಲಗೊಳಿಸುತ್ತ ಬರಲಾಯಿತು. ಇದೀಗ ಆ ಪ್ರಕ್ರಿಯೆಯನ್ನೇ ಈ ಸಲದ ಬಿಗ್​ಬಾಸ್ ಥೀಮ್​ ಆಗಿ ಬಳಸಿಕೊಳ್ಳಲಾಗುತ್ತಿದೆ. ಸುತ್ತಾಟ ಬಂದ್​ ಆಗಿತ್ತು, ಸಿನಿಮಾ ನೋಡಲು ಅವಕಾಶ ಇರಲಿಲ್ಲ, ಶಾಪಿಂಗ್​ ಮಾಲ್​ಗಳು ತೆರೆದಿರಲಿಲ್ಲ.. ಇದೀಗ ಹಾಗೆ ಮಿಸ್​ ಮಾಡಿಕೊಂಡಿದ್ದನ್ನು ಲಕ್ಸುರಿ ಟಾಸ್ಕ್​ ಮೂಲಕ ಸ್ಪರ್ಧಿಗಳು ಪಡೆದುಕೊಳ್ಳುವ ಅವಕಾಶ ಈ ಸಲದ ಬಿಗ್​ಬಾಸ್​ನಲ್ಲಿ ಕಲ್ಪಿಸಲಾಗಿದೆ.

ಬಿಗ್​ ಮನೆಯಲ್ಲಿ ಆಯೋಜಿಸುವ ಟಾಸ್ಕ್​ಗಳಲ್ಲಿ ವಿಜೇತರಾದ ತಂಡಕ್ಕೆ ಈ ಅವಕಾಶ ಸಿಗಲಿದ್ದು, ವಿಶೇಷ ಸವಲತ್ತುಗಳನ್ನು ನೀಡಲಾಗುತ್ತಿದೆ. ಇನ್ನು ಈಗಾಗಲೇ 14ನೇ ಸೀಸನ್​ನಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬುದಕ್ಕೆ ಪಟ್ಟಿಯೊಂದು ಹರಿದಾಡುತ್ತಿದ್ದು, ಇನ್ನಷ್ಟೇ ಅಧಿಕೃತ ಪಟ್ಟಿ ಹೊರಬರಬೇಕಿದೆ. ಅಂದಹಾಗೆ, ಅಕ್ಟೋಬರ್​ 3ರಿಂದ ಬಿಗ್​ಬಾಸ್​ ಶುರುವಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net