ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ನಟಿ! ಈಕೆಗೆ ಪ್ರತಿ ಹೆಜ್ಜೆಯಲ್ಲೂ ಜತೆ ನಿಲ್ಲುತ್ತಾನೆ hina khan ಗೆಳೆಯ

hinakhan
Published on

hina khan : ಬಾಲಿವುಡ್ ನಟಿ ಹಿನಾ ಖಾನ್ ಅವರಿಗೆ ಕೆಲವು ತಿಂಗಳ ಹಿಂದೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಸದ್ಯ ಆಕೆ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಚಿಕಿತ್ಸೆಯ ಸಮಯದಲ್ಲಿ ಹೀನಾಗೆ ಪ್ರತಿ ಹೆಜ್ಜೆಯಲ್ಲೂ  ಆಕೆ ಗೆಳೆಯ ರಾಕಿ ಜೈಸ್ವಾಲ್ ಜತೆಗೆ ನಿಲ್ಲುತ್ತಾನೆ.  ಈ ಫೋಟೋಗಳು ಓಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​​ ಆಗಿದೆ.

ರಾಕಿ ಹಿನಾಗೆ ಹೇಗೆ ಕಾಳಜಿ ವಹಿಸುತ್ತಾನೆ ಮತ್ತು ಅವಳ ಆರೈಕೆ  ಮಾಡುತ್ತಿದ್ದಾನೆ. ಇದನ್ನು ನೋಡಿದ ಹೀನಾ ‘ಪ್ರತಿಯೊಬ್ಬ ಹೆಣ್ಣಿನ ಜೀವನದಲ್ಲೂ ಇಂಥ ಗಂಡಸಿರಬೇಕು. ಇವನು ನನಗೆ ತಿಳಿದಿರುವ ವಿಶ್ವದ ಅತ್ಯುತ್ತಮ ವ್ಯಕ್ತಿ! ನನ್ನ ಕ್ಯಾನ್ಸರ್ ಚಿಕಿತ್ಸೆಯ ಭಾಗವಾಗಿ ನಾನು ತಲೆ ಕೂದಲು ಶೇವ್ ಮಾಡಿದಾಗ ಅವರು ಕೂಡ ಶೇವ್ ಮಾಡಿದ್ದಾರೆ. ನನ್ನ ಕೂದಲು ಬೆಳೆದಾಗ ಅವನ ಕೂದಲು ಬೆಳೆಯುತ್ತದೆ ಎಂದು ಹೇಳಿದರು. ಅವನು ನನ್ನನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದ್ದಾನೆ. ನನ್ನ ಕೈಬಿಡಲು ನೂರು ಕಾರಣಗಳಿದ್ದರೂ ನನ್ನ ಬೆಂಬಲಕ್ಕೆ ನಿಂತಿದ್ದಾನೆ. ನಿಸ್ವಾರ್ಥವಾಗಿ ಪ್ರೀತಿಸುತ್ತಾರೆ. ನಾವು ಈಗಾಗಲೇ ಜೀವಮಾನದ ಅನುಭವವನ್ನು ಸಂಗ್ರಹಿಸಿದ್ದೇವೆ' ಎಂದು ಬರೆದುಕೊಂಡು ಕೆಲವು ಫೊಟೋಗಳು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ನಾವು ಅನೇಕ ಕಠಿಣ ಪರಿಸ್ಥಿತಿಗಳನ್ನು ಎದುರಿಸಿದ್ದೇವೆ. ಆದರೆ ಕಷ್ಟದ ಸಮಯದಲ್ಲಿ ನಾವು ಒಬ್ಬರಿಗೊಬ್ಬರು ನಿಂತಿದ್ದೇವೆ. ಕರೋನಾ ಸಾಂಕ್ರಾಮಿಕ ಸಮಯದಲ್ಲಿ ನಾವು ಆರೋಗ್ಯ ಸವಾಲುಗಳನ್ನು ಎದುರಿಸಲು ಬಹಳ ಕಷ್ಟಕರ ಸಮಯವನ್ನು ಎದುರಿಸಿದ್ದೇವೆ. ನಾವಿಬ್ಬರೂ ತಂದೆಯನ್ನು ಕಳೆದುಕೊಂಡೆವು. ಆ ಕಷ್ಟದ ಸಮಯದಲ್ಲಿ ನಾವಿಬ್ಬರೂ ಅಳುತ್ತಿದ್ದೆವು ಮತ್ತು ಒಬ್ಬರಿಗೊಬ್ಬರು ಸಾಂತ್ವನ ಹೇಳುತ್ತಿದ್ದೆವು. ನನಗೆ ಕರೋನಾ ಇಲ್ಲದಿದ್ದರೂ, ಅವನು ನನ್ನೊಂದಿಗಿದ್ದಾನೆ. ದಿನವಿಡೀ ಮೂರು ಮಾಸ್ಕ್ ಹಾಕಿಕೊಂಡು ನನ್ನ ಆರೈಕೆ ಮಾಡುತ್ತಿದ್ದರು. ವಿಶೇಷವಾಗಿ ನನಗೆ ಕ್ಯಾನ್ಸರ್ ಇರುವುದು ಪತ್ತೆಯಾದ ನಂತರ, ಅವರು ನನ್ನನ್ನು ನೋಡಿಕೊಳ್ಳಲು ಎಲ್ಲವನ್ನೂ ಕೈಬಿಟ್ಟರು. ಚಿಕಿತ್ಸೆಯು ಎಲ್ಲಿ ಉತ್ತಮವಾಗಿದೆ? ಡಾಕ್ಟರರಿಗೆ ಏನಾದ್ರೂ ಮುನ್ನೆಚ್ಚರಿಕೆ ವಹಿಸುವಂತೆ ಹೇಳಬೇಕು.. ಎಲ್ಲವನ್ನೂ ಮೊದಲೇ ಪ್ಲಾನ್ ಮಾಡಿದರು. ಹಾಗಾಗಿ ಅವರು ಸೂಚಿಸಿದ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಡುತ್ತಿದ್ದೇನೆ. ಕೀಮೋ ಥೆರಪಿ ಆರಂಭವಾದಾಗಿನಿಂದ ಅವರು ನನ್ನ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ನನಗೆ ಡ್ರೆಸ್ ಮಾಡುವುದು, ಊಟ ಹಾಕುವುದು...ಇದೆಲ್ಲವನ್ನೂ ಅವನೇ ಮಾಡುತ್ತಾನೆ. ಅವನು ನನ್ನ ಸುತ್ತಲೂ ರಕ್ಷಣಾ ಕವಚವನ್ನು ಸೃಷ್ಟಿಸಿದನು. ಕಳೆದ ಎರಡು ತಿಂಗಳು ನನಗೆ ಬಹಳಷ್ಟು ಕಲಿಸಿದೆ. ರಾಕಿ ನನಗೆ ಮಾರ್ಗದರ್ಶಿ ಇದ್ದಂತೆ' ಎಂದು ಭಾವುಕರಾದ ಹೀನಾ ಹೇಳುತ್ತಾರೆ.

ಹೀನಾ ಖಾನ್ ಯೇಹ್ ರಿಸ್ತಾ ಕ್ಯಾ ಕೆಹ್ಲಾತಾ ಹೈ ಹಾಗೂ ಕಸುತಿ ಝಿಂದಗಿ ಕೇ ದೊ ಸೀರಿಯಲ್‌ಗಳಿಂದ ಫೇಮಸ್ ಆಗಿದ್ದಾರೆ. ಜೊತೆಗೆ ಹಲವು ಫ್ಯಾಷನ್ ಶೋಗಳಲ್ಲಿ ಕೆಲಸ ಮಾಡಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net