ಹಿಮೋಗ್ಲೋಬಿನ್ ಪರಿಮಾಣದ ಪರೀಕ್ಷೆ

HUN-AUG-19-1(MYLAMBURU HPS PROGRAMME)
Published on

ಹುಣಸೂರು: ತಾಲೂಕಿನ ಗಾವಡಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಕರ್ನಾಟಕ ಆರೋಗ್ಯ ಸೇವಾವರ್ಧಕ ಸಂಸ್ಥೆ ಸಹಯೋಗದಲ್ಲಿ ಅನಿಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ ಯೋಜನೆಯಡಿ ಮೈಲಾಂಬೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ರಕ್ತದಲ್ಲಿ ಹಿಮೋಗ್ಲೋಬಿನ್(ಎಚ್‌ಬಿ ಪರ್ಸೆಂಟ್) ಪರಿಮಾಣದ ಪರೀಕ್ಷೆ ನಡೆಸಲಾಯಿತು.
ಶಾಲೆಯ ಆವರಣದಲ್ಲಿ ಸೋಮವಾರ ಆಯೋಜನೆಗೊಂಡಿದ್ದ ಶಿಬಿರದಲ್ಲಿ 50ಕ್ಕೂ ಹೆಚ್ಚು ಮಕ್ಕಳ ಎಚ್‌ಬಿ ಪರಿಮಾಣ ಗುರುತಿಸಲಾಯಿತು. ಈ ಸಂದರ್ಭ ಮಾತನಾಡಿದ ಹಿರಿಯ ಆರೋಗ್ಯ ನಿರೀಕ್ಷಕ ಎಚ್.ಬಿ.ಹನುಮಂತು, ವಿದ್ಯಾರ್ಥಿಗಳು ಊಟದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಸಿರು ತರಕಾರಿಗಳು, ಸೊಪ್ಪುಗಳನ್ನು ಸೇವಿಸುವುದು ಅಗತ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net