

ನವದೆಹಲಿ: ಹಿಮಾಚಲ ಪ್ರದೇಶದ ಬಿಜೆಪಿ ಸಂಸದ ರಾಮ್ ಸ್ವರೂಪ್ ಶರ್ಮಾ ಅವರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಅವರ ದೆಹಲಿ ನಿವಾಸದಲ್ಲಿ ಪತ್ತೆಯಾಗಿರುವುದಾಗಿ ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಸಂಸದರು ತಮ್ಮ ನಿವಾಸದಲ್ಲಿ ಬೆಳಗ್ಗೆ 7 ಸಮಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದು ಆತ್ಮಹತ್ಯೆಯೋ? ಎಂಬುದನ್ನು ತನಿಖೆ ನಡೆಸುತ್ತಿದ್ದೇವೆಂದು ಪೊಲೀಸರು ಹೇಳಿದ್ದಾರೆ.
ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಇಂದು ನಡೆಯಬೇಕಿದ್ದ ಸಂಸದೀಯ ಸಭೆಯನ್ನು ಬಿಜೆಪಿ ರದ್ದು ಮಾಡಿದೆ.
ರಾಮ್ ಸ್ವರೂಪ್ ಶರ್ಮಾ ಅವರು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಜಲ್ಪೆಹರ್ ಗ್ರಾಮದಲ್ಲಿ 1958, ಜೂನ್ 10ರಂದು ಜನಿಸಿದರು. ಶರ್ಮಾ ಅವರು ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.
ಶರ್ಮಾ ಅವರು 16 ಮತ್ತು 17ನೇ ಲೋಕಸಭೆಗೆ ಮಂಡಿ ಕ್ಷೇತ್ರದಿಂದ ಕ್ರಮವಾಗಿ 2014 ಮತ್ತು 2019ರಲ್ಲಿ ಆಯ್ಕೆಯಾಗಿದ್ದರು. (ಏಜೆನ್ಸೀಸ್)