ಕರು ಕಾಪಾಡಲು ಹೆಬ್ಬಾವನ್ನು ಹಿಂಸಿಸುತ್ತಿರುವ ಜನರು; ವಿಡಿಯೋ ನೋಡಿ ನೆಟ್ಟಿಗರು ಹೀಗೆಳಿದ್ದೇಕೆ.. | Viral Video

Untitled-design-11-1
Published on

ಧರ್ಮಶಾಲಾ: ಕರುವನ್ನು ನುಂಗಿದ ಹೆಬ್ಬಾವಿನಿಂದ ಬಿಡಿಸಲು ಜನರು ಒಟ್ಟಾಗಿ ಪ್ರಯತ್ನಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ವಿಡಿಯೋ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯದ್ದು ಎನ್ನಲಾಗಿದೆ.(VIral Video)

ವಿಡಿಯೋದಲ್ಲಿ ಇಬ್ಬರು ಹೆಬ್ಬಾವಿನ ಬಾಲವನ್ನು ಹಿಡಿದುಕೊಂಡು ಬಲವಾಗಿ ಅಲುಗಾಡುತ್ತಿರುವುದನ್ನು ನೋಡಬಹುದಾಗಿದೆ. ಹೆಬ್ಬಾವಿನ ದವಡೆಗಳು ತೆರೆದುಕೊಂಡಿದ್ದು, ಕರುವಿನ ದೇಹವನ್ನು ನಿಧಾನವಾಗಿ ಬಾಯಿಯಿಂದ ಹೊರಗೆ ತಳ್ಳಲಾಗಿದೆ. ಇಡೀ ಘಟನೆಯನ್ನು ವೀಕ್ಷಿಸುತ್ತಿರುವ ಗುಂಪಿನಲ್ಲಿ ಒಬ್ಬರು ವಿಡಿಯೋವನ್ನು ರೆಕಾರ್ಡ್​ ಮಾಡಿದ್ದಾರೆ. ಕರುವನ್ನು ಹೊರತೆಗೆಯಲು ಹಾವನ್ನು ಪದೇ ಪದೆ ನೆಲಕ್ಕೆ ಹೊಡೆಯುತ್ತಿದ್ದಾರೆ. ಹಲವು ನಿಮಿಷಗಳ ಕಾಲ ಹೀಗೆ ನೆಲಕ್ಕೆ ಬಡಿದ ಮೇಲೆ ವಿಡಿಯೋ ಕೊನೆಯಲ್ಲಿ ಹಾವು ತನ್ನ ಬಾಯಿಯಿಂದ ಕರುವನ್ನು ಹೊರ ಹಾಕುವುದನ್ನು ಕಾಣಬಹುದು. ಆದರೆ ಅಷ್ಟರಲ್ಲಾಗಲೆ ಕರು ಸತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್​ ವೈರಲ್​ ಆಗಿದ್ದು ಮಿಲಿಯನ್​​​ ವೀಕ್ಷಣೆಯನ್ನು ಪಡೆದುಕೊಂಡಿದೆ. ಆದರೆ ಹೆಚ್ಚಿನ ಜನರು ಸ್ಥಳೀಯರ ವರ್ತನೆಯನ್ನು ಟೀಕಿಸಿದ್ದಾರೆ. ಇದು ಪ್ರಕೃತಿ ವಿರುದ್ಧವಾಗಿದೆ. ಹೆಬ್ಬಾವಿನ ಕೊರಳಿಗೆ ಸಿಕ್ಕಿ ಉಸಿರುಗಟ್ಟಿ ಕರು ಅದಾಗಲೇ ಸತ್ತಿದ್ದು, ಹೆಬ್ಬಾವನ್ನು ಹೊಡೆದು ಏನು ಪ್ರಯೋಜನ. ಅವರು ಈಗಾಗಲೇ ಸತ್ತಿದ್ದ ಕರುವನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರಕೃತಿಯಲ್ಲಿ ಪ್ರತಿಯೊಂದು ಜೀವಿಯು ತನ್ನ ಆಹಾರಕ್ಕಾಗಿ ಬೇಟೆಯಾಡುವ ಹಕ್ಕನ್ನು ಹೊಂದಿ, ಈ ರೀತಿಯ ಹಸ್ತಕ್ಷೇಪ ತಪ್ಪು ಎಂದು ಕಾಮೆಂಟ್​ ಮಾಡಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net