

ಟೆಹ್ರಾನ್: ಸಾಮಾಜಿಕವಾಗಿ ಓಡಾಡುವ ಹೆಣ್ಣು ಮಕ್ಕಳಿಗೆ ಮಾತ್ರವಲ್ಲ, ಟಿವಿಯ ಕಾರ್ಟೂನ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮಹಿಳಾ ಪಾತ್ರಗಳಿಗೂ ಹಿಜಾಬ್ ಕಡ್ಡಾಯ ಎಂದು ಇರಾನ್ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಆದೇಶ ಹೊರಡಿಸಿದ್ದಾರೆ. ಈ ಆದೇಶ ಬಗ್ಗೆ ದೇಶದಲ್ಲಿ ಇದೀಗ ಭಾರೀ ಚರ್ಚೆ ಆರಂಭವಾಗಿದೆ.
ಕಾರ್ಟೂನ್ಗಳಲ್ಲಿ ಮಹಿಳಾ ಪಾತ್ರಗಳಿಗೆ ಹಿಜಾಬ್ ಹಾಕದಿದ್ದರೆ ತೊಂದರೆಯಾಗುತ್ತದೆ. ಆ ಕಾರಣಕ್ಕಾಗಿ ಹಿಜಾಬ್ ಹಾಕುವುದು ಕಡ್ಡಾಯ ಮಾಡಲಾಗುತ್ತಿದೆ ಎಂದು ಅಯತೊಲ್ಲಾ ಅಲಿ ಖಮೇನಿ ಹೇಳಿದ್ದಾರೆ. ಆದರೆ ಈ ಆದೇಶದಿಂದ ದೇಶದ ಹೆಣ್ಣು ಮಕ್ಕಳು ಕೆರಳಿ ಹಿಜಾಬ್ ತೊಡುವುದನ್ನೇ ಬಿಟ್ಟು ಬಿಡಬಹುದು ಎಂದು ಅನೇಕ ಚಿಂತಕರು ಕಳವಳ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಈ ವಿಚಾರ ಸದ್ಯ ಚರ್ಚೆಯಲ್ಲಿದೆ. ಕಾರ್ಟೂನ್ಗಳಲ್ಲೂ ಹಿಜಾಬ್ ಅವಶ್ಯಕತೆಯೇನು ಎಂದು ಅನೇಕರು ಪ್ರಶ್ನಿಸಲಾರಂಭಿಸಿದ್ದಾರೆ. ಈ ಆದೇಶ ಮುಂದೊಂದು ದಿನ ಸುಪ್ರೀಂ ನಾಯಕನಿಗೆ ಅತ್ಯಂತ ದೊಡ್ಡ ಮುಳ್ಳಾಗಲಿದೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ