ಕೇಂದ್ರ ಬಜೆಟ್​ 2020: ದೇಶದಲ್ಲಿ 9000 ಕಿ.ಮೀ.ಆರ್ಥಿಕ ಕಾರಿಡಾರ್​ ನಿರ್ಮಾಣ; ಮೂರು ವರ್ಷಗಳಲ್ಲಿ ದೆಹಲಿ-ಮುಂಬೈ ಎಕ್ಸ್​ಪ್ರೆಸ್ ವೇ ಪೂರ್ಣ

Delhi Mumbai 2 Feb 20
Published on

ನವದೆಹಲಿ: ಹೆದ್ದಾರಿಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ನಿರ್ಮಲಾ ಸೀತಾರಾಮನ್​ ಬಜೆಟ್​ನಲ್ಲಿ ಭರವಸೆ ನೀಡಿದ್ದಾರೆ.

ಹೆದ್ದಾರಿಗಳ ಸುಧಾರಣೆಗೆ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲಾಗುವುದು. 9000 ಕಿಮೀ ಆರ್ಥಿಕ ಕಾರಿಡಾರ್​, 2500 ಕಿ.ಮೀ.ಕರಾವಳಿ ರಸ್ತೆಗಳು ಹಾಗೂ 2000 ಕಿ.ಮೀ.ವ್ಯೂಹಾತ್ಮಕ (ಸ್ಟ್ರಾಟೆಜಿಕ್​ ಹೈವೇ) ಹೆದ್ದಾರಿಗಳನ್ನು ನಿರ್ಮಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್​ ತಿಳಿಸಿದ್ದಾರೆ.

ದೆಹಲಿ-ಮುಂಬೈ ಎಕ್ಸ್​ಪ್ರೆಸ್​ ವೇ ನಿರ್ಮಾಣ ಸೇರಿ ಒಟ್ಟು ಮೂರು ಹೆದ್ದಾರಿ ಯೋಜನೆಗಳು ಇನ್ನು ಮೂರು ವರ್ಷಗಳಲ್ಲಿ ಮುಕ್ತಾಯಗೊಳ್ಳುತ್ತವೆ. ಚೆನ್ನೈ ಹೆದ್ದಾರಿ ಯೋಜನೆಯ ಕೆಲಸ ಶೀಘ್ರದಲ್ಲೇ ಪ್ರಾರಂಭಗೊಳ್ಳಲಿದೆ ಎಂದು ಹೇಳಿದರು.

ದೇಶದ ಆರ್ಥಿಕತೆಯ ಬೆಳವಣಿಗೆಗೆ ಸುವ್ಯವಸ್ಥಿತ ಹೆದ್ದಾರಿಯ ಜಾಲ ಇರಬೇಕು ಎಂದು ಆರ್ಥಿಕ ಸಮೀಕ್ಷೆ ಶುಕ್ರವಾರ ಹೇಳಿದೆ. ಹಾಗೇ ಭಾರತದ ಹೆದ್ದಾರಿ ವಲಯದ ಅಭಿವೃದ್ಧಿಗೆ 2024-25ರ ವೇಳೆಗೆ ಸುಮಾರು 19.63 ಲಕ್ಷ ಕೋಟಿ ರೂಪಾಯಿ ಹೂಡಿಕೆ ಬೇಕು ಎಂದು ವರದಿ ನೀಡಿದೆ. (ಪಿಟಿಐ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net