ನಿಯಮದ ಪ್ರಕಾರ ರಸ್ತೆ ಮಾಡಲು ರೈತರ ಪ್ರತಿಭಟನೆ

22-RNR-04
Published on

ರಾಣೆಬೆನ್ನೂರ: ತಾಲೂಕಿನಲ್ಲಿರುವ ಹರಿಹರ&ಸಮ್ಮಸಗಿ ರಾಜ್ಯ ಹೆದ್ಧಾರಿ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಮಾಡಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ತಾಲೂಕಿನ ಇಟಗಿ ಗ್ರಾಮದ ಬಳಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ನೇತೃತ್ವ ವಹಿಸಿದ್ದ ರೈತ ಸಂದ ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ ಮಾತನಾಡಿ, ಹೆದ್ದಾರಿ ರಸ್ತೆಯನ್ನು ನಿಯಮ ಪ್ರಕಾರ ಮಾಡುತ್ತಿಲ್ಲ. ಇದರಿಂದ ಮುಂದಿನ ದಿನದಲ್ಲಿ ರಸ್ತೆ ಬೇಗ ಹಾಳಾಗಿ ತೊಂದರೆ ಉಂಟಾಗಲಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸರಿಯಾದ ರಸ್ತೆ ನಿರ್ಮಾಣ ಮಾಡಲು ಗುತ್ತಿಗೆದಾರರಿಗೆ ಸೂಚಿಸಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಬಂದ ಲೋಕೋಪಯೋಗಿ ಇಲಾಖೆ ಎಇಇ ಮರಿಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ಪ್ರಮುಖರಾದ ರವೀಂದ್ರಗೌಡ ಪಾಟೀಲ, ಚಂದ್ರಣ್ಣ ಬೇಡರ, ಮಾರುತಿ ಗುಡಿಯವರ, ಮಂಜಪ್ಪ ಶಿವಲಿಂಗಪ್ಪನವರ, ಬಸವರಾಜ ತಳವಾರ, ಹನುಮಂತಪ್ಪ ಉಕ್ಕುಂದ, ವೆಂಕರಡ್ಡಿ ಎರೇಶಿಮಿ, ಆನಂದ ದೇಶಗತ್ತಿ, ಹಾಲೇಶ ಕೆಂಚನಾಯ್ಕರ, ಮೌನೇಶ ಗುತ್ತಲ, ಸುರೇಶ ಮಲ್ಲಾಪುರ, ರುದ್ರಗೌಡ ಸಣ್ಣಗೌಡ್ರ, ಶಿವಣ್ಣ ಮಾಕನೂರ, ಭೀಮಣ್ಣ ಮಾಕನೂರು, ಹನುಮಂತಪ್ಪ ಬಾನುವಳ್ಳಿ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net