ಲಾಕ್​ಡೌನ್​ ಬಳಿಕ ತಿರುಮಲದಲ್ಲಿ ಗರಿಷ್ಠ ಕಾಣಿಕೆ: ಭಾನುವಾರ ಒಂದೇ ದಿನ 6,556 ಕೇಶಮುಂಡನ..

Tirumala vvani
Published on

ತಿರುಪತಿ: ಲಾಕ್​ಡೌನ್​ ಸಡಿಲಿಕೆ ಹಿನ್ನೆಲೆಯಲ್ಲಿ ಎಲ್ಲೆಡೆಯಂತೆ ತಿರುಪತಿ ತಿರುಮಲದಲ್ಲೂ ಧಾರ್ಮಿಕ ಚಟುವಟಿಕೆ ಸಹಜ ಸ್ಥಿತಿಗೆ ಮರಳುತ್ತಿದ್ದು, ಭಾನುವಾರವೊಂದೇ ದಿನ ಕಳೆದ ಕೆಲವು ದಿನಗಳಲ್ಲೇ ಅತ್ಯಧಿಕ ಎನ್ನುವಷ್ಟು ಕಾಣಿಕೆ ಸಂಗ್ರಹವಾಗಿದೆ.

ದೇವಸ್ಥಾನಕ್ಕೆ ಭಾನುವಾರ 20,228 ಭಕ್ತರು ಆಗಮಿಸಿದ್ದು, ಒಂದೇ ದಿನ 6,556 ಕೇಶಮುಂಡನ ನಡೆದಿದೆ. ಅದರಲ್ಲೂ 2.14 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದ್ದು, ಕರೊನಾ ಅವಧಿಯಲ್ಲಿ ಇದು ಇತ್ತೀಚಿಗಿನ ಅತ್ಯಧಿಕ ಕಾಣಿಕೆ ಮೊತ್ತ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿಕೊಂಡಿದೆ.

ನವರಾತ್ರಿ ಹಿನ್ನೆಲೆಯಲ್ಲಿ ಅಕ್ಟೋಬರ್​ 16ರಿಂದ 24ರ ವರೆಗೆ ಬ್ರಹೋತ್ಸವ ನಿಗದಿಯಾಗಿದ್ದು, ದೇವಸ್ಥಾನಕ್ಕೆ ಭಕ್ತರ ಆಗಮನದಲ್ಲಿ ಗಣನೀಯ ಹೆಚ್ಚಳ ಆಗಲಿದೆ ಎಂಬ ನಿರೀಕ್ಷೆಯನ್ನು ಆಡಳಿತ ಮಂಡಳಿ ಹೊಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net