ಯಂತ್ರ, ಶ್ರೀ ಪದ್ಧತಿಯಿಂದ ಹೆಚ್ಚು ಇಳುವರಿ

paddy farming
ಚಂದ್ರಗುತ್ತಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಮ್ಮಿಕೊಂಡಿದ್ದ ಯಂತ್ರ ಮತ್ತು ಶ್ರೀಸಾಲು ಭತ್ತ ನಾಟಿ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಸಂಘದ ಕೃಷಿ ಅಕಾರಿ ಜಟ್ಟಪ್ಪ ರೈತರಿಗೆ ಮಾಹಿತಿ ನೀಡಿದರು. ಕುಮಾರ್, ಲಲಿತಾ, ರೇಣುಕಾ ಶ್ರೀಧರ್, ರಘು ಇತರರಿದ್ದರು.
Published on

ಸೊರಬ: ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಯಂತ್ರದಿಂದ ವೈಜ್ಞಾನಿಕವಾಗಿ ಭತ್ತ ನಾಟಿ ಮಾಡಬಹುದು ಎಂದು ಧರ್ಮಸ್ಥಳ ಸಂಘದ ಕೃಷಿ ಅಕಾರಿ ಜಟ್ಟಪ್ಪ ಹೇಳಿದರು.

ತಾಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನಿಂದ ಮಂಗವಾರ ಆಯೋಜಿಸಿದ್ದ ಯಂತ್ರ ಮತ್ತು ಶ್ರೀಸಾಲು ಭತ್ತ ನಾಟಿ ಕಾರ್ಯಕ್ರಮದಲ್ಲಿ ರೈತರಿಗೆ ಮಾಹಿತಿ ನೀಡಿ ಮಾತನಾಡಿದ ಅವರು, ಇತ್ತೀಚೆಗೆ ರೈತರು ಕೂಲಿ ಕಾರ್ಮಿಕರ ಸಮಸ್ಯೆ ಎದುರಿಸುತ್ತಿದ್ದಾರೆ. ಶ್ರೀ ಪದ್ಧತಿ ಕೃಷಿಯಿಂದ ವೈಜ್ಞಾನಿಕವಾಗಿ ಯಂತ್ರದಿಂದ ಮೂಲಕ ಭತ್ತ ನಾಟಿ ಮಾಡುವುದರಿಂದ ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿ ಪಡೆಯಬಹುದು ಎಂದರು.
ಗ್ರಾಮದ ರಘು ಸ್ವಾದಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೃಷಿ ಚಟುವಟಿಕೆಗಳಿಗೆ ಅನುಗುಣವಾಗಿ ಯಂತ್ರದಿಂದ ವೈಜ್ಞಾನಿಕವಾಗಿ ಬೆಳೆ ಬೆಳೆಯಬಹುದು ಎನ್ನುವುದರ ಬಗ್ಗೆ ಕಾರ್ಯಕ್ರಮ ಆಯೋಜಿಸಿ ರೈತರಿಗೆ ಮಾಹಿತಿ ನೀಡುತ್ತಿರುವುದು ಶ್ಲಾಘನೀಯ ಎಂದರು.
ಗ್ರಾಮದ ಹಿರಿಯರಾದ ಸುನಂದಾ ದೇಸಾಯಿ ಮಾತನಾಡಿ, ಇತ್ತೀಚೆಗೆ ಯುವಜನರು ಪಟ್ಟಣ, ನಗರಗಳತ್ತ ಮುಖ ಮಾಡುತ್ತಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತಿದೆ. ಹಾಗಾಗಿ ಕೃಷಿ ಅವಲಂಬಿತ ಬದುಕಿಗೆ ಮೊದಲ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಧರ್ಮಸ್ಥಳ ಸಂಘದ ಮೇಲ್ವಿಚಾರಕ ಕುಮಾರ್, ಸೇವಾ ಪ್ರತಿನಿ ಲಲಿತಾ, ಮಹಿಳಾ ಮಂಡಳಿ ಅಧ್ಯಕ್ಷೆ ರೇಣುಕಾ ಶ್ರೀಧರ್, ಪ್ರಮುಖರಾದ ನಿರಂಜನ್ ಭಟ್, ನಾಗರಾಜ್, ರಾಮಣ್ಣ ಸ್ವಾದಿ, ರವಿ ಭಟ್, ಕೃಷ್ಣ ಭಟ್, ಪರಮೇಶ್, ಗಿರೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net