

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಹೈಟೆಕ್ ಸೆಕ್ಸ್ ದಂಧೆ ನಡೆಯುತ್ತಿದೆ ಎಂಬುದಕ್ಕೆ ಪುಷ್ಟಿ ನೀಡುವಂತೆ ಆಡಿಯೋವೊಂದು ವೈರಲ್ ಆಗಿದೆ.
ಪಿಂಪ್ಗಳಿಬ್ಬರು ಫೋನ್ನಲ್ಲಿ ಮಾತನಾಡಿರುವ ಸಂಭಾಷಣೆ ವೈರಲ್ ಆಗಿದ್ದು, ಅದರಲ್ಲಿ ಓರ್ವ ಯುವಕ ಮತ್ತು ಮಹಿಳೆ ಬರೀ ಸೆಕ್ಸ್, ಹಣ, ದಂಧೆ, ವ್ಯವಹಾರದ ಬಗ್ಗೆಯೇ ಮಾತನಾಡಿದ್ದನ್ನು ಕೇಳಬಹುದು. ಇವರಿಬ್ಬರೂ ಅಕ್ಕ-ತಮ್ಮ ಎಂದುಕೊಂಡು ಮಾತನಾಡಿದ್ದಾರೆ. ಈ ರೆಕಾರ್ಡ್ನಲ್ಲಿರುವ ಯುವಕ ಸೋಮಶೇಖರ್ ಎಂಬುದು ಗೊತ್ತಾಗಿದೆ. ಈತ ಬೃಹತ್ ಗೋಲ್ಡ್ ದೋಖಾ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿ. ಇದೀಗ ಸೆಕ್ಸ್ ದಂಧೆಯಲ್ಲಿ ತೊಡಗಿಕೊಂಡಿದ್ದಾನೆ. ಈ ಸಂಭಾಷಣೆ ಕೇಳಿದ ಪೊಲೀಸರೂ ಕೂಡ ತನಿಖೆ ಶುರು ಮಾಡಿದ್ದಾರೆ.
ತೋಟದ ಮನೆ, ಫಾರ್ಮ್ಹೌಸ್ಗಳಲ್ಲಿ ನಡೆಯುವ ಸೆಕ್ಸ್ ಬಗ್ಗೆ, ವಿಡಿಯೋ, ಸಿಡಿ ಮಾರಾಟದ ಬಗ್ಗೆಯೂ ಇವರಿಬ್ಬರು ಮಾತನಾಡಿದ್ದಾರೆ. ಕೆಲವು ಡೀಲಿಂಗ್ ಬಗ್ಗೆಯೂ ಮಾತನಾಡಿಕೊಂಡು, ಅದು ಎಲ್ಲ ಸರಿ ಆಗಿಬಿಟ್ಟರೆ ಕೈತುಂಬ ಹಣ ಎಂದು ಮಹಿಳೆ ಹೇಳುವುದನ್ನು ಕೇಳಬಹುದು. ಸೋಮಶೇಖರ್, ಪೂಜಾ, ಶೈಲಾ, ರಂಜಿತಾ ಇನ್ನಿತರ ಹೆಸರುಗಳು ದಂಧೆಯಲ್ಲಿ ಕೇಳಿಬಂದಿವೆ.
ಸೀರೆಯುಟ್ಟು ಸೆಕ್ಸಿ ಫೋಟೋಶೂಟ್ ಕೊಡುವವರು ಯಾರಾದರೂ ಇದ್ದರೆ ಹೇಳು ಎಂದು ಮಹಿಳೆ ಸೋಮಶೇಖರ್ ಬಳಿ ಕೇಳಿದ್ದೂ ಆಡಿಯೋದಿಂದ ಬಹಿರಂಗವಾಗಿದೆ. ಇವರಿಬ್ಬರ ಸಂಭಾಷಣೆ ಕೇಳಿದರೆ ಮಂಡ್ಯದಿಂದ ದೇಶ, ವಿದೇಶದವರೆಗೆ ಈ ಸೆಕ್ಸ್ ದಂಧೆಯ ಜಾಲ ಹಬ್ಬಿದೆಯಾ ಎಂಬ ಗುಮಾನಿ ಕಾಡುತ್ತಿದೆ.
ಇನ್ನು ಇವರಿಬ್ಬರು ಒಡವೆ ಅಡವಿಟ್ಟಿರುವ ಬಗ್ಗೆ, ಪಾರ್ಟಿ, ಮದುವೆ ಇನ್ನಿತರ ವಿಚಾರಗಳನ್ನೂ ಮಾತನಾಡಿದ್ದಾರೆ. ಮನೆಯಲ್ಲಿ ಸುಖ ಸಿಗದವರು ನಮ್ಮ ಬಳಿ ಬರುತ್ತಾರೆ, ನಮಗೆ ದುಡ್ಡು ಬೇಕು..ಅವರಿಗೆ ಸುಖ ಬೇಕು ಎಂಬಿತ್ಯಾದಿ ಬೋಲ್ಡ್ ಮಾತುಗಳನ್ನು ಮಹಿಳೆ ಆಡಿದ್ದಾರೆ. ಈ ಆಡಿಯೋದಿಂದ ಹಲವು ಸತ್ಯಗಳು ಬೆಳಕಿಗೆ ಬಂದಿದ್ದು, ಪೊಲೀಸರು ಈಗಾಗಲೇ ಜಾಡು ಹಿಡಿದು ತನಿಖೆ ಶುರು ಮಾಡಿದ್ದಾರೆ. ಅಲ್ಲದೆ ಮಂಡ್ಯ ಎಸ್ಪಿ ಕೆ.ಪರಶುರಾಮ್ ಅವರು ಸುದ್ದಿಗೋಷ್ಠಿ ನಡೆಸಿ, ಸೋಮಶೇಖರ್ ಜತೆಗಿರುವ ಮಹಿಳೆಯೂ ಮಂಡ್ಯ ಮೂಲದವರೇ ಎಂಬುದು ಗೊತ್ತಾಗಿದೆ. ಶೀಘ್ರವೇ ಪತ್ತೆ ಹಚ್ಚುತ್ತೇವೆ ಎಂದು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್)