

ಕೋಲಾರ: ಬಂಗಾರಪೇಟೆ ತಹಸೀಲ್ದಾರ್ ವೆಂಕಟೇಶಪ್ಪ ಅವರ ವರ್ಗಾವಣೆ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡುವ ಮೂಲಕ ಕಾರ್ಯನಿರ್ವಹಿಸಲು ಆದೇಶಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ತಹಸೀಲ್ದಾರ್ ಆಗಿದ್ದ ವೆಂಕಟೇಶಪ್ಪ ಅವರನ್ನು 2024ರ ಜು.3ರಂದು ಸರ್ಕಾರವು ಬಂಗಾರಪೇಟೆಗೆ ವರ್ಗಾವಣೆ ಮಾಡಿತ್ತು. ಅದರಂತೆ ಆಗಸ್ಟ್ 1ರಂದು ಅಧಿಕಾರವಹಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದರು.
ಅಧಿಕಾರವಹಿಸಿಕೊಂಡ ಐದು ತಿಂಗಳ ಪೂರ್ಣಗೊಳ್ಳುವ ಮುನ್ನವೇ 2024ರ ಡಿ.31 ರಂದು ಸರ್ಕಾರ ವರ್ಗಾವಣೆ ಮಾಡಿ ಆದೇಶಿಸಿತು. ಇದನ್ನು ಪ್ರಶ್ನಿಸಿ ಕರ್ನಾಟಕ ಆಡಳಿತ ಮಂಡಳಿ (ಕೆಐಟಿ)ಗೆ ವೆಂಕಟೇಶಪ್ಪ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಕೆಐಟಿ ತಡೆಯಾಜ್ಞೆ ನೀಡಿತ್ತು. ಆದರೆ, ಹಾಲಿ ತಹಸೀಲ್ದಾರ್ ಸುಜಾತಾ, ಆದೇಶ ಪ್ರಶ್ನಿಸಿ ಕೆಐಟಿಗೆ ಅರ್ಜಿ ಸಲ್ಲಿಸಿ ತಡೆಯಾಜ್ಞೆ ರದ್ದುಗೊಳಿಸುವಂತೆ ಕೋರಿದ್ದರು. ಅರ್ಜಿ ಪುರಸ್ಕರಿಸಿದ ಕೆಐಟಿಯು ವರ್ಗಾವಣೆ ಆದೇಶಕ್ಕೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿತ್ತು.
ಇದಕ್ಕೆ ವೆಂಕಟೇಶಪ್ಪ ಅವರು ಹೈಕೋರ್ಟ್ ಮೋರೆ ಹೋಗಿ ತಡೆಯಾಜ್ಞೆ ತೆರವುಗೊಳಿಸಲು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಪೀಠವು ಸರ್ಕಾರದ ವರ್ಗಾವಣೆ ಆದೇಶ ಮತ್ತು ಕೆಐಟಿ ನೀಡಿದ್ದ ಆದೇಶಕ್ಕೆ ಫೆ.21ರಂದು ತಡೆ ನೀಡಿದ್ದು, ಕರ್ತವ್ಯಕ್ಕೆ ಹಜರಾಗಲು ನಿರ್ದೇಶಿಸಿದೆ. ಇದರಿಂದಾಗಿ ವೆಂಟಕೇಶಪ್ಪ ಅವರು ಬುಧವಾರ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂಬುದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
* ಹೈಡ್ರಾಮವೇ ನಡೆದಿತ್ತು..!
ಕೆಐಟಿ ಆದೇಶದ ಮೇರೆಗೆ ವೆಂಕಟೇಶಪ್ಪ ಅವರು ಕರ್ತವ್ಯಕ್ಕೆ ಬಂಗಾರಪೇಟೆ ತಾಲೂಕು ಕಚೇರಿಗೆ ಹಾಜರಾದಾಗ ಹಾಲಿ ತಹಸೀಲ್ದಾರ್ ಕೆ.ಎನ್.ಸುಜಾತಾ ಅವರು ಅವಕಾಶ ಕೊಡದೆ ಮೂಮೆಂಟ್ ಆರ್ಡರ್ ತೋರಿಸುವಂತೆ ಒತ್ತಾಯಿಸಿದ್ದರು. ಅಲ್ಲದೆ ಕಚೇರಿಗೂ ಬೀಗ ಹಾಕಿದ್ದ ಟನೆ ನಡೆದಿತ್ತು, ಇದರ ಹಿನ್ನೆಲೆಯಲ್ಲಿ ಖುರ್ಚಿಗಾಗಿ ಇಬ್ಬರ ನಡುವೆ ಹೈಡ್ರಾಮವೇ ನಡೆದಿತ್ತು.
* ಅನುಮಾನಗಳಿಗೆ ಎಡೆ...?
ಕೆಜಿಎ್ ಕ್ಷೇತ್ರದಲ್ಲಿ 500ಕ್ಕೂ ಹೆಚ್ಚು ಮಂದಿಗೆ ಅಕ್ರಮ ಸಾಗುವಳಿ ಚೀಟಿ ನೀಡಿರುವ ಆರೋಪದಡಿ ಸುಜಾತಾ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಇದರ ಹಿನ್ನೆಲೆಯಲ್ಲಿ ಸಮಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು ಎ್ಐಆರ್ ದಾಖಲಾಗಿದ್ದು, ಕರ್ತವ್ಯದಿಂದ ಅಮಾನತುಪಡಿಸುವಂತೆ ಲೋಕಾಯುಕ್ತ ಪೊಲೀಸರು ಕಂದಾಯ ಇಲಾಖೆಯ ಪ್ರಾದೇಶಿದ ಆಯುಕ್ತರಿಗೆ (ಆರ್ಸಿ) ಶಿಾರಸು ಮಾಡಿದ್ದರು. ಸಾಗುವಳಿ ಚೀಟಿ ನೀಡಿರುವ ಸುಜಾತಾ ಕರ್ತವ್ಯದಲ್ಲಿ ಮುಂದುವರಿದರೆ ಸಾಕ್ಷ$್ಯ ನಾಶಪಡಿಸುವ ಸಾಧ್ಯತೆ ಇರುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಆದರೂ ಸುಜಾತಾ ಕರ್ತವ್ಯದಲ್ಲಿ ಮುಂದುವರಿದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಕೋಟ್...
ಹೈಕೋರ್ಟ್ನಲ್ಲಿ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ಸಿಕ್ಕಿದ್ದು, ಮೂಮೆಂಟ್ ಆರ್ಡರ್ ಸಮೇತ ಕರ್ತವ್ಯಕ್ಕತೆ ಹಾಜರಾಗುತ್ತೇನೆ.
- ವೆಂಕಟೇಶಪ್ಪ, ತಹಸೀಲ್ದಾರ್, ಬಂಗಾರಪೇಟೆ