ಹಿಜಾಬ್​ ಸಂಘರ್ಷಕ್ಕೆ ಇಂದು ಕೂಡ ಬೀಳಲಿಲ್ಲ ತೆರೆ, ಹೆಚ್ಚಾಯಿತು ನಾಳೆ ಏನಾಗಬಹುದು ಎಂಬ ಕೌತುಕ!

high court
Published on

ಬೆಂಗಳೂರು: ಹಿಜಾಬ್ ಧರಿಸಿ ತರಗತಿಗೆ ಹಾಜರಾಗುವ ವಿಚಾರವಾಗಿ ನಡೆಯುತ್ತಿರುವ ವಿವಾದ ಹಾಗೂ ಸಂಘರ್ಷಕ್ಕೆ ಸಂಬಂಧಿಸಿದಂತೆ ಇದ್ದ ಇಂದು ಏನಾಗಲಿದೆಯೋ ಎಂಬ ಕುತೂಹಲ ಕೊನೆಗೂ ತಣಿಯಲಿಲ್ಲ. ಬದಲಿಗೆ ನಾಳೆ ಏನಾಗಲಿದೆ ಎಂಬ ಕೌತುಕ ಹೆಚ್ಚಾಗಿದೆ.

ಹೌದು.. ಹಿಜಾಬ್​ ವಿಚಾರವಾಗಿ ಹೈಕೋರ್ಟ್​ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ಇಂದು ನಡೆದಿದೆ. ಇವತ್ತಿನ ವಿಚಾರಣೆ ವೇಳೆ ಏನಾದರೂ ಒಂದು ಸೂಚನೆ ಹೊರಬಿದ್ದು, ಸಂಘರ್ಷಕ್ಕೆ ಒಂದು ತಾತ್ಕಾಲಿಕ ತಡೆಯಾದರೂ ಸಿಕ್ಕೀತು ಎಂಬ ನಿರೀಕ್ಷೆ ಹಲವರಲ್ಲಿತ್ತು.

ಆದರೆ ಹೈಕೋರ್ಟ್ ಆ ಕುರಿತ ವಿಚಾರಣೆಯನ್ನು ನಾಳೆಗೆ ಮುಂದೂಡಿದ್ದರಿಂದ, ನಾಳೆ ಏನಾಗಲಿದೆ ಎಂಬ ಕೌತುಕ ಉಂಟಾಗಿದೆ. ಹಿಜಾಬ್ ಕುರಿತ ವಿಚಾರಣೆಯನ್ನೂ ನಾಳೆ 2.30ಕ್ಕೆ ಮುಂದೂಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net