1984ರ ಸಿಖ್​ ವಿರೋಧಿ ದಂಗೆಯಂತಹ ಹಿಂಸಾಚಾರ ಇನ್ನೊಮ್ಮೆ ನಡೆಯಲು ಯಾವ ಕಾರಣಕ್ಕೂ ಬಿಡಬಾರದು: ದೆಹಲಿ ಹೈಕೋರ್ಟ್​ ಸೂಚನೆ

Delhi Clash 26 Feb 20
Published on

ನವದೆಹಲಿ: ಕಳೆದ ಮೂರು ದಿನಗಳಿಂದ ಈಶಾನ್ಯ ದೆಹಲಿ ರಕ್ತಸಿಕ್ತವಾಗಿದೆ. ಸಿಎಎ ಪರ-ವಿರೋಧಿ ಬಣಗಳ ನಡುವಿನ ಸಂಘರ್ಷದಿಂದ ಉಂಟಾದ ಹಿಂಸಾಚಾರದಲ್ಲಿ ಇದುವರೆಗೆ ಜೀವ ಕಳೆದುಕೊಂಡವರು 22 ಮಂದಿ.

ಹಿಂಸಾಚಾರದ ಪ್ರಕರಣವನ್ನು ದೆಹಲಿ ಹೈಕೋರ್ಟ್​ ವಿಚಾರಣೆ ನಡೆಸುತ್ತಿದ್ದು, ಈಗಾಗಲೇ ಕಪಿಲ್​ ಮಿಶ್ರಾ ಆಡಿರುವ ಪ್ರಚೋದನಾಕಾರಿ ಭಾಷಣದ ಆಡಿಯೋವನ್ನು ಕೇಳಿಸಿಕೊಂಡಿದೆ.

ದೆಹಲಿಯಲ್ಲಿ ನಡೆಯುತ್ತಿರುವ ಸಿಎಎ ಸಂಬಂಧಪಟ್ಟ ಗಲಭೆಯನ್ನು ಸಹಿಸಿಕೊಳ್ಳುವುದಿಲ್ಲ. 1984ರಲ್ಲಿ ನಡೆದಿದ್ದ ಸಿಖ್​ ವಿರೋಧಿ ದಂಗೆಯಂತಹ ಹಿಂಸಾಚಾರ ಇನ್ನೊಮ್ಮೆ ನಡೆಯಲು ಕೋರ್ಟ್​ ಯಾವ ಕಾರಣಕ್ಕೂ ಅನುಮತಿ ನೀಡುವುದಿಲ್ಲ. ಗಲಭೆಯ ಮೇಲೆ ಕೋರ್ಟ್​ ಕಣ್ಗಾವಲು ಇಡಲು ಸಾಧ್ಯವಿಲ್ಲ. ಹಿಂಸಾಚಾರದಿಂದ ಹಾನಿಗೊಳಗಾದ ಪ್ರದೇಶಗಳಿಗೆ ದೆಹಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಭೇಟಿಕೊಡಬೇಕು. ಸಂತ್ರಸ್ತ ಜನರಲ್ಲಿ ಆತ್ಮವಿಶ್ವಾಸ ತುಂಬಬೇಕು ಎಂದು ಹೈಕೋರ್ಟ್ ಹೇಳಿದೆ.

ಅಲ್ಲದೆ, ಸಂತ್ರಸ್ತರಿಗಾಗಿ ಸಹಾಯವಾಣಿ ಕೇಂದ್ರ ತೆರೆಯಬೇಕು. ಗಾಯಾಳುಗಳನ್ನು ಸುರಕ್ಷಿತವಾಗಿ ಸಾಗಿಸಲು ಖಾಸಗಿ ಆಂಬುಲೆನ್ಸ್​ಗಳನ್ನು ಒದಗಿಸಬೇಕು. ಮನೆಯನ್ನು ಕಳೆದುಕೊಂಡವರಿಗೆ ಆಶ್ರಯಕೇಂದ್ರಗಳನ್ನು ನಿರ್ಮಿಸಿ, ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ದೆಹಲಿ ಆಡಳಿತಕ್ಕೆ ಸೂಚಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net