

ಬೈರುತ್: ಲೆಬನಾನ್ ರಾಜಧಾನಿ ಬೈರುತ್ನಲ್ಲಿ ಮಂಗಳವಾರ ಸಂಭವಿಸಿದ ಭಾರಿ ಸ್ಫೋಟದಲ್ಲಿ ಉಗ್ರ ಸಂಘಟನೆಯ ಕೈವಾಡವಿದೆ ಎಂಬ ಆರೋಪ ಕೇಳಿ ಬಂದಿದೆ.
ಕನಿಷ್ಠ 135 ಸಾವಿಗೀಡಾಗಿರುವ, 5,000ಕ್ಕೂ ಅಧೀಕ ಜನರು ಗಾಯಗೊಂಡಿರುವ ಹಾಗೂ ಅಪಾರ ಸಂಖ್ಯೆಯ ಜನರು ಕಾಣೆಯಾಗಿರುವ ಈ ಕೃತ್ಯದಲ್ಲಿ ಹಿಜ್ಬುಲ್ ಉಗ್ರ ಸಂಘಟನೆ ಕೈವಾಡವಿದೆ ಎಂದು ಆರೋಪಿಸಲಾಗಿದೆ.
ಲೆಬನಾನ್ನ ಪ್ರಮುಖ ರಾಜಕೀಯ ಪಕ್ಷವೊಂದರ ಮುಖಂಡರಿಂದಲೇ ಈ ಆರೋಪ ಕೇಳಿ ಬಂದಿದೆ. ಭ್ರಷ್ಟ ಸರ್ಕಾರವೂ ಕೂಡ ಇದರಲ್ಲಿ ಶಾಮೀಲಾಗಿದೆ ಎಂದು ಅವರು ಹೇಳಿದ್ದಾರೆ. ಹಿಜ್ಬುಲ್ಲಾ ಉಗ್ರರಿಗೆ ಲೆಬನಾನ್ ತವರಿದ್ದಂತೆ. ಶಸ್ತ್ರಾಸ್ತ್ರಗಳನ್ನು ವಸತಿ ಪ್ರದೇಶದಲ್ಲಿ ಅಡಗಿಸಿಟ್ಟಿದ್ಏ ಈ ದುರಂತಕ್ಕೆ ಕಾರಣ ಎಂಬ ಆರೋಪವೂ ಆರಂಭದಲ್ಲಿ ಕೇಳಿ ಬಂದಿತ್ತು.
ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಲೆಬನಾನ್ಗೆ ಈ ಸ್ಫೋಟ ಭಾರಿ ಹೊಡೆತ ನೀಡಿದೆ. ಇದರಿಂದಾಗಿ ಅಂದಾಜು 1.25 ಲಕ್ಷ ಕೋಟಿ ರೂ.ನಷ್ಟು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಈಗಾಗಲೇ ತನ್ನಾದಾಯದ 150 ಪಟ್ಟು ಸಾಲ ಮಾಡಿರುವ ಲೆಬನಾನ್ ವಿರುದ್ಧ ಜನರು ಸಿಡಿದೆದಿದ್ದಾರೆ. ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಸರ್ಕಾರವನ್ನು ಕಿತ್ತೊಗೆಯಬೇಕೆಂದು ಒತ್ತಾಯಿಸಿದ್ದಾರೆ.